ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಬಪ್ಪುಂಜಿ,ಕುದುರೆಗುಂಡಿ ಮತ್ತು ಮುತ್ತಿನ ಕೊಪ್ಪ ಸರ್ಕಾರಿ ಪ್ರೌಢಶಾಲೆಗಳ ಎಸ್ ಎಸ್ ಎಲ್ ಸಿ ಮಕ್ಕಳ ಫಲಿತಾಂಶವನ್ನು ಸುಧಾರಣೆ ಮಾಡುವ ಸಲುವಾಗಿ ನಗು ಫೌಂಡೇಶನ್ ಕಡೆಯಿಂದ ಸುಮಾರು 100 ಮಕ್ಕಳಿಗೆ ಉಚಿತ ಪಾಸಿಂಗ್ ಪ್ಯಾಕೇಜ್ ನೀಡಲಾಯಿತು. ಶಿಕ್ಷಕರಾದ ಸಿ ಆರ್ ಸುರೇಶ್ (ಚೌಡ್ಲಾಪುರ ಸೂರಿ) ರವರು ನಗು ಫೌಂಡೇಶನ್ ಪ್ರವರ್ತಕಾರದ ಶ್ರೀಮತಿ ದೀಪ್ತಿಯವರ ಕಾರ್ಯ ಗುಣವನ್ನು ಕೊಂಡಾಡಿದರು. ಈ ಸಂದರ್ಭದಲ್ಲಿ ಮೂರು ಶಾಲೆಯ ಶಿಕ್ಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.
