ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಲೇಖನ-ಕೀಳರಿಮೆ

ಮನುಷ್ಯರ ಸಂಬಂಧಗಳು ಈರುಳ್ಳಿ
ಇದ್ದ ಹಾಗೆ. ಅದು ಆಗಾಧವಾದ, ನಂಬಿಕೆ ಕಾಳಜಿ ಮತ್ತು ಪ್ರೀತಿ ಎಂಬ ಹಲವು ನವಿರಾದ ಪದರಗಳನ್ನು ಹೊಂದಿರುತ್ತದೆ. ಆ ಪದರಗಳನ್ನು ಹೊರ ತೆಗೆಯುವಾಗ ಜಾಗ್ರತೆಯಿಂದ ನೋಡಿಕೊಳ್ಳಬೇಕು. ಆಗ ನಮಗೆ ಈರುಳ್ಳಿಯ ಸವಿಯಾದ ರುಚಿ ಸಿಗುತ್ತದೆ. ಅದೇ ಆ ಪದರಗಳ ರುಚಿಯನ್ನು ಸವಿಯಲು ನಾವು ಅವುಗಳನ್ನು ಅವಸರವಾಗಿ ಕತ್ತರಿಸಲು ಪ್ರಯತ್ನಿಸಿದರೆ, ನಮಗೆ ನಮ್ಮ ಕಣ್ಣಲ್ಲಿ ಕಣ್ಣೀರು ಬರುವುದು ಬಿಟ್ಟು ಬೇರೇನೂ ಆಗುವುದಿಲ್ಲವೋ ಹಾಗೆಯೇ ಮಾನವನ ಮನಸ್ಸು ಶಾಂತವಾಗಿದ್ದರೆ ಮಾತ್ರ ಜೀವನದಲ್ಲಿ ಏನಾದರೂ ಒಂದು ಒಳ್ಳೆಯ ಕೆಲಸ ಮಾಡಲು ಸಾಧ್ಯ. ಜೊತೆಗೆ ಕೆಲಸದಲ್ಲಿ ಸ್ಪಷ್ಟತೆ ಇರುತ್ತದೆ. ಇನ್ನು ಆಲೋಚನೆ ಚೆನ್ನಾಗಿದ್ದರೆ ಎಲ್ಲವೂ ಸುಂದರವಾಗಿ ಕಾಣುತ್ತದೆ.
ಈ ನಿಟ್ಟಿನಲ್ಲಿ ಮನುಷ್ಯರ ಕೇಳರಿಮೆಯ ಕುರಿತು ಈ ಒಂದು ಲೇಖನದಲ್ಲಿ ಬರೆಯುವ ಪ್ರಯತ್ನ ಮಾಡಲಾಗಿದೆ. ಜೊತೆಗೆ ಕೀಳರಿಮೆ ಹೋಗಲಾಡಿಸುವ ನಿಟ್ಟಿನಲ್ಲಿ ಮನುಷ್ಯರ ಪ್ರಯತ್ನಗಳು ಸಾಗಲಿ ಎನ್ನುವ ಆಶಾಭಾವನೆ ಇಟ್ಟುಕೊಂಡು ಈ ಲೇಖನ ತಮ್ಮ ಎದುರಿಗೆ ಪ್ರಸ್ತುತ ಪಡಿಸುತ್ತಿದ್ದೇನೆ…

ಜೀವನದಲ್ಲಿ ಯಶಸ್ಸಿಗೆ ಶ್ರಮಿಸುವ ಪ್ರತಿಯೊಬ್ಬರಿಗೂ, ಬದಲಾಗದ ಎಡವಟ್ಟು ಮನಸ್ಸಿನ ಪ್ರಕ್ಷುಬ್ಧ ಬದಲಾವಣೆಗಳನ್ನು ಸಾಬೀತುಪಡಿಸುತ್ತದೆ ಅಶಿಸ್ತಿನ ಮನಸ್ಸು ಮನುಷ್ಯನನ್ನು ಗುಲಾಮನನ್ನಾಗಿ ಮಾಡುತ್ತದೆ ಮತ್ತು ಅವನ ಜೀವನವನ್ನು ಹಾಳುಮಾಡುತ್ತದೆ. ಅದನ್ನು ನಿಯಂತ್ರಿಸುವುದು ಮತ್ತು ನಿಗ್ರಹಿಸುವುದು ಸಂತೋಷವನ್ನು ಶ್ರದ್ಧೆಯಿಂದ ಹುಡುಕುವವರಿಗೆ ಸಮಸ್ಯೆಗಳ ಅತ್ಯಂತ ಕಿರಿಕಿರಿಯಾಗಿದೆ ಅನಿಸುತ್ತದೆ. ಮಾನವನ ಎಲ್ಲಾ ಜೀವಮಾನದ ಪ್ರಯತ್ನಗಳ ಹೊರತಾಗಿಯೂ, ಅವನು ನಿರಾಶೆಯನ್ನು ಪಡೆಯುತ್ತಾನೆ. ಎಲ್ಲೆಂದರಲ್ಲಿ ಉದ್ರೇಕ ಮತ್ತು ಸಂಕಟ ಮಾತ್ರ ಕಾಣಸಿಗುತ್ತದೆ. ನಿಜವಾದ ಶಾಶ್ವತ ಸಂತೋಷವು ಮನುಷ್ಯನೊಳಗೆ ಇರುತ್ತದೆ. ಮನಸ್ಸು ಸಂಪೂರ್ಣವಾಗಿ ಬಾಹ್ಯೀಕೃತವಾಗಿರುವುದರಿಂದ ಇದನ್ನು ಎಂದಿಗೂ ಗ್ರಹಿಸಲಾಗುವುದಿಲ್ಲ, ಎಲ್ಲಿಯವರೆಗೆ ಮನಸ್ಸು ಅವಿಶ್ರಾಂತವಾಗಿ ವಸ್ತುಗಳ ನಡುವೆ ಅಲೆದಾಡುತ್ತಿರುತ್ತದೆಯೋ, ಅಲ್ಲಿಯವರೆಗೆ ಏರಿಳಿತ, ಉತ್ಸಾಹ, ಉದ್ರೇಕ ಮತ್ತು ಅನಿಯಂತ್ರಿತವಾಗಿ, ಈ ನಿಜವಾದ ಸಂತೋಷವನ್ನು ಅರಿತುಕೊಳ್ಳಲು ಮತ್ತು ಆನಂದಿಸಲು ಸಾಧ್ಯವಿಲ್ಲ. ಪ್ರಕ್ಷುಬ್ಧ ಮನಸ್ಸನ್ನು ನಿಯಂತ್ರಿಸುವುದು ಮತ್ತು ಇನ್ನೂ ಎಲ್ಲಾ ಆಲೋಚನೆಗಳು ಮತ್ತು ಕಡುಬಯಕೆಗಳು ಮನುಷ್ಯನ ದೊಡ್ಡ ಸಮಸ್ಯೆಯಾಗಿದೆ. ಅವನು ಮನಸ್ಸನ್ನು ಅಧೀನಗೊಳಿಸಿದರೆ, ಅವನು ಚಕ್ರವರ್ತಿಗಳ ಚಕ್ರವರ್ತಿ ಮಹಾದೇವ ಆಗಬಹುದು.

ಅಂತೆಯೇ ಮಾನವ ಯಾವಾಗಲೂ ಬೇರೆಯವರೊಂದಿಗೆ ಹೋಲಿಸಿಕೊಳ್ಳುವುದು ಮಾನವರ ಸಹಜ ಸ್ವಭಾವ ಅದು ಹಣಕಾಸಿನ ವಿಷಯವಾಗಲಿ ಅಥವಾ ನಮ್ಮ ಜೀವನದ ಇನ್ನಿತರ ಇನ್ನಾವುದೋ ವಿಷಯದಲ್ಲೊ ಆಗಲಿ, ಒಂದಲ್ಲಾ ಒಂದು ವಿಷಯದಲ್ಲಿ, ಬೇರೆಯವರಲ್ಲಿರುವುದು ನಮ್ಮಲ್ಲಿ ಇಲ್ಲವೆಂದು , ಅನಾವಶ್ಯಕವಾಗಿ ಹೋಲಿಸಿಕೊಳ್ಳುತ್ತಲೇ
ಸದಾ ಕಾಲ ಇರುತ್ತೇವೆ, ಅಲ್ಲವೇ ! ಇದರಿಂದ ನಾವು ಅವರಿಗಿಂತ ಕೆಳಮಟ್ಟದಲ್ಲಿ ಇದ್ದೇವೆ ಎಂದು ಯಾವಾಗಲೂ ನಮ್ಮಲ್ಲಿಯೇ ನಾವು ಖೇದ ವ್ಯಕ್ತಪಡಿಸುತ್ತ, ಸಂಕಟಪಡುತ್ತೇವೆ.ಇದರಿಂದ ಸಹಜವಾಗಿಯೇ ನಮ್ಮಲ್ಲಿ ಕೀಳರಿಮೆ ಉಂಟುಮಾಡುತ್ತದೆ.
ಇದರಿಂದಲೇ ಮನುಷ್ಯ ಸದಾ ಕಾಲ ದುಃಖಿಯಾಗಿರುವುದು ಕಂಡುಬರುತ್ತದೆ.

ಹೀಗಾದಾಗ ಮಾತ್ರ ಮನುಷ್ಯರು ಎಂದೆಂದಿಗೂ ಶಾಂತಿ ಮತ್ತು ನೆಮ್ಮದಿಯಿಂದ ಇರಲು ಸಾಧ್ಯವೇ ಇಲ್ಲ. ಇಂತಹ ಮನಸ್ಥಿತಿಯಿಂದ ಹೊರಬರುವುದು ಸ್ವಲ್ಪ ಕಷ್ಟವೇ ಸರಿ.
ಆದರೂ ಸಹ ಈ ಒಂದು ಖಿನ್ನತೆಯಿಂದ ಹೊರಬರುವ ಪ್ರಯತ್ನ ಮಾಡಲೇಬೇಕು. ಆ ಪ್ರಯತ್ನ ಮಾಡಿದರೆ ಮಾತ್ರ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ.

ಬಂಧುಗಳೇ,
ಮೊದಲು ನಾವು ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುವುದನ್ನು ಬಿಡಬೇಕು. ಇನ್ನೊಬ್ಬರಲ್ಲಿ ಇರುವುದು ನನಗೂ ಬೇಕು ಎಂಬ ಸ್ವಾರ್ಥ ಭಾವನೆ ಮೊದಲು ಬಿಡಬೇಕು. ನಮ್ಮಲ್ಲಿರುವುದರಲ್ಲಿಯೇ ಸಂತೃಪ್ತಿಯ ಭಾವ ಪಡಬೇಕು. ನಾವು ಹೇಗಿದ್ದೆವೊ ಹಾಗೆಯೇ ಸಂತೋಷವಾಗಿದ್ದೇವೆ ಎಂಬ ಭಾವ ಮನಸ್ಸಿನಲ್ಲಿ ಸದಾ ಮೂಡಬೇಕು.
ಮನಸ್ಸಿನ ಭಾವನೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕೇ ಹೊರತು, ಮನಸ್ಸಿನ ಹಿಡಿತದಲ್ಲಿ ಮಾನವನ ಭಾವನೆ ಸಿಕ್ಕಿಹಾಕಿಕೊಳ್ಳಬಾರದು.

ಅಂದಹಾಗೆ ಮಾನವನ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಸಾಧ್ಯವಾದರೆ, ಆಗ ಯಾವುದೇ ಕ್ಷೋಭೆ ಅಥವಾ ದುಃಖ ಯಾವುದೇ ಮಾನವರ ಹತ್ತಿರವೂ ಸುಳಿಯುವುದಿಲ್ಲ. ಮನುಷ್ಯನ ದುಃಖಕ್ಕೆ ಮೂಲ ಕಾರಣ ಇನ್ನೊಬ್ಬರೊಂದಿಗೆ ಹೋಲಿಸಿಕೊಳ್ಳುವುದೇ ಪ್ರಮುಖ ಕಾರಣ ಆಗಿದೆ.ನಮ್ಮ ಮನಸ್ಸು ಪ್ರಫುಲ್ಲವಾಗಿ ಸಮಸ್ಥಿತಿಯಲ್ಲಿದ್ದರೆ ಆಗ ಇನ್ನಷ್ಟು ಕೆಲಸಗಳನ್ನು ಮಾಡುವುದಕ್ಕೆ ಸಾಧ್ಯ. ಏನಾದರೂ ಸಾಧನೆ ಮಾಡಲು ನಮ್ಮ ಮನಸ್ಸು ತಾನೇ ಪ್ರೇರೇಪಿಸುತ್ತದೆ. ಆದ್ದರಿಂದ ಮನಸ್ಸನ್ನು ಅನಾವಶ್ಯಕವಾಗಿ ಇನ್ನೊಬ್ಬರೊಂದಿಗೆ ಹೋಲಿಸಿಕೊಂಡು,ದುಃಖಿಸುತ್ತಾ ,
ಕ್ಷೋಭೆಗೊಳ್ಳಗಾಗುವುದು ಬಿಟ್ಟರೆ ಖಂಡಿತವಾಗಿಯೂ ಒಳ್ಳೆಯದಾಗುತ್ತದೆ. ಆಗ ಮಾನವ ಮಾಡುವ ಪ್ರತಿಯೊಂದು ಕೆಲಸವೂ ಸುಲಲಿತವಾಗಿ ಸಾಗುತ್ತವೆ, ಮನಸ್ಸು ಸದಾ ಹಗುರವಾಗಿ, ಹಸನ್ಮುಖಿ, ಕ್ರಿಯಾಶೀಲವಾಗುತ್ತದೆ.

ಇನ್ನು ಮನಸ್ಸು ಮಾನವನ ಹಿಡಿತದಲ್ಲಿ ಇರಬೇಕೆಂದರೆ, ನಾವು ಬೇಡದುದರ ಬಗ್ಗೆ ಯೋಚನೆ ಮಾಡುವುದನ್ನು ಸದಾ ಕಾಲ ನಿಲ್ಲಿಸಬೇಕು. ಬೇಡದ್ದನ್ನು‌ ಕನಸಿನಲ್ಲಿಯೂ ಯೋಚಿಸುವುದನ್ನು ಬಿಡಬೇಕು. ಇನ್ನೊಬ್ಬರೊಂದಿಗೆ ಹೋಲಿಕೆ ಮಾಡುವುದನ್ನು ಬಿಟ್ಟು, ನಮ್ಮಲ್ಲಿ ಇರುವುದರ ಬಗ್ಗೆ ತೃಪ್ತಿ ಪಡಬೇಕು, ಅನ್ಯರಿಗೆ ಕೇಡು ಬಯಸಬಾರದು.ಮತ್ತೊಬ್ಬರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು ಇನ್ನೊಬ್ಬರ ಸುಖದಲ್ಲಿ ಸಂತೋಷ ಕಾಣಬೇಕು ಅಂದಾಗಲೇ ಮಾತ್ರ ಮನಸ್ಸು ತನಗೆ ತಾನೇ ಸಮಾಧಾನ ಪಡುತ್ತದೆ. ಹಾಗೆಯೇ ಆಧ್ಯಾತ್ಮಿಕ ಕಡೆಗೆ ಸ್ವಲ್ಪ ಸಮಯವನ್ನು ಕೊಡುವಂತ ಕೆಲಸ ಮಾಡಬೇಕು.
ಆಧ್ಯಾತ್ಮಿಕ ಅರಿವು ಮಾನವನ ಬಾಳಿಗೆ ಸಂಜೀವಿನಿಯಾಗಿ ಕೆಲಸ ಮಾಡುತ್ತದೆ. ಶಾಂತಿ ನೆಮ್ಮದಿ ತರುತ್ತದೆ ವಿಶೇಷವಾಗಿ ಬಸವಾದಿ ಶರಣರು ಕೊಟ್ಟ ಸಮ ಸಮಾಜದ ತತ್ವ ಸಿದ್ಧಾಂತಗಳನ್ನು ಅರಿವುದು ಹಾಗೂ ಬಸವಣ್ಣವರು ಕೈಗೊಂಡಂತ ಹತ್ತು ಹಲವು ಸಮಾಜೋಧಾರ್ಮಿಕ ಕಾರ್ಯಗಳ ಕುರಿತು ಅಧ್ಯಯನ ಮಾಡಿದಾಗ ಇನ್ನಷ್ಟು ಮನಸ್ಸು ವಿಶಾಲವಾಗುತ್ತದೆ.
ಸಮಾಜ ಮುಖಿ ಕೆಲಸಗಳು ಮಾಡಲು ಸಹಕಾರಿಯಾಗುತ್ತದೆ.ಹೀಗೆ ಹಲವು ವೈಜ್ಞಾನಿಕ ಮತ್ತು ವೈಚಾರಿಕ ವಿಚಾರಗಳ ಚಿಂತನೆಗಳಿಂದ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು, ಕೀಳರಮೆಯಿದ ಹೊರಗೆ ಬರಬೇಕು.
ಸಮಾಜದ, ನಾಡಿನ ಉನ್ನತಿಗಾಗಿ ನಿಸ್ವಾರ್ಥ ಸೇವೆಯನ್ನು ಮಾಡಬೇಕು. ಮಾಡಿದಾಗ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ.
ಈ ಮೂಲಕ ಮನುಷ್ಯ ಯಾವಾಗಲೂ ಶಾಂತತೆಯಿಂದ ಇರಲು ಸಾಧ್ಯವಾಗುತ್ತದೆ.

ಸ್ವಾಭಿಮಾನದ ಬದುಕು:
ಮಾನವ ಪ್ರಕೃತಿಯ ಸೃಷ್ಟಿ. ಇತರರೊಡನೆ ಹೋಲಿಸಿಕೊಳ್ಳಲೇಬಾರದು, ನಾವು ನಾವೇ. ಇತರರು ಇತರರೇ. ಅವರಂತೆ ನಾವಾಗಬೇಕಿಲ್ಲ, ನಮ್ಮಂತೆ ಅವರಾಗಬೇಕಿಲ್ಲ, ನಮ್ಮನ್ನು ನಾವು ಸುಧಾರಿಸಿಕೊಳ್ಳಬಹುದು, ನಮ್ಮ ತಿಳುವಳಿಕೆಯನ್ನು, ಕೌಶಲಗಳನ್ನು , ಉತ್ತಮಪಡಿಸಿಕೊಳ್ಳಬಹುದು, ನಮ್ಮನಡೆ-ನುಡಿಗಳನ್ನು ಬದಲಿಸಬಹುದು, ಯಾವುದಾದರೂಂದು ವಿಷಯದಲ್ಲಿ ನಾವು ಸಾಧಕರಾಗಬಹುದು.

ಮಾನವ ವೇಷಭೂಷಣ ಅಲಂಕಾರವನ್ನು ಉತ್ತಮಪಡಿಸಿಕೊಳ್ಳಬಹುದು. ಮಾನವ ಮಾಡುವ ಕೆಲಸ, ಉದ್ಯೋಗವನ್ನು ಅಚ್ಚುಕಟ್ಟಾಗಿ , ಪ್ರಾಮಾಣಿಕವಾಗಿ, ಶ್ರದ್ಧೆಯಿಂದ ಮಾಡಿದರೆ ಇತರರು ಖಂಡಿತ ಮೆಚ್ಚುತ್ತಾರೆ, ಗೌರವಿಸುತ್ತಾರೆ. ಅದೇ ರೀತಿ ಮಾನವನ ಆಲೋಚನೆ – ಚಿಂತನೆ ಪಾಸಿಟಿವ್ ಆಗಿರಬೇಕು.ಇತರರಲ್ಲಿರುವ ಒಳ್ಳೆಯ ಗುಣಗಳನ್ನು ಕಂಡು ಹೆಮ್ಮೆಪಡಬೇಕು, ನಿನ್ನೆಗಿಂತ ಇಂದು, ಇಂದಿಗಿಂತ ನಾಳೆ ಉತ್ತಮವಾಗಬಲ್ಲೆ, ಸುಧಾರಿಸಬಲ್ಲೆ, ಎಂಬ ಭರವಸೆ ನಮ್ಮಲ್ಲಿರಬೇಕು, ಸರಳವಾಗಿ, ಸ್ಪಷ್ಟವಾಗಿ ಕೇಳುವವರಿಗೆ ಹಿತವಾಗುವಂತೆ ಮಾತನಾಡಲು ಪ್ರ್ಯಾಕ್ಟೀಸ್ ಮಾಡಬೇಕು. ಪ್ರೀತಿಯಿಂದ, ವಿನಯದಿಂದ ಮಾತನಾಡಬೇಕು. ಇಲ್ಲಿ ಯಾರೂ ಸರ್ವಜ್ಞರಲ್ಲ. ಅನುಭವಸ್ಥರ ಮಾತುಗಳನ್ನು ಕೇಳಿಸಿಕೊಳ್ಳಬೇಕು. ಪುಸ್ತಕದಲ್ಲಿ ದೊರೆಯುವ ವಿಪುಲ ಮಾಹಿತಿಗಳು ಮಾಹಿತಿಗಳನ್ನು ಪಡೆದುಕೊಂಡು ಜೀವನ ಕಳೆಯಬೇಕು.

ಇನ್ನು ಜಾತಿ /ವರ್ಗ / ಸ್ಥಾನ/ ಅಂತಸ್ತು ವಿಚಾರಗಳಿಗೆ ಹೆಚ್ಚು ಮಹತ್ವ ಕೊಡುವ ಕೆಲವು ಜನ ಇದ್ದೇ ಇರುತ್ತಾರೆ. ಅಂಥವರ ಟೀಕೆಗಳನ್ನು, ತಿರಸ್ಕಾರವನ್ನು, ನಿರ್ಲಕ್ಷಿಸಬೇಕು. ಒಳ್ಳೆಯ ಭಾವನೆಗಳು ನಮಗೂ ಹಿತ, ಇತರರಿಗೂ ಹಿತ ಕೊಡುತ್ತವೆ, ಹಾಗೂ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಪ್ರೀತಿ – ಸ್ನೇಹ – ದಯೆ – ಸಹಾನುಭೂತಿ, ಸಂತೋಷ, ಧೈರ್ಯ, ತಾಳ್ಮೆ ಇವುಗಳನ್ನು ಸದಾ ಕಾಲ ಜೀವನದಲ್ಲಿ ಉಪಯೋಗಿಸಿಕೊಳ್ಳಬೇಕು. ಒಳ್ಳೆಯ ಭಾವನೆಗಳು ವ್ಯಕ್ತಿತ್ವ ವಿಕಸನಕ್ಕೆ ಮೆರುಗನ್ನು ನೀಡುತ್ತವೆ. ಸ್ವಾಭಿಮಾನದ ಬದುಕಿಗೆ ಚೇತನ ಕೊಡುತ್ತವೆ.ಎಲ್ಲರಲ್ಲೂ ಏನಾದರೊಂದು ಒಂದು ಪ್ರತಿಭೆ ಇರುತ್ತದೆ. ನಮ್ಮಲ್ಲಿ ಏನು ಪ್ರತಿಭೆ ಇದೆ ಎಂದು ಗುರುತಿಸಿ ಬೆಳೆಸಿಕೊಳ್ಳಬೇಕು , ಸಮಯ ಸಂದರ್ಭ ಸಿಕ್ಕಾಗ ಅದು ಪ್ರದರ್ಶನ ಮಾಡಬೇಕು. ಅದರಿಂದ ಮಾನವನ ಸ್ವಾಭಿಮಾನದ ಜೀವನ ನೆಮ್ಮದಿಗೊಳಿಸುತ್ತದೆ.

ಕೊನೆಯ ಮಾತು :
ಈ ಜಗತ್ತಿನಲ್ಲಿ ಕಣ್ಣಿಲ್ಲದವರು, ಕಿವಿಇಲ್ಲದವರು, ಹಸಿದುಕೂತವರು, ಅನಾಥರು, ಅಸಹಾಯಕರು ಹೀಗೆ ಎಷ್ಟೊಂದು ಜನ ಬದುಕುತ್ತಿದ್ದಾರೆ ಅಲ್ಲವೇ!. ಇವರನ್ನು ನೋಡಿ ನಾವು ಬದುಕಬೇಕಲ್ಲವೇ !
ಒಳ್ಳೆಯ ಕೆಲಸ ಮಾಡಬೇಕಲ್ಲವೇ!
ಮೈ ತುಂಬ ಕೆಲಸಗಳನ್ನು ಹಾಕಿಕೊಳ್ಳಬೇಕು, ಹಾಕಿಕೊಂಡಾಗ ಅನ್ಯ ಕೆಟ್ಟ ವಿಷಯಗಳು ಮಾನವನ ಹತ್ತಿರ ಸುಳಿಯುವುದೇ ಇಲ್ಲ.
ಆಗ ಒಳ್ಳೆಯ ವಿಚಾರವನ್ನು ಯೋಚನೆ ಮಾಡಲು ಸಾಧ್ಯ. ಅದೇ ರೀತಿ ಒಳ್ಳೆ ಕೆಲಸ ಮಾಡಲು ಸಹ ಸಾಧ್ಯವಾಗುತ್ತದೆ.
ಎಲ್ಲರೊಂದಿಗೆ ಮುಕ್ತವಾಗಿ ಬೆರೆಯಿರಿ.ಆಗ ನೋಡಿ ಜೀವನ ಸಾಕು ಕೀಳರಿಮೆಯಿಂದ ಅಂದರೆ ಜಿಗುಪ್ಸೆಯಿಂದ ಹೊರಗಡೆ ಬರುತ್ತದೆ. ಮತ್ತಷ್ಟು, ಮಗದಷ್ಟು ಜೀವನದಲ್ಲಿ ಒಳ್ಳೆಯ ಕೆಲಸ ಮಾಡಬೇಕು ಸಹಕರಿಸುತ್ತದೆ.

-ಸಂಗಮೇಶ ಎನ್ ಜವಾದಿ
ಬರಹಗಾರರು, ಚಿಂತಕರು, ಹೋರಾಟಗಾರರು.
ಬೀದರ ಜಿಲ್ಲೆ.
9663809340.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ