ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ವನದೇವತೆಯ ಪುತ್ರಿ ಸಾಲು ಮರದ ತಿಮ್ಮಕ್ಕ

ಸಾಧಕರಾಗಲು ಶಿಕ್ಷಣದ ಅವಶ್ಯಕತೆ ಇಲ್ಲ ಹೃದಯವಂತಿಕೆ ಮತ್ತು ಏನಾದರೂ ಮಾಡಬೇಕೆಂಬ ಹಂಬಲ ಇದ್ರೆ ಸಾಕು ಸಾಧಕರು ಆಗಬಹುದು ಇದಕ್ಕೆ ಸಾಕ್ಷಿ ವೃಕ್ಷಮಾತೆ ಮತ್ತು ಪರಿಸರ ಪ್ರೇಮಿ ಸಾಲು ಮರದ ತಿಮ್ಮಕ್ಕ.
ಮಹಿಳಾ ಸಾಧಕಿಯರು ತುಂಬಾ ಜನ ಇದ್ದಾರೆ ಅಂಥವರಲ್ಲಿ ವೃಕ್ಷಮಾತೆ ಮತ್ತು ಪರಿಸರ ಪ್ರೇಮಿ ಸಾಲು ಮರದ ತಿಮ್ಮಕ್ಕ ಕೂಡಾ ಒಬ್ಬರು, ಸಾಲು ಮರದ ತಿಮ್ಮಕ್ಕ ಇವರು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಹುಟ್ಟಿ ಬೆಳೆದದ್ದು,ಇವರ ತಂದೆ ಚಿಕ್ಕರಂಗಯ್ಯ ಮತ್ತು ತಾಯಿ ವಿಜಯಮ್ಮ ಈ ದಂಪತಿಗಳ ಮುದ್ದಿನ ಮಗಳಾಗಿ ಬೆಳೆದರು ಚಿಕ್ಕ ವಯಸ್ಸಿನಿಂದಲೇ ಕಡು ಬಡ ಕುಟುಂಬದಲ್ಲಿ ಹುಟ್ಟಿದ ತಿಮ್ಮಕ್ಕ ಶಿಕ್ಷಣದಿಂದ ವಂಚಿತರಾಗಿದ್ದಾರೆ ಹೆಚ್ಚು ಓದಿಲ್ಲ ಅನ್ನೋ ಕಾರಣದಿಂದನೋ ಅಥವಾ ಅವರ ಹಣೆಬರಹವೋ ಎಂಬಂತೆ ಅಲ್ಲೇ ಹತ್ತಿರದಲ್ಲಿ ದಿನಗೂಲಿ ಕೆಲಸಕ್ಕೆ ಸೇರಿಕೊಂಡು ತಂದೆ ತಾಯಿಗೆ ಸಹಾಯ ಮಾಡುತ್ತಾ ಗಂಡು ಮಗನಂತೆ ದುಡಿದಳು ವಯಸ್ಸಿಗೆ ಬಂದಾಗ ತಿಮ್ಮಕ್ಕನವರಿಗೆ ಮದುವೆ ಮಾಡಬೇಕೆಂದು ತಮ್ಮ ತಂದೆ ತಾಯಿ ನಿರ್ಧಾರಿಸಿದಾಗ, ತಿಮ್ಮಕ್ಕನ ಕೈ ಹಿಡಿದು ತಮ್ಮ ಜೀವನ ಸಂಗಾತಿಯಾಗಿ ಮಾಡಿಕೊಂಡವರು ಚಿಕ್ಕಯ್ಯ ಎಂಬುವವರೇ ತಿಮ್ಮಕ್ಕನ ಪತಿ ಚಿಕ್ಕಯ್ಯನವರು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್ ಎಂಬ ಗ್ರಾಮದವರು ಆದರೆ ಈ ದಂಪತಿಗಳಿಗೆ ಮದುವೆ ಆಗಿ ಎಷ್ಟು ವರ್ಷಗಳಾದರೂ ಮಕ್ಕಳು ಆಗಲಿಲ್ಲ ಸಮಾಜ ಬಂಧು ಬಳಗದವರು ಅವರಿಗೆ ಮಕ್ಕಳು ಆಗಲಿಲ್ಲ ಎಂದು ಚುಚ್ಚು ಮಾತಾಡಿದಾಗ ಬೇಸರಗೊಂಡರು ಆದರೆ ತಿಮ್ಮಕ್ಕ ಜನರ ಚುಚ್ಚು ಮಾತುಗಳಿಗೆ ಕಿವಿ ಕೊಡಲಿಲ್ಲ ತಮಗೆ ಮಕ್ಕಳು ಆಗಲಿಲ್ಲ ಎಂದು ತಿಮ್ಮಕ್ಕ ಎಂದು ಎದೆಗುಂದಲಿಲ್ಲ ಮತ್ತು ಮಕ್ಕಳು ಆಗಲಿಲ್ಲವಲ್ಲ ಎಂದು ಕೊರಗುತ್ತಾ ಕುಳಿತುಕೊಳ್ಳಲಿಲ್ಲ ಬದಲಿಗೆ ಯಾವುದಾದರೂ ತಮ್ಮ ಕೆಲಸದಲ್ಲಿ ತೊಡಗಿಕೊಳ್ಳಲು ಪ್ರಾರಂಭಿಸಿದರು ಇಲ್ಲದ ವಸ್ತುವಿನ ಬಗ್ಗೆ ಆಲೋಚಿಸುವ ಮೊದಲು ಇದ್ದುದರಲ್ಲೇ ತನ್ನ ಪತಿಯೊಡನೆ ಸಂತೃಪ್ತಿಯ,ಜೀವನ ನಡೆಸುತ್ತಿದ್ದರು ಅವರ ಊರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಆಲದಮರ ಹೇರಳವಾಗಿ ಬೆಳೆಯುತ್ತಿತ್ತು ಅದನ್ನು ನೋಡಿದ ತಿಮ್ಮಕ್ಕನ ಮನಸಿನಲ್ಲಿ ಒಂದು ಆಲೋಚನೆ ಮೂಡಿತ್ತು ತನ್ನ ಆಲೋಚನೆಯನ್ನು ತಮ್ಮ ಪತಿಯ ಬಳಿ ಹೇಳಿಕೊಂಡಳು
ಚಿಕ್ಕಯ್ಯನವರು ತಮ್ಮ ಪತ್ನಿಯ ಆಲೋಚನೆಗೆ ಒಪ್ಪಿಕೊಂಡರು ಒಪ್ಪಿಗೆ ಪಡೆದುಕೊಂಡ ನಂತರ ತಮಗೆ ಮಕ್ಕಳಿಲ್ಲ ಎಂಬ ಕೊರಗನ್ನು ದೂರ ಮಾಡಲು ಇದೇ ಸರಿಯಾದ ದಾರಿ ಎಂದು ತಿಳಿದು ಚಿಕ್ಕಯ್ಯನವರು ಆಲದ ಗಿಡಗಳನ್ನು ನೆಡುವಲ್ಲಿ, ತಿಮ್ಮಕ್ಕನಿಗೆ ಜೊತೆಯಾದವರು ಮೊದಲು ಆಲದ ಮರದಿಂದ ಸಸಿಗಳನ್ನು ಕಸಿ ಮಾಡಿದರು ಮೊದಲ ವರ್ಷದಲ್ಲಿ ಹತ್ತು ಸಸಿಗಳನ್ನು ಕುಂದೂರು ಹಳ್ಳಿಯ ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿ ಆಲದ ಸಸಿಗಳನ್ನು ನೆಟ್ಟರು ಆದರೆ ಸಸಿಗಳನ್ನು ನೆಡಲು ತಮ್ಮ ಬಳಿ ಇದ್ದ ಸ್ವಂತ ಹಣವನ್ನೇ ಬಳಸಿದರು ಇಬ್ಬರು ಸೇರಿ ನಾಲ್ಕು ಕಿಲೋಮೀಟರ್ ದೂರದಿಂದ ಕೊಡಗಳಲ್ಲಿ ನೀರನ್ನು ಹೊತ್ತು ತಂದು ಸಸಿಗಳಿಗೆ ನೀರು ಉಣಿಸಿದರು ಇವರ ಈ ಕೆಲಸವನ್ನು ನೋಡಿ ಕೆಲವರು ನಕ್ಕರೆ ಇನ್ನೂ ಕೆಲವರು ಬುದ್ಧಿ ಹೇಳಿದರು ಯಾರ ಮಾತಿಗೂ ಕಿವಿ ಕೊಡದೆ ತಮ್ಮ ಕೆಲಸವನ್ನು ಮಾಡುತ್ತಾ ಯಾವುದೇ ರೀತಿಯ ಪ್ರತಿಫಲ ಬಯಸದೆ ಗಿಡ ಮರಗಳನ್ನು ನೆಟ್ಟು ಪೋಷಿಸುತ್ತಿದ್ದರು, ಇವರ ತಾಳ್ಮೆಗೆ ಪರೀಕ್ಷೆಯಂತೆ ಇವರಿಗೆ ದನ ಕರುಗಳಿಂದ ಸಮಸ್ಯೆ ಎದುರಾಯಿತು ಆದು ಏನೆಂದರೆ ಆಗಷ್ಟೇ ಚಿಗುರಿ ಬೆಳೆಯುತ್ತಿರುವ ಗಿಡಗಳನ್ನು ದನ ಕರುಗಳು ತಿನ್ನಲು ಹೋದಾಗ ಬೆಳೆದ ಗಿಡಗಳನ್ನು ದನ ಕರುಗಳಿಂದ ಸಂರಕ್ಷಿಸುವುದೇ, ಹರಸಾಹಸ ಪಡಬೇಕಾಯಿತು, ನಂತರ ಗಿಡಗಳಿಗೆ ಮುಳ್ಳಿನ ಪೊದೆ ಬೇಲಿಗಳನ್ನು ಹಾಕಿ ಗಿಡಗಳನ್ನು ಸಂರಕ್ಷಿಸಿದರು ಹೀಗೆ ಎರಡನೇ ವರ್ಷದಲ್ಲಿ ಹದಿನೈದು ಸಸಿಗಳನ್ನು ಮತ್ತು ಮೂರನೇ ವರ್ಷದಲ್ಲಿ ಇಪ್ಪತ್ತು ಗಿಡಗಳನ್ನು ನೆಡಿದರು, ಆದರೆ ಆದೇ ಸಮಯದಲ್ಲಿ ಇವರಿಗೆ ನೀರಿನ ಸಮಸ್ಯೆ ಎದುರಾಯಿತು ಸಸಿಗಳು ಬೆಳೆಯಲು ನೀರಿನ ಅವಶ್ಯಕತೆ ಇರುವುದರಿಂದ ಅವುಗಳನ್ನು ಹೆಚ್ಚು ಮುಂಗಾರು ಮಳೆಗಾಲದಲ್ಲಿ ಬೆಳೆಯಲು ನಿರ್ಧರಿಸಿದರು, ಹೀಗೆ ಇನ್ನೂರಕ್ಕು, ಹೆಚ್ಚು ಗಿಡಗಳನ್ನು ನೆಟ್ಟು ಅವುಗಳನ್ನೇ ತಮ್ಮ ಮಕ್ಕಳೆಂದು ತಿಳಿದು ಬೆಳೆಸುತ್ತಾ ಬಂದರು ಹಿಂದೆ ಇವರನ್ನು ನೋಡಿ ನಕ್ಕವರೆಲ್ಲ ಈಗ ಮೂಗಿನ ಮೇಲೆ ಬೆರಳಿಟ್ಟು ನೋಡುವಂತೆ ಅಚ್ಚರಿ ಪಡುವಂತೆ ಮಾಡಿದರು ಹೀಗೆ ಚಿಕ್ಕಯ್ಯ ಮತ್ತು ತಿಮ್ಮಕ್ಕ ಆಲದ ಮರಗಳನ್ನು ತಮ್ಮ ಮಕ್ಕಳು ಎಂದುಕೊಂಡೆ ಬೆಳೆಸಿದರು ಆದರ ಪೋಷಣೆಯಲ್ಲೇ, ಸಂತೃಪ್ತಿಯ ಜೀವನ ನಡೆಸಿದರು,1991ರಲ್ಲಿ,ತಿಮ್ಮಕ್ಕ ತಮ್ಮ ಬಾಳ ಸಂಗಾತಿಯಾದ ಚಿಕ್ಕಯ್ಯನವರನು ಕಳೆದುಕೊಂಡರು ತಮ್ಮ ಪತಿಯನ್ನು ಕಳೆದುಕೊಂಡಾಗ ತಿಮ್ಮಕ್ಕ ಸ್ವಲ್ಪ ದಿನಗಳವರೆಗೆ ದುಃಖಿಸಿದರು ಆದರೆ ತನ್ನ ಪತಿಯ ಅಗಲುವಿಕೆಯಿಂದ, ತಿಮ್ಮಕ್ಕನ ದುಃಖ ಜಾಸ್ತಿ ಆಯಿತೇ ವಿನಃ ಕಡಿಮೆ ಆಗಲಿಲ್ಲ ಆದರೆ ತನ್ನ ಪತಿ ತನ್ನೊಂದಿಗೆ ಇರುತ್ತಾರೆ ಎಂಬ ನಂಬಿಕೆಯಿಂದ ಮೊದಲಿನ ಹಾಗೆ ಗಿಡ ಮರಗಳನ್ನು ನೆಡಲು ಪ್ರಾರಂಭಿಸಿದಳು ಹಲವು ಕಡೆಗಳಲ್ಲಿ ಗಿಡಗಳನ್ನು ನೆಡುವ ಕಾರ್ಯದಲ್ಲಿ ತೊಡಗಿದಳು ತಮ್ಮ ಹಳ್ಳಿಯ ವಾರ್ಷಿಕ ಜಾತ್ರೆಗಾಗಿ ಮಳೆ ನೀರನ್ನು ಶೇಖರಿಸಲು ದೊಡ್ಡ ತೊಟ್ಟಿಯನ್ನು ನಿರ್ಮಿಸಿದರು ಮತ್ತು ಇತರೆ ಸಮಾಜ ಸೇವೆಯ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಳು ಹೀಗೆ ತಿಮ್ಮಕ್ಕನ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮತ್ತು ಹಲವು ಸಂಘ ಸಂಸ್ಥೆಗಳು ತಿಮ್ಮಕ್ಕನನ್ನು ಗೌರವಿಸಿ ಸನ್ಮಾನಿಸಿದ್ದಾರೆ, ತಿಮ್ಮಕ್ಕನಿಗೆ ಒಲಿದು ಬಂದ ಪ್ರಶಸ್ತಿಗಳು ಯಾವುವು ಎಂದರೆ ರಾಷ್ಟ್ರೀಯ ಪೌರ ಪ್ರಶಸ್ತಿ (1995)
ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ (1997)
ವೀರಚಕ್ರ ಪ್ರಶಸ್ತಿ(1997) ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರ ಇವರಿಂದ ಮಾನ್ಯತೆಯ ಪ್ರಮಾಣ ಪತ್ರ ಮತ್ತು ಭಾರತೀಯ ವೃಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಿಂದ ಶ್ಲಾಘನೀಯ ಪ್ರಮಾಣ ಪತ್ರ ಪಡೆದಿದ್ದಾರೆ, ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ(2000) ಗಾಡ್ ಪ್ರೀ ಫಿಲಿಪ್ ಧೀರತೆ ಪ್ರಶಸ್ತಿ(2006) ಪಂಪಾಪತಿ ಪರಿಸರ ಪ್ರಶಸ್ತಿ,ಬಾಬಾ ಸಾಹೇಬ್ ಅಂಬೇಡ್ಕರ್ ಪ್ರಶಸ್ತಿ, ವನಮಾತೆ ಪ್ರಶಸ್ತಿ, ಮಾಗಡಿ ವ್ಯಕ್ತಿ ಪ್ರಶಸ್ತಿ, ಶ್ರೀಮಾತಾ ಪ್ರಶಸ್ತಿ,ಎಚ್ ಹೊನ್ನಯ್ಯ ಸಮಾಜಸೇವಾ ಪ್ರಶಸ್ತಿ, ಕರ್ನಾಟಕ ಪರಿಸರ ಪ್ರಶಸ್ತಿ, ಮಹಿಳಾ ರತ್ನ ಪ್ರಶಸ್ತಿ, ನ್ಯಾಷನಲ್ ಸಿಟಿಜನ್ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಹೂವಿನಹೊಳೆ ಪ್ರತಿಷ್ಠಾನದ ವಿಶ್ವಾತ್ಮ ಪುರಸ್ಕಾರ, ಆರ್ಟ್ ಲಿವಿಂಗ್ ಸಂಸ್ಥೆಯಿಂದ ವಿಶಾಲಾಕ್ಷಿ ಪ್ರಶಸ್ತಿ, ನಾಡೋಜ ಪ್ರಶಸ್ತಿ (2010) ಪದ್ಮಶ್ರೀ ಪ್ರಶಸ್ತಿ (2019) ಹಾಗೂ ಇತರೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ ಹಲವು ಪ್ರಶಸ್ತಿಗಳನ್ನು ಪಡೆದ ಕೀರ್ತಿ ಇವರದ್ದು, ಇಷ್ಟೆಲ್ಲಾ ಸಾಧನೆ ಮಾಡಿದ ತಿಮ್ಮಕ್ಕನಿಗೆ ಭಾರತದಲ್ಲಿ ಹಲವಾರು ಕಡೆಗಳಲ್ಲಿ ಕಾಡು ಬೆಳೆಸುವ ಕಾರ್ಯಕ್ರಮಗಳಿಗೆ ತಿಮ್ಮಕ್ಕನವರನ್ನು ಆಹ್ವಾನಿಸುತ್ತಾರೆ, ಹೀಗೆ ತಿಮ್ಮಕ್ಕ ತನ್ನ ಸಮಾಜ ಸೇವೆಯ ಮೂಲಕ ದೇಶಕ್ಕೆ ಮಾದರಿಯಾಗಿದ್ದಾರೆ ತಿಮ್ಮಕ್ಕನನ್ನು ಒಬ್ಬ ಪ್ರಭಾವಿ ಮತ್ತು ಸ್ಪೂರ್ತಿಯ ಮಹಿಳೆ ಎಂದು ಕರೆದಿದ್ದಾರೆ, ಅಷ್ಟೇ ಅಲ್ಲ ಅಮೆರಿಕದ ಪರಿಸರ ಸಂಘಟನೆಯೊಂದು ಲಾಸ್ ಏಂಜಲೀಸ್ ಮತ್ತು ಓಕ್ ಲ್ಯಾಂಡ್ನಲ್ಲಿ ಇರುವ ತನ್ನ ಕೇಂದ್ರಕ್ಕೆ ತಿಮ್ಮಕ್ಕ ಪರಿಸರ ಶಿಕ್ಷಣ ಸಂಪನ್ಮೂಲ ಕೇಂದ್ರ ಎಂದು ಹೆಸರು ಇಟ್ಟಿದೆ, ಗಿಡಗಳನ್ನು ಮರಗಳನ್ನು ಕಡಿಯುವ ಮೊದಲು ಸಾಲು ಮರದ ತಿಮ್ಮಕ್ಕ ಇವರನ್ನು ನೋಡಿ ಕಲಿಯಬೇಕು ನಾವು ಕೂಡ ಗಿಡ ಮರಗಳನ್ನು ಬೆಳೆಸುವುದು ಮತ್ತು ಪರಿಸರವನ್ನು ರಕ್ಷಿಸುವುದನ್ನು,ಗಿಡ ಮರಗಳಿಂದ ಶುದ್ಧವಾದ ಗಾಳಿ ತಂಪಾದ ನೆರಳು ಸಿಹಿಯಾದ ಹಣ್ಣುಗಳು ಸಿಗುತ್ತವೆ ಅಷ್ಟೇ ಅಲ್ಲದೆ ಸಾಕಷ್ಟು ಪಕ್ಷಿಗಳಿಗೆ ಆಶ್ರಯ ತಾಣವಾಗಿವೆ ಆದರಿಂದ ಗಿಡ ಮರಗಳನ್ನು ಕಡಿಯದೇ ಗಿಡ ಮರಗಳನ್ನು ಬೆಳೆಸುವುದು ಉತ್ತಮ
ಹಸಿದವನಿಗೆ ಹಣ್ಣುದಣಿದವನಿಗೆ ನೆರಳು ಎಂಬಂತೆ ಎಲ್ಲಾ ಗಿಡ ಮರಗಳು ಪ್ರಾಣಿಗಳಿಗೆ ಮನುಷ್ಯರಿಗೆ ಪಕ್ಷಿಗಳಿಗೆ ಸಿಹಿಯಾದ ಹಣ್ಣುಗಳನ್ನು ತರಕಾರಿಗಳನ್ನು ಮತ್ತು ತಂಪಾದ ಗಾಳಿಯನ್ನು ನೀಡುತ್ತವೆ, ಅದಕ್ಕೆ
ಸಾಲು ಮರದ ತಿಮ್ಮಕ್ಕ ಇವರನ್ನು ನೋಡಿ ಕಲಿಯುವುದು ಬಹಳಷ್ಟಿದೆ ತಿಮ್ಮಕ್ಕನು ಆಲದ ಮರಗಳನ್ನು ರಸ್ತೆಯ ಇಕ್ಕೆಲಗಳಲ್ಲಿ ಸಾಲು ಸಾಲಾಗಿ ಬೆಳೆಸಿರುವುದರಿಂದ, ಸಾಲು ಮರದ ತಿಮ್ಮಕ್ಕ ಎಂದೇ ಪ್ರಸಿದ್ಧಿ ಪಡೆದಿದ್ದಾರೆ ಹಾಗೂ ವೃಕ್ಷಮಾತೆ ಮತ್ತು ಪರಿಸರ ಪ್ರೇಮಿ ಎಂಬ ಬಿರುದನ್ನು ಪಡೆದಿದ್ದಾರೆ
ತಿಮ್ಮಕ್ಕ ಗಿಡ ಮರಗಳನ್ನು ಬೆಳೆಸುವುದು ಮತ್ತು ಇತರೆ ಸಮಾಜ ಸೇವೆ ಮಾಡುವ ಮೂಲಕ ಹಲವು ಹೆಣ್ಣು ಮಕ್ಕಳಿಗೆ ಮಾದರಿ ಆಗಿದ್ದಾರೆ, ಸಾಧಕರಾಗಿ ಗುರುತಿಸಿಕೊಳ್ಳಲು ಶಿಕ್ಷಣ ಕಲಿತಿರಬೇಕು ಅಂತ ಏನಿಲ್ಲ ಸಾಧಕರಾಗಲು ಹೃದಯವಂತಿಕೆ ಮತ್ತು ಏನಾದರೂ ಮಾಡಬೇಕೆಂಬ ಹಂಬಲ ಒಂದು ಇದ್ರೆ ಸಾಕು ಸಾಧಕರು ಆಗಬಹುದು, ಅಷ್ಟೊಂದು ಮರಗಳನ್ನು ಬೆಳೆಸಿ ಪರಿಸರವನ್ನು ಉಳಿಸಿರುವ ತಿಮ್ಮಕ್ಕನನ್ನು ನಾನು ವನದೇವತೆಯ ಪುತ್ರಿ ಎಂದೇ ಕರೆಯುತ್ತೇನೆ, ತಿಮ್ಮಕ್ಕ ಇವರು ಶಿಕ್ಷಣ ಇಲ್ಲದೆ ಸಾಧಕರಾಗಿದ್ದು ನಿಜಕ್ಕೂ ಮೆಚ್ಚಲೇಬೇಕು ಗಿಡ ಮರಗಳನ್ನು ಬೆಳೆಸಬೇಕು ಎಂಬ ಇವರ ಅಲೋಚನೆಯೇ ತಿಮ್ಮಕ್ಕನನ್ನು ಸಾಧಕರನ್ನಾಗಿ ಮಾಡಿತು.

-ಹೆಚ್ ಲಿಂಗಮ್ಮ ಭೈರಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ