ಶಿವಮೊಗ್ಗ: ಕರ್ನಾಟಕ ರಸ್ತೆ ಸಾರಿಗೆ ನಿಗಮದ ಭದ್ರಾವತಿ ಬಸ್ ನಿಲ್ದಾಣದಿಂದ ಬೆಳಿಗ್ಗೆ 7:30 ರಿಂದ ಬೆಳಿಗ್ಗೆ 10 ಗಂಟೆ ಒಳಗೆ 15 ನಿಮಿಷಕ್ಕೆ ಒಂದರಂತೆ ಐದು ಬಸ್ಸುಗಳನ್ನು ವಿದ್ಯಾರ್ಥಿಗಳಿಗೆ ಶಿವಮೊಗ್ಗ ಬಸ್ ನಿಲ್ದಾಣದ ವರೆಗೆ ಬಸ್ ಹಾಕಲು ಕೋರಿ ಮನವಿ ಸಲ್ಲಿಸಲಾಯಿತು.
ಭದ್ರಾವತಿ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ಶಿವಮೊಗ್ಗ ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳಿಗೆ ಸಾಕಷ್ಟು KSRTC ಬಸ್ಸುಗಳ ಕೊರತೆ ಇದ್ದು ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಿದೆ, ಶಿವಮೊಗ್ಗ KSRTC. DC ರವರು ಬಸ್ ವ್ಯವಸ್ಥೆಯನ್ನು ಮಾಡಬೇಕೆಂದು ಅಖಿಲ ಕರ್ನಾಟಕ ಜ್ಯೋತಿ ಯುವ ಸಂಘಟನೆಯ ರಾಜ್ಯಾಧ್ಯಕ್ಷರು ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಶ್ರೀ BT ಜೀವನ್ ಅವರು ಒತ್ತಾಯಿಸಿದರು.
ಪ್ರತಿ ದಿನ ಭದ್ರಾವತಿ ಬಸ್ ನಿಲ್ದಾಣದಿಂದ ಶಿವಮೊಗ್ಗ ನಗರಕ್ಕ ಸುಮಾರು 600 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪ್ರತಿ ದಿನ ಬಸ್ ಮುಖಾಂತರ ವಿವಿಧ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 7:00 ಯಿಂದ ಆರಂಭವಾಗುವ ಬಸ್ ಬಂದರೂ KSRTC ಬಸ್ ಗಳು ಖಾಲಿ ಇಲ್ಲದೆ ಬಸ್ ಹತ್ತಲು ಆಗದೆ ವಿದ್ಯಾರ್ಥಿಗಳು ಭದ್ರಾವತಿ KSRTC ಬಸ್ ನಿಲ್ದಾಣದಲ್ಲಿ ಸಮಯವನ್ನು ಕಳೆಯುತ್ತಿದ್ದಾರೆ ಪ್ರತಿ ಬಸ್ಸುಗಳು ತುಂಬಾ ರಶ್ ಆಗಿರುವುದರಿಂದ ಬಸ್ ಹತ್ತಲು ವಿದ್ಯಾರ್ಥಿಗಳಿಗೆ ಆಗುತ್ತಿಲ್ಲ ಇದರಿಂದ ತುಂಬಾ ತೊಂದರೆಯಾಗಿ ಸರಿಯಾದ ಸಮಯಕ್ಕೆ ಕಾಲೇಜುಗಳಿಗೆ ಹೋಗಲಾಗದೆ ಪ್ರತಿ ನಿತ್ಯ ಒಂದು ಗಂಟೆ ವಿಳಂಬವಾಗಿ ಕಾಲೇಜಿಗೆ ಹೋಗಬೇಕಾದ ಸಂದರ್ಭ ಎದುರಾಗಿದೆ.
ಈ ಕಾರಣದಿಂದ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರಿಗೆ ಉತ್ತರಿಸಬೇಕಾದ ಸಮಸ್ಯೆ ವಿದ್ಯಾರ್ಥಿಗಳಿಗೆ ಬಂದಿದೆ ಕಾಲೇಜಿನ ಪ್ರಾಂಶುಪಾಲರು ನಮ್ಮನ್ನು ಕಾರಣವನ್ನು ಕೇಳುತ್ತಿದ್ದಾರೆ ನಮಗೆ ಪಾಠ ಪ್ರವಚನಗಳಲ್ಲಿ ಹಿನ್ನಡೆಯಾಗುತ್ತಿದೆ ಹಾಗೂ ವ್ಯಾಸಂಗದಲ್ಲಿ ಕುಂಠಿತವಾಗಿದೆ ಪರೀಕ್ಷೆಗಳ ಸಂದರ್ಭದಲ್ಲಿ ಬಹಳ ತೊಂದರೆಯಾಗುತ್ತಿದೆ ನಮ್ಮ ಸಮಸ್ಯೆಯನ್ನು ಭದ್ರಾವತಿ ksrtc ಅಧಿಕಾರಿಗಳಿಗೆ ಮೌಖಿಕವಾಗಿ ಮನವಿಯನ್ನು ಸಲ್ಲಿಸಿದರೂ ನಮ್ಮ ಸಮಸ್ಯೆ ಬಗ್ಗೆ ಪರಿಹಾರವನ್ನು ನೀಡಿರುವುದಿಲ್ಲ ಆದ್ದರಿಂದ ನಮ್ಮ ಮನವಿಗೆ KSRTC DC ರವರು ಸ್ಪಂದಿಸಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಿ ಭದ್ರಾವತಿ ಬಸ್ ನಿಲ್ದಾಣದಿಂದ ಬೆಳಿಗ್ಗೆ 7:00 ಯಿಂದ ಬೆಳಿಗ್ಗೆ 9:30ರ ಒಳಗೆ ಐದು ಬಸ್ಸುಗಳನ್ನು ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡಬೇಕು ಶಿವಮೊಗ್ಗದಿಂದ ಸಂಜೆ 4:00 ಯಿಂದ 5:30ರ ಒಳಗೆ 5 ಬಸ್ಸುಗಳ ವ್ಯವಸ್ಥೆಯನ್ನು ಮಾಡಬೇಕು ಹೊಳೆಹೊನ್ನೂರು – ಭದ್ರಾವತಿಗೆ 8:00 ಇಂದ 9:30ರ ಒಳಗೆ ಮೂರು ಬಸ್ಸುಗಳನ್ನು ಹಾಕಬೇಕು ಹಾಗೂ ಅರಕೆರೆಯಿಂದ ಭದ್ರಾವತಿಗೆ ಬೆಳಿಗ್ಗೆ 7:00 ಯಿಂದ 9:00 ಒಳಗೆ ಐದು ಬಸ್ಸುಗಳನ್ನು ಹಾಕಬೇಕು ಮತ್ತೆ ಕಾಲೇಜು ಮುಗಿಸಿ ವಾಪಸ್ ಹೋಗಲು 4:00 ಯಿಂದ 5:30ರ ಒಳಗೆ ಬಸ್ಸುಗಳ ವ್ಯವಸ್ಥೆ ಮಾಡಬೇಕು ನಮ್ಮ ಈ ಮನವಿಯನ್ನ ಸ್ಪಂದಿಸಿ ಬಸ್ಸುಗಳನ್ನು ಹಾಕುವ ಮೂಲಕ ಆದೇಶ ನೀಡಬೇಕೆಂದು ವಿನಂತಿಸಿಕೊಳ್ಳುತ್ತೇವೆ ಇಲ್ಲದಿದ್ದರೆ ಅಖಿಲ ಕರ್ನಾಟಕ ವಿದ್ಯಾರ್ಥಿ ಯುವ ಸಂಘಟನೆ ಬೆಂಗಳೂರು ರಾಜ್ಯಾಧ್ಯಕ್ಷರಾದ ಶ್ರೀ ಬಿ ಟಿ ಜೀವನ್ ಅವರೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಭದ್ರಾವತಿ ಬಸ್ ನಿಲ್ದಾಣದಲ್ಲಿ ದಿನಾಂಕ 30/11/2024 ರ ಶನಿವಾರ ಬೆಳಿಗ್ಗೆ 9:00 ಗಂಟೆಗೆ ಬಸ್ಸುಗಳನ್ನು ತಡೆದು ಉಗ್ರ ಹೋರಾಟವನ್ನು ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದ್ದೇವೆ ಎಂದು ಅಖಿಲ ಕರ್ನಾಟಕ ವಿದ್ಯಾರ್ಥಿ ಯುವ ಸಂಘಟನೆ ಬೆಂಗಳೂರು ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-ಕರುನಾಡ ಕಂದ