ರಾಯಚೂರು ಜಿಲ್ಲೆಯ ಸಿಂಧನೂರು ನಗರ ಸಭೆಯ ವಾರ್ಡ್ ನಂ- 06ಕ್ಕೆ ನಡೆದ ಉಪ ಚುನಾವಣೆಯಲ್ಲಿ ಮತ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ಉಮೇರಾ ತಬಸ್ಸುಮ್ ಗಂ. ಅಮಜದ್ ಖಾನ್ ಗೆಲುವು ಸಾಧಿಸಿದ್ದಾರೆ ಎಂದು ತಹಶೀಲ್ದಾರ ಅರುಣ ಹೆಚ್.ದೇಸಾಯಿ ತಿಳಿಸಿದರು.
ಅವರು ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡುತ್ತಾ, ಹಿಂದಿನ ಸದಸ್ಯರಾದ ಹುಸೇನಬಿ ಇವರು ನಿಧನ ಹೊಂದಿದ ಪ್ರಯುಕ್ತ ಒಂದು ಸ್ಥಾನಕ್ಕೆ ಇದೇ
ದಿ. 23-11-2024ರಂದು ಉಪ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಉಮೇರಾ ತಬಸ್ಸುಮ್ ಗಂ. ಅಮಜದ್ ಖಾನ್, ಬಿಜೆಪಿಯಿಂದ ಕಾವೇರಿ ಅಮರೇಶ ಸ್ಪರ್ಧಿಸಿದ್ದರು.
ಚಲಾವಣೆಯಾದ ಒಟ್ಟು 1290 ಮತಗಳ ಪೈಕಿ, ಉಮೇರಾ ತಬಸ್ಸುಮ್ ಗಂ. ಅಮಜದ್ ಖಾನ್ ಅವರು 1007, ಕಾವೇರಿ ಅಮರೇಶ ಅವರಿಗೆ 278 ಮತಗಳನ್ನು ಪಡೆದರೆ, 05-ಮತಗಳು ನೋಟಾಕ್ಕೆ ದಾಖಲಾಗಿವೆ. ಕಾಂಗ್ರೆಸ್ ಅಭ್ಯರ್ಥಿ ಉಮೇರಾ ತಬಸ್ಸುಮ್ ಅವರು 729 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ವೀರೇಶ ಗೋನವಾರ ತಿಳಿಸಿದರು.
ಮತ ಎಣಿಕೆ:
ಇಂದು ಬೆಳಿಗ್ಗೆ 8.15ಕ್ಕೆ ಆರಂಭವಾದ ಮತ ಎಣಿಕೆ ಕಾರ್ಯ ಬೆಳಿಗ್ಗೆ 8.40ಕ್ಕೆ ಮುಕ್ತಾಯವಾಯಿತು.
ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ರಾಮದಾಸ, ಚುನಾವಣಾ ಶಾಖೆಯ ರಾಜಾಭಕ್ಷಿ, ಎಣಿಕೆ ಮೇಲ್ವಿಚಾರಕರಾಗಿ ಕಂದಾಯ ಇಲಾಖೆಯ ಉಪ ತಹಶೀಲ್ದಾರ್ ಹೆಚ್.ಎಸ್.ಮಿಶ್ರಿಕೋಟಿ, ಎಣಿಕೆ ಸಹಾಯಕರಾದ ಹನುಮೇಶ, ಮಲ್ಲಿಕಾರ್ಜುನ ಸೇರಿದಂತೆ ಇತರರು ಹಾಜರಿದ್ದರು.
ಬಂದೋಬಸ್ತ್:
ಶಹರ ಪೊಲೀಸ್ ಠಾಣೆಯ ಪಿ.ಎಸ್.ಐ ಬಸವರಾಜ ಇವರ ನೇತೃತ್ವದಲ್ಲಿ ಹೆಡ್ ಕಾನ್ಸ್ಟೇಬಲ್ ಸೋಮನಗೌಡ, ಪೇದೆಗಳಾದ ಮಂಜುನಾಥ, ಉಪೇಂದ್ರ, ಅಮರೇಶ ತಹಶೀಲ್ದಾರ್ ಕಛೇರಿಯ ಮತ ಎಣಿಕೆ ಕೇಂದ್ರಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್ ನೀಡಲಾಗಿತ್ತು.