ವಿಜಯನಗರ: ದೂರುದಾರರಾದ ಶ್ರೀ ಗವಿಸಿದ್ದಯ್ಯ ಹಿರೇಮಠ್ ರವರಿಗೆ ಸಂಬಂಧಿಸಿದ ಕಾರ್ ನ್ನು ಹೆಚ್.ಬಿ.ಹಳ್ಳಿ ಜೆಸ್ಕಾಂ ಇಲಾಖೆಗೆ ಮಾಸಿಕ ಬಾಡಿಗೆ ರೂಪದಲ್ಲಿ ಪಡೆದುಕೊಳ್ಳಲು ಆದೇಶವನ್ನು ನೀಡುವ ಸಲುವಾಗಿ ರೂ :10,000/- ಲಂಚದ ಹಣವನ್ನು ಸ್ವೀಕರಿಸುವಾಗ ಹೊಸಪೇಟೆ ಲೋಕಾಯುಕ್ತರ ಬಲೆಗೆ ಬಿದ್ದ ಹೆಚ್.ಬಿ.ಹಳ್ಳಿಯ ಕಾರ್ಯನಿರ್ವಾಹಕ ಅಭಿಯಂತರರು ಹುಸೇನ್ ಸಾಬ್.
ಹೊಸಪೇಟೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದಿನಾಂಕ: 27/11/2024 ರಂದು ಪಿರ್ಯಾದಿ ಶ್ರೀ ಗವಿಸಿದ್ದಯ್ಯ ಹಿರೇಮಠರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಪ್ರಕಾರ ಪಿರ್ಯಾದಿದಾರರು ತಮ್ಮ ಫೋರ್ಡ ಪಿಗೋ ಕಾರನ್ನು ಮಾಸಿಕ ಬಾಡಿಗೆ ರೂಪದಲ್ಲಿ ಮದಕರಿ ಟೂರ್ಸ್ & ಟ್ರಾವೆಲ್ಸ್, ಹೊಳೆ ಮುದ್ಲಾಪುರ ಗ್ರಾಮ, ಕೊಪ್ಪಳ ಜಿಲ್ಲೆಯ ಖಾಸಗಿ ಏಜೆನ್ಸಿ ಮೂಲಕ ಇಇ ಜೆಸ್ಕಾಂ, ಹಗರಿಬೊಮ್ಮನಹಳ್ಳಿರವರ ಕಛೇರಿಗೆ ಕಳೆದ ಮೂರು ವರ್ಷಗಳಿಂದ ನೀಡುತ್ತಾ ಬಂದಿದ್ದು, ಸದರಿ ಕಾರ್ ನ ಒಪ್ಪಂದದ ಅವಧಿಯು ದಿನಾಂಕ: 30/09/2024 ಕ್ಕೆ ಮುಗಿದ ಕಾರಣ ಮರಳಿ ತಮ್ಮ ಕಾರನ್ನು ಮಾಸಿಕ ಬಾಡಿಗೆ ಆಧಾರದ ಮೇಲೆ ಮುಂದುವರೆಸುವ ಸಲುವಾಗಿ ಪಿರ್ಯಾದಿದಾರರು ದಿ. 11/11/2024 ರಂದು ಮದಕರಿ ಟೂರ್ಸ್ & ಟ್ರಾವೆಲ್ಸ್, ಹೊಳೆ ಮುದ್ಲಾಪುರ ಗ್ರಾಮ, ಕೊಪ್ಪಳ ಜಿಲ್ಲೆಯ ಖಾಸಗಿ ಏಜೆನ್ಸಿ ಮೂಲಕ ಮರಳಿ ಇ.ಇ ಜೆಸ್ಕಾಂ, ಹಗರಿಬೊಮ್ಮನಹಳ್ಳಿರವರಿಗೆ ಅರ್ಜಿಯನ್ನು ಸಲ್ಲಿಸಿದ್ದು ಸದರಿ ಕಾರನ್ನು ಮಾಸಿಗೆ ಬಾಡಿಗೆ ರೂಪದಲ್ಲಿ ಪಡೆದುಕೊಳ್ಳಲು ಆದೇಶವನ್ನು ನೀಡುವಂತೆ ದಿನಾಂಕ: 26/11/2024 ರಂದು ಪಿರ್ಯಾದಿದಾರರು ಶ್ರೀ ಹುಸೇನ್‍ಸಾಬ್, ಇಇ ಜೆಸ್ಕಾಂ ವಿಭಾಗೀಯ ಕಛೇರಿ, ಹಗರಿಬೊಮ್ಮನಹಳ್ಳಿರವರನ್ನು ಭೇಟಿ ಮಾಡಿದಾಗ ಸದರಿಯವರು ಪಿರ್ಯಾದಿ ಮತ್ತು ಪಿರ್ಯಾದಿ ಸ್ನೇಹಿತನ ಕಾರು ಸೇರಿದಂತೆ ಒಟ್ಟು: 10,000/- ಗಳನ್ನು ನೀಡಿದ್ದಲ್ಲಿ ಆದೇಶವನ್ನು ನೀಡುವುದಾಗಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, ಸದರಿ ಲಂಚದ ಹಣವನ್ನು ನೀಡಲು ಇಷ್ಟವಿಲ್ಲದೆ ಈ ದಿನ 27.11.2024 ರಂದು ದೂರು ನೀಡಿದ್ದು, ಸದರಿ ದೂರಿನ ಮೇರೆಗೆ ಹೊಸಪೇಟೆ ಲೋಕಾಯುಕ್ತ ಠಾಣಾ ಗುನ್ನೆ ನಂ: 06/2024 ರೀತ್ಯಾ ಪ್ರಕರಣ ದಾಖಲಿಸಿ, ಪೊಲೀಸ್ ಉಪಾಧೀಕ್ಷಕರಾದ ಶ್ರೀ ಶೀಲವಂತ ಹೊಸಮನಿ, ಪೊಲೀಸ್ ನಿರೀಕ್ಷಕರಾದ ಶ್ರೀ ರಾಜೇಶ ಎಸ್. ಲಮಾಣಿ, ಸಿಬ್ಬಂದಿಯವರಾದ ಸುಭಾಷ. ಸುರೇಶ, ಶ್ರೀನಿವಾಸ, ರೇಣುಕಪ್ಪ. ಕುಮಾರ ನಾಯ್ಕ್ ಚನ್ನಬಸಪ್ಪ ಮತ್ತು ಕ್ರಿಷ್ಣ ರವರು ದಾಳಿ ಮಾಡಿದ್ದು, ದಾಳಿಯ ವೇಳೆಯಲ್ಲಿ ಶ್ರೀ ಹುಸೇನ್ ಸಾಬ್, ಕಾರ್ಯನಿರ್ವಾಹಕ ಅಭಿಯಂತರರು ರವರು ರೂ. 10,000/-ಗಳ ಲಂಚದ ಹಣವನ್ನು ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದು, ಸದರಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಜೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಾದ ಹುಸೇನ್ ಸಾಬ್ ರವರನ್ನು ದಸ್ತಗಿರಿ ಮಾಡಿ ಮುಂದಿನ ಕ್ರಮ ಕೈಗೊಂಡಿದೆ.