ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪನೋರಮ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸೊರಬದ ರಾಜ್ ಗುರು ಅವರ “ಕೆರೆ ಬೇಟೆ”..

ಕನ್ನಡ ಸಿನಿಮೋಧ್ಯಮದ ಸುಧೀರ್ಘ ಪಯಣದಲ್ಲಿ ಬೆಂಗಳೂರು ಮತ್ತು ಮಂಡ್ಯ ಸುತ್ತಲಿನ ಪ್ರದೇಶದ ಭಾಷೆ ಸಂಸ್ಕೃತಿಯ ಸಿನಿಮಾಗಳದ್ದೇ ಸಿಂಹಪಾಲು. ಆಗೀಗ ಕರಾವಳಿ, ಮಲೆನಾಡು ,ಕಲ್ಯಾಣ ಕರ್ನಾಟಕ, ಹುಬ್ಬಳ್ಳಿ ಭಾಗದ ಕಥೆಗಳ ಸಿನಿಮಾ ಬಂದಿದ್ದು ಇದೆ. ಆದರೆ ವಿವಿಧ ಜಿಲ್ಲೆಯಲ್ಲಿರುವ ತಳ ಸಮುದಾಯಗಳ ಬದುಕು ಬವಣೆಗಳ ಕಥೆಗಳು ವಿರಳ. ಅದರಲ್ಲೂ ಶಿವಮೊಗ್ಗದ ವ್ಯಾಪ್ತಿಗೆ ಸಂಬಂಧಿಸಿದಂತೆ ಇಲ್ಲಿನ ವಿಶಿಷ್ಟ ಸಂಸ್ಕೃತಿ, ತಮ್ಮದೇ ಆದ ಭಾಷಾ ಶೈಲಿ ಹೊಂದಿರುವ ಬಹುಸಂಖ್ಯಾತ ದೀವರ ಸಂಸ್ಕೃತಿ ಸುತ್ತ ಹೆಣೆದ ಕಥೆಗಳ ಸಿನಿಮಾ ಆಗಿರಲಿಲ್ಲ. ಆದರೂ ಧೈರ್ಯ ಮಾಡಿ ಸೊರಬ ಭಾಗದ ಹಳ್ಳಿಯೊಂದರ ಕೆರೆ ಬೇಟೆ, ಅಲ್ಲಿನ ಸಾಮಾಜಿಕ , ರಾಜಕೀಯ ಸ್ಥಿತಿಗತಿ, ಜಾತಿ ಪದ್ಧತಿ, ಸುತ್ತ ಕೇಂದ್ರೀಕರಿಸಿದ ಒಂದು ಪ್ರೇಮ ಕಥೆಯನ್ನ ಹೆಣೆದು ಸೊರಬದ ದೀವರ ಸ್ಥಳೀಯ ಭಾಷೆಯಲ್ಲಿ ಚಿತ್ರಕಥೆ ಬರೆದು ನಿರ್ದೇಶಸಿದವರು ರಾಜ್ ಗುರು. ಆ ಸಿನಿಮಾ ಈಗ ಪನೋರಮ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿ ಪ್ರದರ್ಶನಗೊಳ್ಳುತ್ತಿರುವುದು ಈ ನೆಲದ ಕಥೆ, ಸಂಸ್ಕೃತಿಗೆ ಸಿಕ್ಕ ಮಾನ್ಯತೆಯಾಗಿದೆ. ಅಷ್ಟೇ ಅಲ್ಲ. ಈ ನೆಲದ ಸಂಸ್ಕೃತಿಯ ಅನನ್ಯತೆಯನ್ನು ನಂಬಿದ ರಾಜ್ ಗುರು ಅವರ ಚಿಂತನೆ, ಕಲ್ಪನೆ, ನಿರ್ದೇಶನದ ಚಾಣಾಕ್ಷತನಕ್ಕೆ ಸಿಕ್ಕ ಮನ್ನಣೆಯಾಗಿದೆ. ಆ ಸಿನಿಮಾವನ್ನ ವೀಕ್ಷಿಸಿದರೆ ಅವರು ಸೊರಬದ ನೆಲದ ಸಂಸ್ಕೃತಿಯನ್ನು ಗ್ರಹಿಸಿರುವ ರೀತಿ, ಅವರಿಟ್ಟ ನಂಬಿಕೆ, ಅದನ್ನು ಚಿತ್ರಿಸಿರುವ ರೀತಿ ,ಉತ್ತಮ ತಂತ್ರಜ್ಞನಾಗಿಯೂ ಗೆದ್ದಿರುವುದು ಸಾಬೀತಾಗುತ್ತದೆ.

ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ತಾಲೂಕು ಎಂದು ಹೆಸರಾಗಿರುವ ಸೊರಬದಲ್ಲಿ “ಕೆರೆಬೇಟೆ’ ಎಂದರೆ ಅದೊಂದು ಗ್ರಾಮೀಣ ಕ್ರೀಡೆ. ಮನೋರಂಜನೇಯ ಮೀನು ಬೇಟೆ. ಒಂದು ಗ್ರಾಮದ ಸರ್ವರಿಗೂ ಏಕಕಾಲದಲ್ಲಿ ಒಂದು ಕೆರೆಯಲ್ಲಿ ಲಭ್ಯವಿರುವ ಮೀನುಗಳನ್ನು ಹಿಡಿಯಲು ಅವಕಾಶ ಕಲ್ಪಿಸುವ ಹಾಗೂ ಗ್ರಾಮೀಣ ಭಾಗದಲ್ಲಿ ಸರ್ವ ಸಮಾನತೆಯಿಂದ ಹಂಚಿಕೊಂಡು ತಿನ್ನುವ ಸಹಬಾಳ್ವೆಯ ಪರಿಕಲ್ಪನೆಯ ಬೇಟೆಗಾರಿಕೆಯಾಗಿ ಕೆರೆಬೇಟೆಗೆ ತನ್ನದೇ ಆದ ವಿಧಿ ವಿಧಾನ ,ಸಂಸ್ಕೃತಿ, ಹಿನ್ನೆಲೆ ಇದೆ. ಇಂತಹ ಹಲವು ವಿಶಿಷ್ಟತೆಗಳ ಕೆರೆಬೇಟೆ ಸಂಸ್ಕೃತಿಯ ಕುರಿತಾದ ಸಿನಿಮಾ ಪನೋರಮಾದಂತಹ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ ಆಗಿದೆ.

ಈ ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ಸಾಕಷ್ಟು ನಾಯಕನಟರು, ನಿರ್ದೇಶಕರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿತ್ತು. ಧ್ರುವ ಸರ್ಜಾ ಅವರು ಈ ವರ್ಷದ ಅತ್ಯುತ್ತಮ ಸಿನಿಮಾ ಎಂದೇ ಘೋಷಿಸಿದ್ದರು. ಹಲವು ಜನಪ್ರಿಯ ದೊಡ್ಡ ನಟರು ಇಷ್ಟಪಟ್ಟಿದ್ದರು. ಸಾಕಷ್ಟು ಪ್ರಚಾರ ಮಾಡಿದರು ಸಹ ಪ್ರೇಕ್ಷಕರ ಕೊರತೆಯ ನಡುವೆ ಮುಂದೆ ಸಾಗದೆ ಒಂದು ಉತ್ತಮ ಸಿನಿಮಾ ತೆರೆಮರೆ ಆಯ್ತು. ಈ ನೆಲದ ಉತ್ತಮ ಚಿತ್ರಕಥೆ ಆಯ್ದುಕೊಂಡರು ಸಹ ಅದಕ್ಕೆ ತಕ್ಕಂತೆ ರುಚಿಸುವ ಇದೇ ನೆಲದ ಜನಮನ ಸೆಳೆಯುವ ಚಿತ್ರಗೀತೆಗಳು ಇರಬೇಕಿತ್ತು ಎಂಬುದು ಪ್ರೇಕ್ಷಕರದ ಮನದಾಳ ಮಾತಾಗಿತ್ತು. ಜನುಮದ ಜೋಡಿ ಅಂತಹ ತಳ ಸಮುದಾಯದ ಗ್ರಾಮೀಣ ಕಥಾ ಹಂದರದ ಸಿನಿಮಾ ಗೆದ್ದದ್ದೇ ಅದಕ್ಕೆ ಪೂರಕವಾದ ಸಂಗೀತ ಮತ್ತು ಸಾಹಿತ್ಯದಿಂದ ಆಗಿತ್ತು. ಅಂತಹ ಒಂದು ಸಂಗೀತ ಮತ್ತು ಸಾಹಿತ್ಯದ ಅವಶ್ಯಕತೆ ಇತ್ತು. ಉಳಿದಂತೆ ಗಟ್ಟಿಯಾದ ಚಿತ್ರಕಥೆ ,ಸಂಭಾಷಣೆ, ಅಭಿನಯ, ತಂತ್ರಜ್ಞಾನ ಎಲ್ಲವೂ ಈ ಸಿನಿಮಾದಲ್ಲಿ ಇತ್ತು. ಇಂಥದೊಂದು ಪ್ರಯತ್ನವನ್ನು ಪ್ರೋತ್ಸಾಹಿಸಿ ಗೆಲ್ಲಿಸಿಕೊಳ್ಳಬೇಕು ಎನ್ನುವ ಪ್ರೇಕ್ಷಕರ ಸಾಮೂಹಿಕ ಪ್ರಜ್ಞೆಯ ಕೊರತೆಯಿಂದ ದೊಡ್ಡ ಯಶಸ್ಸು ಕಾಣಲಾಗಲಿಲ್ಲವಾದರೂ ಗುಣಮಟ್ಟದ ದೃಷ್ಟಿಯಿಂದ ಅದೊಂದು ಯಶಸ್ವಿ ಸಿನಿಮಾವೇ ಆಗಿದೆ.

ಅಷ್ಟು ಅಚ್ಚುಕಟ್ಟಾದ ನಿರ್ವಹಣೆ, ಶ್ರಮವನ್ನು ವಹಿಸಿದ್ದರು ಸಹ ಈ ನೆಲದ ಸಂಸ್ಕೃತಿಯ ಚಿತ್ರಕಥೆ ಇರುವ ಸಿನಿಮಾವನ್ನು ಶಿವಮೊಗ್ಗ, ಸೊರಬ ಸಾಗರದಲ್ಲಿನ ಪ್ರೇಕ್ಷಕರು ಸಹ ಅಷ್ಟಾಗಿ ಕೈಹಿಡಿಯಲಿಲ್ಲ ಎಂದು ಸಿನಿಮಾ ತಂಡದ ಬೇಸರಗೊಂಡಿತ್ತು. ಇದೇ ಪ್ರಯತ್ನವನ್ನು ಕರಾವಳಿ ನೆಲದ ಕಥೆ, ಅಥವಾ ಮಂಡ್ಯ ಮೈಸೂರಿನ ಕತೆಯನ್ನು ಇಟ್ಟುಕೊಂಡು ಮಾಡಿದ್ದರೆ ಅಲ್ಲಿನ ಸಿನಿಪ್ರಿಯರು ಅದನ್ನು ಬಹಳ ಹೈಪ್ ಮಾಡಿ ಎಲ್ಲರೂ ನೋಡುವಂತೆ ಮಾಡುತ್ತಿದ್ದರು. ಕಾಂತಾರದಂತ ಸಿನಿಮಾವನ್ನು ಅದೆಷ್ಟು ವ್ಯವಸ್ಥಿತವಾಗಿ ಸಾಮಾಜಿಕ ಮಾಧ್ಯಮ ಬಳಸಿಕೊಂಡು ಆರಂಭದಿಂದಲೇ ಉತ್ತಮ ಅಭಿಪ್ರಾಯ ರೂಪಿಸುವಂತೆ ನೋಡಿಕೊಂಡರು ಎಂಬುದನ್ನ ಮಲೆನಾಡಿಗರು ಸಹ ಅರಿಯಬೇಕು. ಸಾಂಸ್ಕೃತಿಕ ಯಜಮಾನಿಕೆ, ನಿರ್ದಿಷ್ಟ ಸಾಂಸ್ಕೃತಿಕ ಶ್ರೇಷ್ಠತೆಯ ಪಟ್ಟ ಭದ್ರತೆ, ಪ್ರಚಾರ ಮತ್ತು ನಿರ್ಲಕ್ಷೆ ಸಹ ಪ್ರಸ್ತುತ ಕಾಲಮಾನದ ಬಿಕ್ಕಟ್ಟುಗಳಲ್ಲಿ ಒಂದಾಗಿದೆ. ಸದ್ಯ ರಾಜ್ ಗುರು ಅವರ ಪ್ರಯತ್ನಕ್ಕೆ ಈ ನಡುವೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗಮನ ಸೆಳೆದು ಸಮಾಧಾನದ ಗೆಲುವಿನ ನಗೆ ಬೀರುವಂತಾಯಿತಲ್ಲ ಎನ್ನುವುದೇ ಸದ್ಯದ ಖುಷಿಯ ಸಂಗತಿ. ಮುಂದಿನ ದಿನಗಳಲ್ಲಿ ಅವರಿಂದ ಈ ನೆಲಮೂದ ಚಿತ್ರಕಥೆಗಳ ಮತ್ತಷ್ಟು ಉತ್ತಮ ಸಿನಿಮಾಗಳನ್ನ ನಿರೀಕ್ಷಿಸೋಣ.

-ರವಿರಾಜ್ ಸಾಗರ್. ಮಂಡಗಳಲೆ.
ಲೇಖಕರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ