ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹೃದಯ ಭಾಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪಟ್ಟಣದ ಟೌನ್ ಹಾಲ್ ನಲ್ಲಿ ಕನ್ನಡ ರಾಜೋತ್ಸವ ಪ್ರಯುಕ್ತವಾಗಿ ಹಮ್ಮಿಕೊಂಡ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಕೋರಿ ಸಿದ್ದೇಶ್ವರ ನಾಲವಾರದ ಶ್ರೀಗಳು ಸಾನಿಧ್ಯವನ್ನು ವಹಿಸಿಕೊಂಡು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶ್ರೀಗಳು ಭಾಷೆ, ನೆಲ, ಜಲ, ಗಡಿ,ಸಂಸ್ಕೃತಿ ಆಚಾರ ಮತ್ತು ಕನ್ನಡದ ಅಭಿಮಾನ ಉಳಿಯಬೇಕೆಂದರೆ ಪ್ರತಿಯೊಬ್ಬರೂ ಕನ್ನಡವನ್ನು ಪ್ರೀತಿಸಿ ಅದನ್ನು ಬೆಳೆಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ನೇತೃತ್ವವನ್ನು ಕನ್ನಡದ ಖ್ಯಾತ ನಟಿ ಪೂಜಾ ಗಾಂಧಿ ವಹಿಸಿಕೊಂಡು ಕನ್ನಡ ಭಾಷೆಯಲ್ಲಿ ಬಂದು ನಟಿಸಲು ನನಗೆ ಅವಕಾಶ ಸಿಕ್ಕಿರುವುದೇ ಒಂದು ದೊಡ್ಡ ಸದಾವಕಾಶ ಕನ್ನಡವು ಒಂದು ಕೇವಲ ಕರ್ನಾಟಕಕ್ಕೆ ಸೀಮಿತವಾಗಿರದೆ ಇಡೀ ದೇಶಾದ್ಯಂತ ಕನ್ನಡದ ಬಳ್ಳಿಯ ಹರಡಬೇಕು ಎಂದು ಹೇಳಿದರು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ರಾಜೋತ್ಸವ ಪ್ರಶಸ್ತಿಯನ್ನು ನೀಡಲಾಯಿತು.
ರಾಜೋತ್ಸವ ಪ್ರಶಸ್ತಿ ಪುರಸ್ಕೃತರು ಶ್ರೀ ಷ.ಬ್ರ. ಗುರುಬಸವ ಶಿವಾಚರ್ಯರು ಅಂಕಲಗಿ,
ಶಂಭುಲಿಂಗ ದೇಸಾಯಿ,
ಉಮಾಕಾಂತ ಗೋಲಗೇರಿ,
ಮಹಾಂತಯ್ಯ ಸಿ ಹಿರೇಮಠ
ಪ್ರಶಾಂತಗೌಡ ಮಾಲಿ ಪಾಟೀಲ್,
ಡಾ: ಮಾಳಪ್ಪ ಪೂಜಾರಿ ಹಾಲಗಡ್ಲ,
ಸಂಗಮೇಶ ಕೊಂಬಿನ,
ಬಸಣ್ಣ ಸರಕಾರ,
ರಾಜು ಹಳ್ಳೆಪ್ಪಗೋಳ,
ಡಾ.ಗೋವಿಂದರಾಜ ಅಲ್ದಾಳ,
ಎಸ್ ಸಿ ತಮ್ಮಾ ಗೋಳ,
ಮಹಾಂತ ಸಾಹು ಹರವಾಳ,
ಶ್ರೀಮತಿ ಸುಧಾ ಬೆಣ್ಣೂರು ಮುಖ್ಯ ಅತಿಥಿಗಳಾಗಿ ವೇದಿಕೆ ಅಲಂಕರಿಸಿದ್ದರು.
ಈ ಕಾರ್ಯಕ್ರಮದಲ್ಲಿ ತಾಲೂಕಿನ ದಂಡಾಧಿಕಾರಿಗಳಾದ ಶ್ರೀ ಮಲ್ಲಣ್ಣ ಯಲಗೋಡ ರವರು ರಸಮಂಜರಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು ಹಾಗೂ ವಿವಿಧ ಸಂಗೀತ ರಸಮಂಜರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು
ನಂತರ ಕವಿಗೋಷ್ಠಿಯನ್ನು ಸಾಹಿತಿಗಳಾದ ಡಾ.ಧರ್ಮಣ್ಣ ಕೆ ಬಡಿಗೇರ,ರಾಜು ಮುದ್ದಡಗಿ, ಶರಣಗೌಡ ಪಾಟೀಲ್ ಶ್ರೀನಿವಾಸ ಕುಷ್ಟಗಿ, ಕವಿಗೋಷ್ಠಿಯನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ರಾಜಶೇಖರ ಸೀರಿ, ವಿಜಯ ಹಿರೇಮಠ,ತಾಲೂಕು ವೈದ್ಯಾಧಿಕಾರಿಗಳಾದ ಡಾ. ವಿಶ್ವನಾಥ ಬಿರಾದಾರ ಮಾಗಣಗೇರಾ, ಡಿ ಬಿ ಪಾಟೀಲ, ರಮೇಶ ಬಾಬು ವಕೀಲ, ದಯಾ ನಂದ ದೇವರಮನಿ. ಮಲ್ಲಿಕಾರ್ಜುನ ಪಾಟೀಲ ಬೀರಾಳ. ಶರಣು ಬೂತ್ಪುರ, ಪ್ರಶಾಂತಗೌಡ ಪಾಟೀಲ್ ಎಸ್ ಕೆ ಬಿರಾದರ ಚೆನ್ನಮಲ್ಲಯ್ಯ ಹಿರೇಮಠ ಕಲ್ಯಾಣಕುಮಾರ ಸಂಗಾವಿ, ತುಂಬಗಿ ಸರ್,ಶ್ರೀಹರಿ ಎಸ್ ಕರ್ಕಿಹಳ್ಳಿ, ಡಾ. ಹಣಮಂತ್ರಾಯ ರಾಂಪೂರ, ಮಹಾಂತೇಶ ಯಾತನೂರ,ಸುರೇಶ ಹಿರೇಮಠ,ಸಂಗಮೇಶ ಸಂಕಾಲಿ,ಬಂಗಾರೆಪ್ಪ ಆಡಿನ್ ಕೋಳ್ಕೂರ್ , ಸುನಂದಾ ಕಲ್ಲಾ,ಷಣ್ಮುಖಪ್ಪ ಸಾಹೂ ಗೋಗಿ,ವಿಶ್ವರಾಜ ಗುತ್ತೇದಾರ್, ಕಲ್ಯಾಣಕುಮಾರ ಎಮ್ ಬಂಗಾರಿ,ವೀರೇಶ ಕಂದಗಲ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಚಂದ್ರಶೇಖರ ಪಾಟೀಲ್, ಗುಡೂರ ಎಸ್ ಎನ್
