ಇಂದಿನ ಪೀಳಿಗೆಯ ನಿರ್ದೇಶಕರಲ್ಲಿ ಸೂರಿ ನನಗೆ ಅಚ್ಚುಮೆಚ್ಚು. ಸೂರಿ ಎಂಬ ಬ್ರಾಂಡ್ ಸಿನಿ ಪ್ರಿಯರಿಗೆ ಹೊಸದೇನೂ ಅಲ್ಲ, ಅವರ ನಿರ್ದೇಶನದ ಇಂತಿ ನಿನ್ನ ಪ್ರೀತಿಯ , ದುನಿಯಾ, ಕೆಂಡಸಂಪಿಗೆ, ಕಡ್ಡಿಪುಡಿ, ಹಾಗೂ ಟಗರು ಮುಂತಾದ ಚಿತ್ರಗಳು ಚಂದನವನದ ಬ್ಲಾಕ್ಬಸ್ಟರ್ ಹಿಟ್ಸ್.
ಕನ್ನಡ ಚಿತ್ರರಂಗ ಕಂಡ ಉತ್ತಮ ನಿರ್ದೇಶಕ ಇವರು ಎಂದು ಆತ್ಮವಿಶ್ವಾಸದೊಂದಿಗೆ ಹೇಳಬಲ್ಲೆ.
ಇವರ ಎಲ್ಲಾ ಸಿನಿಮಾದ ಕಲರ್ ಟೋನ್ ಒಂದೇ ಆಗಿರುತ್ತದೆ. ಸಾಮಾನ್ಯ ಚಿತ್ರಗಳಿಗಿಂತ ಭಿನ್ನವಾಗಿರುತ್ತದೆ. ಗ್ಯಾಂಗ್ ಸ್ಟರ್, ಮಾಫಿಯಾ, ಪೊಲೀಸ್, ರಾಜಕೀಯದ ಪಾತ್ರಗಳನ್ನು ಸೃಷ್ಟಿಸುವಲ್ಲಿ ಹಾಗೂ ನಿಜಾಯಿತಿಗೆ ಹತ್ತಿರವಾದ ಸನ್ನಿವೇಶಗಳನ್ನು ಸೃಷ್ಟಿಸುವಲ್ಲಿ ಎತ್ತಿದ ಕೈ.
ವಿಲನ್ ಪಾತ್ರಗಳಿಗೆ ಇವರು ಆರಿಸುವ ಮುಖಗಳು ಆ ಪಾತ್ರಗಳಿಗೆ ಹೇಳಿ ಮಾಡಿಸಿದಂತಿರುತ್ತವೆ.
ಪಾತ್ರ, ಅದಕ್ಕೆ ತಕ್ಕ ಸನ್ನಿವೇಶ, ಸರಿ ಹೊಂದುವ ಸಂಭಾಷಣೆ ಹೀಗೆ ಎಲ್ಲಾ ವಿಭಾಗಗಳಲ್ಲಿಯೂ ಚಾಕಚಕ್ಯತೆಯಿಂದ ಕೆಲಸ ನಿಭಾಯಿಸಿರುತ್ತಾರೆ.
ಇವರು ಹೆಚ್ಚುಹೆಚ್ಚು ಹೊಸ ಕಲಾವಿದರೊಂದಿಗೆ ಕೆಲಸ ಮಾಡಬೇಕೆಂಬುದು ನನ್ನ ಬಯಕೆ. ನಕ್ಷತ್ರ ನಾಯಕ (ಸ್ಟಾರ್ ಹೀರೋ) ರೊಂದಿಗೆ ಕೆಲಸ ಮಾಡುವಾಗ ತಮ್ಮ ಕಾರ್ಯತಂತ್ರವನ್ನು ಸಡಿಲಿಸುತ್ತಾರೆ ಎಂಬುದು ನನ್ನ ಆತಂಕ.
ಇಂತೀ ನಿನ್ನ ಪ್ರೀತಿಯ ಚಿತ್ರದಲ್ಲಿ ನೋಡುವುದು ಆದರೆ ಪ್ರಸ್ತುತಕ್ಕೂ ಶೈಲಿಗೂ ಅನುಗುಣವಾಗಿದೆ. ಎಷ್ಟೇ ಬಾರಿ ನೋಡಿದರೆ ಪ್ರತಿ ಬಾರಿ ಹೊಸತೆಂದು ಅನ್ನಿಸುತ್ತದೆ. ಪ್ರೀತಿ ಎಂದರೆ ಏನು , ಮೋಸ , ನಂಬಿಕೆ , ಭರವಸೆ, ಅಸಾಯಕತೆ, ಎಲ್ಲವೂ ನಾಜೂಕಾಗಿ ಸಾಗಿಸುತ್ತಾರೆ.
ಕೆಂಡ ಸಂಪಿಗೆ ಚಿತ್ರದಲ್ಲಿ ಬೆಳ್ಳಿ ಚುಕ್ಕಿಯಂತೆ ಕಂಡರೂ ಮುಂಬಂದ ಟಗರು ಚಿತ್ರದಲ್ಲಿ ಸುಕ್ಕಾ ಸೂರಿ ಎಂದು ಕರೆಯಲು ಕಾರಣ ತಿಳಿಸಿದರು.
ಸೂರಿ ಅವರ ಕಥೆ ಸಾಗುವಿಕೆ , ಕ್ರಿಯಾತ್ಮಕ ಸಂಭಾಷಣೆ, ಪಾತ್ರ ರಚನೆ, ಎಲ್ಲವೂ ನೂರಕ್ಕೆ ನೂರು . ಒಬ್ಬ ವ್ಯಕ್ತಿ ಸಿನಿಮಾ ಟಾಕೀಸಿನಲ್ಲಿ ಚಿತ್ರ ನೋಡಲು ಕೂತರೆ ಬೇರೊಂದು ಲೋಕಕ್ಕೆ ಕರೆದು ಕೊಂಡು ಹೋಗುವುದು ಖಂಡಿತ.
ಇಂತಹ ಮೇರು ನಿರ್ದೇಶಕ ಬಹಳಷ್ಟು ಹೊಸಬರಿಗೆ ಅವಕಾಶ ನೀಡಿ ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಬೇಕೆಂಬುದು ನನ್ನ ಆಶಯ.
-ರಕ್ಷಿತ್ ಆರ್ ಪಿ
ಕುವೆಂಪು ವಿಶ್ವವಿದ್ಯಾಲಯ ಶಂಕರಘಟ್ಟ
