ದ್ರೋಣ ಮತ್ತು ಏಕಲವ್ಯನ ಬಗ್ಗೆ ಎಲ್ಲರಿಗೂ 7ನೇ ತರಗತಿಯಿಂದ ತಿಳಿದೇ ಇದೆ.
ಜನ ತಿಳಿದ ಹಾಗೆ ಇದು ಏಕಲವ್ಯ ಕೊಟ್ಟ ಹೆಬ್ಬೆರಳ ಕಾಣಿಕೆ ಯಾವುದೇ ರೀತಿಯ ದಕ್ಷಿಣೆ ಅಲ್ಲ. ದ್ರೋಣಾಚಾರ್ಯರು ಹೆಬ್ಬರೆಳು ಕೇಳಲು ಸಾಕಷ್ಟು ಕಾರಣಗಳು ಇವೆ. ಕುವೆಂಪು ಅವರ ಮಹಾಭಾರತದಲ್ಲಿ ದಕ್ಷಿಣೆ ಎಂದು ಇದ್ದರೆ, ಪಂಪನ ಮಹಾಭಾರತದಲ್ಲಿ ಈ ಸನ್ನಿವೇಶವನ್ನು ಬೇರೆ
ರೀತಿಯಲ್ಲೇ ವರ್ಣಿಸಿದ್ದಾರೆ. ಪ್ರತಿ ದೃಷ್ಟಿ ಕೋನವೂ ಮಗದೊಂದು ಹೊಸದೊಂದು ತಿರುವು ನೀಡುತ್ತಾ ಓದುಗರನ್ನು ಗೊಂದಲವ್ಯೂಹದಲ್ಲಿ ತಳ್ಳುತ್ತದೆ.
ನಾ ತಿಳಿದಂತೆ,
ಕಂಸನ ಹತ್ಯೆಯ ನಂತರ ಜರಾಸಂಧ ಮತ್ತು ಯಾದವರ ಮಧ್ಯೆ ಯುದ್ಧಗಳು ಸಾಮಾನ್ಯವಾಗಿತ್ತು. ಜರಾಸಂಧ ಮಗಧದ ರಾಜ ಆತನ ಸೇನಾಧಿಪತಿ ಹಿರಣ್ಯಧನು ನಿಶಾದರಾಜ, ಆತನ ಪುತ್ರನೇ ಏಕಲವ್ಯ..
ಆತ ರಾಜಕುಮಾರನೇ ಹೊರತು ಯಾವುದೋ ನಿಮ್ನ ಕುಲದವನು ಅಲ್ಲ… ಕೌರವರಿಗೂ ಮಾಗಧರಿಗೂ ಎಣ್ಣೆ ಸೀಗೆಯಂತೆಯೇ ಹಾಗಿದ್ದ ಮೇಲೆ ದ್ರೋಣಾಚಾರ್ಯರು ಏಕಲವ್ಯನಿಗೆ ವಿದ್ಯೆ ಕಲಿಸಲು ಹೇಗೆ ಸಾಧ್ಯ?
ಜಾತಿ ಇಂದಂತೂ ಖಂಡಿತ ಅಲ್ಲವೇ ಅಲ್ಲ ಇದೆಲ್ಲವೂ ಕೇವಲ ರಾಜನೀತಿಗಳ ಕಟ್ಟಳೆ ಎಂದೇ ಹೇಳಬಹುದು.
ಶ್ರೇಷ್ಠ ಗುರುಗಳಾದ ದ್ರೋಣರು ಗುರುಕುಲವನ್ನು ಆರಂಭಿಸಿದ ನಂತರ ದೇಶದ ನಾನಾ ಭಾಗಗಳಿಂದ ರಾಜಪುತ್ರರು ವಿದ್ಯೆ ಕಲಿಯಲು ಅಲ್ಲಿಗೆ ಬರುತ್ತಾರೆ ಅದರಲ್ಲಿ ಯಾದವರಾದ ವೃಶ್ಣಿ, ಅಂಧಕ ವಂಶದವರೂ ಇದ್ದರು.
ಪುಸ್ತಕವನ್ನು ತಲೆ ಕೆಳಗೆ ಇಟ್ಟು ಮಲಗಿದರೆ ವಿದ್ಯೆ ತಲೆಗೆ ಹತ್ತುತದೆ ಎಂಬುದು ಎಷ್ಟು ಮೂರ್ಖತನ.
ಪುಸ್ತಕದಲ್ಲಿ ನಮಗೆ ಓದಿಸಿದಂತೆ ದ್ರೋಣರ ಮೂರ್ತಿಯನ್ನು ಇಟ್ಟು ಬಿಲ್ ವಿದ್ಯಾ ಅಭ್ಯಾಸ ಮಾಡುವುದರಿಂದ ವಿದ್ಯೆ ಲಭಿಸಿ ಬಿಡುತ್ತದೆಯೇ, ಖಂಡಿತಾ ಸಾಧ್ಯವಿಲ್ಲ!
ಅಭ್ಯಾಸ ಹಾಗೂ ಕಠಿಣ ಶ್ರಮವಿಲ್ಲದೆ ಏನು ಕೂಡಾ ಸಾಧ್ಯವಾಗದು. ಆತ ದ್ರೋಣರು ತಮ್ಮ ಶಿಷ್ಯಂದರಿಗೆ ಕಲಿಸುವಾಗ ಏಕಲವ್ಯ ಕಳ್ಳತನದಿಂದ ಅದನ್ನು ಕಲಿತಿದ್ದ ಆತ ಅಪರಾಧಿ ಅದಕ್ಕೆ ದ್ರೋಣರು ಆತನ ಹೆಬ್ಬೆರಳನ್ನು ಕತ್ತರಿಸಿ ಕೊಡಲು ಹೇಳಿದ್ದು ಆದರೆ ಆತನ ಪ್ರಾವಿಣ್ಯತೆ ಅರ್ಜುನನ ನಿದ್ದೆ ಕೆಡಿಸಿದೊಂತು ಕಟು ಸತ್ಯ.
ಆದರೆ ದ್ರೋಣಾಚಾರ್ಯರು ಏಕಲವ್ಯನಿಗೆ ತರ್ಜನಿ ಮತ್ತು ಮಾಧ್ಯಮದಿಂದ ಬಾಣ ಪ್ರಯೋಗಿಸುವುದನ್ನು ಹೇಳಿಕೊಟ್ಟರು ಹಾಗಿದ್ದರೆ ಅವರು ವಿದ್ಯೆ ಕಲಿಸಿದಂತೆ ಆಯಿತು ಈಗಲೂ ಕೂಡ ಈ ಪದ್ಧತಿಯನ್ನು ಕ್ರೀಡಾಕೂಟಗಳಲ್ಲಿ ಅನುಸರಿಸುತ್ತಾರೆ.
ಇನ್ನು ಏಕಲವ್ಯನು ತನ್ನ ಕೊನೆಯ ದಿವಸಗಳಲ್ಲಿ ಯುದ್ಧ ಭೂಮಿಗಿಳಿದು ಕೃಷ್ಣ ಹಾಗೂ ಯಾದವರ ವಿರುದ್ಧವಾಗಿ ಹೆಬ್ಬೆರಳು ಬಳಸದೆ ತೋರುಬೆರಳು ಹಾಗೂ ಮದ್ಯದ ಬೆರಳು ಉಪಯೋಗಿಸಿ ಯುದ್ಧದಲ್ಲಿ ಹಣಿಸುತ್ತಾ ವೀರ ಮರಣವನು ಹೊಂದಿದ ಎಂಬುದು ಸಾಕಷ್ಟು ಕಥೆಯಲ್ಲಿ ಮೂಡಿ ಬಂದಿದೆ.
-ರಕ್ಷಿತ್ ಆರ್ ಪಿ,
ಕುವೆಂಪು ವಿಶ್ವವಿದ್ಯಾಲಯ ಶಂಕರಘಟ್ಟ.
