ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಮುನ್ಸಿ ಕಾಲೋನಿಯ ಮುಖ್ಯ ರಸ್ತೆ ಹದೆಗೆಟ್ಟ ಕಾರಣ ಪ್ರತಿ ನಿತ್ಯ ನೂರಾರು ಜನಗಳು,ವಿದ್ಯಾರ್ಥಿಗಳು,ಯುವಕರು,
ವಯೋವೃದ್ದರು ಹಾಗೂ ಹಲವಾರು ವಾಹನ ಸವಾರರು ದೈನಂದಿನ ಕಾರ್ಯಗಳಿಗೆ ತಮ್ಮ ಜೀವ ಅಂಗೈಯಲ್ಲಿಟ್ಟುಕೊಂಡು ಅಡ್ಡಾಡುತ್ತಿದ್ದಾರೆ.
ಮುನ್ಸಿ ಬಡಾವಣೆಯ ವ್ಯಕ್ತಿಯೊಬ್ಬರು ತಮ್ಮ ಮಗುವಿಗೆ ದ್ವಿಚಕ್ರ ವಾಹನದಲ್ಲಿ ಶಾಲೆಗೆ ಕರೆದುಕೊಂಡು ಹೋಗುವಾಗ ರಸ್ತೆ ಕುಸಿದು ನೆಲಕ್ಕುರುಳಿ ಬಿದ್ದು,ಗಂಭೀರ ಗಾಯಗೊಂಡು ಮನನೊಂದು ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಕ್ಯಾರೇ ಎನ್ನದ ಅಧಿಕಾರಿಗಳಿಗೆ ಇಂದು ಕಾಲೋನಿಯ ಸಾರ್ವಜನಿಕರೆಲ್ಲರೂ ತಾಲೂಕು ಆಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
ನಾವು ಪ್ರತಿ ನಿತ್ಯ ಸಂಚರಿಸುವ ಅನಿವಾರ್ಯ ರಸ್ತೆಯಾಗಿರುವುದರಿಂದ ನಾವು ಅದೇ ರಸ್ತೆಯ ಮೇಲೆಯೇ ಹೋಗುತ್ತಿದ್ದೇವೆ ಒಂದು ವೇಳೆ ಏನಾದರೂ ನಮ್ಮ ಪ್ರಾಣಕ್ಕೆ ಅಪಾಯವಾದರೆ ನೇರವಾಗಿ ತಾಲೂಕು ಆಡಳಿತ ಮತ್ತು ಸಂಭಂದಿಸಿದ ಇಲಾಖೆಯೇ ನೇರ ಹೊಣೆ ಎಂದು ದೇವು ಬಿರಾದಾರ ಮತ್ತು ಯೂಸೂಫ್ ಮುನ್ಸಿ ಕಾಲೋನಿ ರವರು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುನ್ಸಿ ಕಾಲೋನಿಯ ನಿವಾಸಿಗಳಾದ ಶ್ರೀ ನಿಂಬಣ್ಣ ರುದ್ರಪ್ಪಗೋಳ,
ಡಾ.ಚಂದ್ರಶೇಖರ ಜಾದವ್,
ಯೂಸೂಫ್ ಮುನ್ಸಿಕಾಲೋನಿ,
ಮೌನೇಶ ಗುತ್ತೇದಾರ,
ಮಹಾಂತೇಶ ಜಾದವ್,
ಮಲ್ಲಣ್ಣಗೌಡ ಪಾಟೀಲ್,
ಗುಂಡಪ್ಪ ತಡಕಲ್ಲ,
ಲಕ್ಷ್ಮಣ್ಣ ಕೋಳಕೂರ,
ಪ್ರಜ್ವಲ ಕೊಬ್ಬಿನ,
ಶಾಂತಗೌಡ ಮದರಿ,
ಲಕ್ಷ್ಮಣ ಕೋಳ್ಕೂರ,
ಲಕ್ಷ್ಮಣ ಗುತ್ತೇದಾರ ಜೇವರ್ಗಿ,
ಈರಣ್ಣಗೌಡ ಪಾಟೀಲ್,
ಮಲ್ಲಿನಾಥ ಟೊಕ್ರಿ,
ಸಂಗಣಗೌಡ ಮಂದ್ರವಾಡ,
ಪಯಾಜ ಮುಂಡ್ರಗಿ,
ಭೀಮರಾಯ ಪೂಜಾರಿ ಯಾತ್ನೂರ,
ಹರ್ಷದ್ ವಡಗೇರಿ,
ಬಾಬಾ ಗುತ್ತೇದಾರ,
ಮಾಳಪ್ಪ ಪೂಜಾರಿ,
ಅಬ್ದಲ್ ಕರಿಂ,
ಲಕ್ಷ್ಮಣ ಪವಾರ್,
ಮಲ್ಲು ರಾಸಣಗಿ ಹಾಗೂ ಸ್ಥಳೀಯ ನಿವಾಸಿಗಳು ಹಾಜರಿದ್ದರು.
ವರದಿ: ಚಂದ್ರಶೇಖರ ಪಾಟೀಲ್ ಗುಡೂರ ಎಸ್ ಎನ್
