ಮೈಸೂರು : ವರ್ಷಗಳಿಂದ ಅಭಿವೃದ್ಧಿ ಕಾಣದೆ ವಂಚಿತವಾಗಿದ್ದ ರಾಮಾನುಜ ರಸ್ತೆಯ 9 ನೇ ತಿರುವಿನಿಂದ ಕಂಸಾಳೆ ಮಹದೇವಯ್ಯ ವೃತ್ತದವರೆಗೆ ಕಡೆಗೂ ಅಭಿವೃದ್ಧಿ ಭಾಗ್ಯ ಒದಗಿ ಬಂದಿದ್ದು ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಯವರ ಹೋರಾಟಕ್ಕೆ ಸಿಕ್ಕ ಪ್ರತಿಫಲವಾಗಿದೆ.
ಈ ಭಾಗದ ರಸ್ತೆಗೆ ಡಾಂಬರೀಕರಣ ಆಗದೆ ಸ್ಥಳೀಯ ನಿವಾಸಿಗಳಿಗೆ ಮತ್ತು ವ್ಯಾಪಾರಿಗಳಿಗೆ ತೊಂದರೆ ಉಂಟಾಗುತ್ತಿರುವದನ್ನು ಗಮನಿಸಿ ಸ್ಥಳೀಯ ನಿವಾಸಿಗಳ ದೂರಿನ ಮೇರೆಗೆ ಕಳೆದ ನವೆಂಬರ್ 1 ರಂದು ರಾಮಾನುಜ ರಸ್ತೆಯ ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸಿ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಧರಣಿ ಸತ್ಯಾಗ್ರಹ ನಡೆಸಿದ್ದರು.
ನಂತರ ಮೈಸೂರು ಮಹಾ ನಗರ ಪಾಲಿಕೆಯ ಆಯುಕ್ತರಿಗೆ ಕೂಡಲೇ ರಸ್ತೆ ದುರಸ್ತಿ ಕಾರ್ಯ ಆರಂಭಿಸುವಂತೆ ತೇಜಸ್ವಿ ಮನವಿ ಸಲ್ಲಿಸಿದರು.
ಅದರ ಪರಿಣಾಮವಾಗಿ ಇಂದು ಕೃಷ್ಣ ರಾಜ ಕ್ಷೇತ್ರದ ಶಾಸಕರಾದ ಶ್ರೀ ವತ್ಸ ಅವರು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ರಾಮಾನುಜ ರಸ್ತೆಯ 9ನೇ ತಿರುವಿನಿಂದ ಕಂಸಾಳೆ ಮಹದೇವಯ್ಯ ವೃತ್ತದ ವರೆಗಿನ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ.
ಶಾಸಕರಾದ ಶ್ರೀ ವತ್ಸ ಅವರು ವಿಳಂಬವಾದರೂ ಸಹ ರಾಮನುಜ ರಸ್ತೆಯ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಿರುವುದನ್ನು ತೇಜಸ್ವಿ ನಾಗಲಿಂಗ ಸ್ವಾಮಿ ಸ್ವಾಗತಿಸಿದ್ದಾರೆ.
