ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಧರ್ಮದಿಂದ ಮಾತ್ರ ಜಗತ್ತಿಗೆ ಶಾಂತಿ : ಒಪ್ಪತ್ತೇಶ್ವರ ಶ್ರೀಗಳು

ಹುನಗುಂದ/ ತಿಮ್ಮಾಪೂರ: ಧರ್ಮ ಮಾನವನ ಅವಿಭಾಜ್ಯ ಅಂಗ. ಧರ್ಮ ಎಂದರೆ ಬದುಕಿನ ರೀತಿ, ಮಾನವ ಕುಲಸುಖದಿಂದ ಇರಬೇಕಾದರೆ ಧರ್ಮ ಬೇಕೇ ಬೇಕು. ಧರ್ಮದಿಂದ ಮಾತ್ರ ಜಗತ್ತಿಗೆ ಶಾಂತಿ ಲಭಿಸುತ್ತದೆ ಎಂದು ಗುಳೇದಗುಡ್ಡದ ಒಪ್ಪತ್ತೇಶ್ವರ ಶ್ರೀಗಳು ಅಭಿಪ್ರಾಯಪಟ್ಟರು.
ನವೆಂಬರ್ ೩೦ ರಂದು ಬೇವಿನಮಟ್ಟಿಯಿಂದ ಕೂಡಲ ಸಂಗಮದವರೆಗೆ ಸದ್ಭಾವನಾ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಮಾರ್ಗ ಮಧ್ಯದಲ್ಲಿ ತಿಮ್ಮಾಪೂರಿನ ಭಕ್ತರು ಪೂಜ್ಯರನ್ನು ಸ್ವಾಗತಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಒಪ್ಪತ್ತೇಶ್ವರ ಶ್ರೀಗಳು ಸಾನಿಧ್ಯವಹಿಸಿ ಮಾತನಾಡುತ್ತಾ ಅವರು ಮುಂದುವರಿದು ತಿಮ್ಮಾಪೂರಿನ ಜನ ಭಕ್ತಿವಂತರು ಆಧ್ಯಾತ್ಮಿಕತೆಯನ್ನು ಬದುಕಿನಲ್ಲಿ ರೂಢಿಸಿಕೊಡು ಬಂದಿದ್ದಾರೆ ಎಂದು ವಿವರಿಸಿದರು.
ಅಮೀನಗಡದ ಶಂಕರ ರಾಜೇಂದ್ರ ಶ್ರೀಗಳು ಆರ್ಶಿರ್ವಚನ ನೀಡಿ ಭಕ್ತಿಯಲ್ಲಿ ಶಕ್ತಿ ಇದೆ ಮಾನವ ಮಹಾಮಾನವನಾಗಲು, ಮನುಷ್ಯನ ಮನಸ್ಸು ಶುದ್ಧಿಗೊಳ್ಳಲು ಆಧ್ಯಾತ್ಮಿಕ ಜೀವನ ಅವಶ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆ ವಹಿಸಿದ ನಿವೃತ್ತ ಶಿಕ್ಷಕರಾದ ಬಸಯ್ಯ ಹಿರೇಮಠ ಅವರು ಮಾತನಾಡಿ ಮಹಾತ್ಮರ ಹಾದಿಯಲ್ಲಿ ಸಾಗಿದರೆ ನಮ್ಮ ಜೀವನಕ್ಕೊಂದು ಅರ್ಥ ಬರುತ್ತದೆ. ಸುಂದರ ಬದುಕಿಗೆ ಪೂಜ್ಯರ ಮಾರ್ಗದರ್ಶನ ಅವಶ್ಯ. ಅವರ ಆಶಿರ್ವಾದ ನಮ್ಮೆಲ್ಲರ ಮೇಲಿದೆ ಎಂದರು.
ನಿವೃತ್ತ ಶಿಕ್ಷಕ, ಸಾಹಿತಿ ಎಸ್. ಎಸ್. ಹಳ್ಳೂರ ಮಾತನಾಡಿ ಭಕ್ತಿಯಲ್ಲಿ ಶಕ್ತಿಯಿದೆ, ಆಧ್ಯಾತ್ಮ ಸಮಾಜದ ತಾಯಿ ಇದ್ದಂತೆ, ತಾಯಿ ತನ್ನ ಮಗು ಸರ್ವಶ್ರೇಷ್ಠ ವ್ಯಕ್ತಿಯಾಗಬೇಕೆಂದು ಬಯಸಿದಂತೆ ಆಧ್ಯಾತ್ಮವು ಈ ಸಮಾಜ ಸರ್ವ ಶ್ರೇಷ್ಟ ಸಮಾಜ ಆಗಬೇಕೆಂದು ಬಯಸುತ್ತದೆ. ರಾಮಾಯಣದ ಹನುಮಂತನ ಧೈರ್ಯ ಸಾಹಸಕ್ಕೆ ಆತನಲ್ಲಿರುವ ಭಕ್ತಿ ಕಾರಣ ಎಂದು ವಿವರಿಸಿದರು.
ಜೆಡಿಎಸ್ ಧುರೀಣ ಶಿವಪ್ರಸಾದ ಗದ್ದಿಯವರು ಮಾತನಾಡಿ ಪೂಜ್ಯರು ಪಾದಯಾತ್ರೆ ಕೈಗೊಂಡಿದ್ದು ನಮ್ಮೆಲ್ಲರ ಭಾಗ್ಯ. ಅವರು ನಡೆದ ನೆಲ ಪಾವನ ಕ್ಷೇತ್ರವಾಯಿತು ಎಂದು ಅಭಿಪ್ರಾಯಪಟ್ಟರು.
ಹಿರೇಮಠದ ಶಿವಸಂಗಮೇಶ್ವರ ದೇವರು, ಹುನಗುಂದದ ಗಚ್ಚಿನಮಠದ ಅಮರೇಶ್ವರ ದೇವರು, ಜಿಗೇರಿ ಹಿರೇಮಠದ ಗುರುಸಿದ್ಧ ಶಿವಾಚಾರ್ಯರು, ಪುರಗಿರಿಯ ಕೈಲಾಸಲಿಂಗ ಶಿವಾಚಾರ್ಯರು ವೀರಯ್ಯ ಸರಗಣಾಚಾರಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ರಸಪ್ರಶ್ನೆ ಸ್ಪರ್ಧೆಯಲ್ಲಿ ಬಾಗಲಕೋಟ ಜಿಲ್ಲೆಯಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾದ ತಿಮ್ಮಾಪೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಗೀತಾ ತಾರಿವಾಳ ಹಾಗೂ ಇನ್ನೊರ್ವ ಶಿಕ್ಷಕಿ ಶಾರದಾ ಹೂಲಗೇರಿ ಇವರಿಗೆ ಎಸ್. ಆರ್. ಕೆ. ಪ್ರತಿಷ್ಟಾನದಿಂದ ತಾಲೂಕಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದದ್ದಕ್ಕಾಗಿ ಸನ್ಮಾನಿಸಲಾಯಿತು.
ಭೀಮಪ್ಪ ಮಡಿವಾಳರ, ಕಾಂತೇಶ ದಾಸರ, ಹನುಮಂತ ತಳವಾರ, ಸಂತೋಷ ವಾಲಿಕಾರ, ಸಂಗನಗೌಡ ಹಾದಿಮನಿ, ಸವಿತಾ ಬಸವರಾಜ ಕೋಣೆ, ಪತ್ರಕರ್ತ ಗುರುಬಸಯ್ಯ ಹಿರೇಮಠ, ಇಬ್ರಾಹಿಂ ನಾಯಕ, ಸಿದ್ದಮ್ಮ ಚಲವಾದಿ ಮುಂತಾದವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ವಚನ ಪ್ರಾರ್ಥನೆ : ಗೀತಾ ತಾರಿವಾಳ,
ಪ್ರಾರ್ಥನೆ : ತಿಮ್ಮಾಪೂರ ಶಾಲೆಯ ವಿದ್ಯಾರ್ಥಿಗಳಿಂದ, ಬಾಬು ಕೆಂಚನಗೌಡರ,
ಸಂಗಯ್ಯ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಈಶ್ವರ ನಾರಾಯನಗೌಡರ ವಂದನಾರ್ಪಣೆ ನೆರವೇರಿಸಿದರು.
ವೇದಿಕೆಯ ಮೇಲಿರುವ ಎಲ್ಲಾ ಪೂಜ್ಯರಿಗೆ ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ