ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೇಳದೇ ನಿಮಗೀಗಲೂ…?ಮೂಲಭೂತ ಸೌಲಭ್ಯವಂಚಿತ ನತದೃಷ್ಟರ ಧ್ವನಿ !

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮ ಪಂಚಾಯತ ವ್ಯಾಪ್ತಿಯ ಬೇಲೆಗದ್ದೆಯ ಪರಿಶಿಷ್ಟ ಮುಕ್ರಿ ಸಮಾಜದವರಾದ ಈ ಫಲಾನುಭವಿಗಳಿಗೆ ಬಹುತೇಕ ಮೂಲಭೂತ ಸೌಲಭ್ಯಗಳಿಂದ ವಂಚಿಸಲಾಗಿದೆ.

ನಾರಾಯಣ ಗಿಡ್ಡ ಮುಕ್ರಿ: ತನ್ನ ತಂದೆ ಕಾಲದಲ್ಲಿ ಕಟ್ಟಿದ ಹಳೆಯ ಮನೆಯಲ್ಲಿ ಕಳೆದ ಹಲವು ವರ್ಷಗಳಿಂದ ಒಬ್ಬಂಟಿಯಾಗಿ ಕತ್ತಲೆಯ ಬದುಕು ಬದುಕುತ್ತಿರುವ ಇಲ್ಲಿನ ನಾರಾಯಣ ಗಿಡ್ಡ ಮುಕ್ರಿ ಇವನ ಸ್ಥಿತಿ ಆ ದೇವರಿಗೆ ಪ್ರೀತಿ. ಇವನಿಗೀಗ ಅಂದಾಜು 58 ವರ್ಷ ಪ್ರಾಯ. ಈತ, ಇಲ್ಲಿನ ಇತರರಂತೆ ತನ್ನ ಹೊಟ್ಟೆ ಪಾಡಿಗಾಗಿ ಕಾಂಕ್ರೀಟ್ ಕೆಲಸ ಮಾಡುತ್ತಾನೆ. ಈತನ ತಾಯಿ ನಾಲ್ಕೈದು ವರ್ಷದ ಹಿಂದೆ ವಯೋಸಹಜ ಖಾಯಿಲೆಯಿಂದ ಮೃತಪಟ್ಟರೆ, ಈತನ ಹೆಂಡತಿ ಸಹ ಖಾಯಿಲೆಯಿಂದ ಎರಡು ವರ್ಷದ ಹಿಂದೆ ಮೃತಪಟ್ಟಿದ್ದಾಳೆ. ಈತನಿಗೆ ಮಕ್ಕಳಿಲ್ಲ. ಈತ ಮೊದಲಿನಿಂದಲೂ ಯಾರ ತಂಟೆ ತಕರಾರಿಗೂ ಹೋಗದ, ತಾನಾಯ್ತು ತನ್ನ ಕೆಲಸವಾಯ್ತು ಎಂದು ಇರುವಂತ ಸಭ್ಯ ವ್ಯಕ್ತಿ. ಈತನಲ್ಲದೇ, ಈತನ ತಾಯಿ ಸಹ, (ಮೃತಕ್ಕೂ ಮೊದಲು) ಈ ಹಿಂದೆ ಹಲವು ವರ್ಷಗಳಿಂದ ಹಲವು ಬಾರಿ ತಮಗೊಂದು ಹೊಸ ಮನೆ ಮಂಜೂರಿ ಮಾಡಿಕೊಡಿ ಎಂದು ಇಲ್ಲಿನ ಗ್ರಾಮ ಪಂಚಾಯತ್ನ ಜನಪ್ರತಿನಿಧಿ/ಅಧಿಕಾರಿಗಳಲ್ಲಿ ಅಂಗಲಾಚಿ ಬೇಡಿಕೊಂಡಿದ್ದರೂ, ಅದ್ಯಾವ ಪ್ರಯೋಜನವೂ ಇವರಿಗಾಗಿಲ್ಲ. ಈಗಿದ್ದ ಮನೆಗೆ ವಿದ್ಯುತ್ ನ್ನಾದರೂ ಒದಗಿಸಿ ಕೊಡುವಂತೆ ಈ ತಾಯಿ(ಇದ್ದಾಗ) ಮತ್ತು ಮಗ ಹಲವಾರು ಬಾರಿ ಇಲ್ಲಿನ ಗ್ರಾಮ ಪಂಚಾಯತಿಗೂ – ಮನೆಗೂ ಅಲೆದಿದ್ದಾರೆ. ಆದರೆ, ಕೀವು ತುಂಬಿದ ಕಿವಿಗಳು, ಪೊರೆ ತುಂಬಿದ ಕಣ್ಣುಗಳಿರುವ ಈ ವ್ಯವಸ್ಥೆಗೆ ಇವರ ಅವಸ್ತೆಯ ಕೂಗು, ಕಷ್ಟ ಕೇಳಲೂ ಇಲ್ಲ, ಕಾಣಲೂ ಇಲ್ಲ. ಆದ್ದರಿಂದ, ಈತ ಈಗಲೂ ತನ್ನ ಶಿಥಿಲಾವಸ್ಥೆಯ ಹಳೆಯ ಮನೆಯಲ್ಲೇ ಒಬ್ಬಂಟಿಯಾಗಿ ಕತ್ತಲೆಯ ಬದುಕು ಬದುಕುತ್ತಿದ್ದಾನೆ. ಈತನೇ ತನ್ನ ಸಂಬಂಧಿಯೊಬ್ಬರ ಸಹಾಯದಿಂದ ತನ್ನ ಶಿಥಿಲಾವಸ್ಥೆಯಲ್ಲಿರುವ ಮನೆಯ ಮೇಲ್ಚಾವಣಿಯನ್ನು ತನ್ನ ಸ್ವಂತ ಖರ್ಚಿನಲ್ಲಿ ವರ್ಷದ ಹಿಂದೆ ಸ್ವಲ್ಪ ಮಟ್ಟಿಗೆ ದುರಸ್ತಿ ಮಾಡಿಕೊಂಡಿದ್ದಾನೆ. ಈತನಿಗೆ ಈ ಹಳೆಯ ಮನೆಯ ಬಿಟ್ಟರೆ, ಸರಕಾರದಿಂದ ಸಿಗುವ ರೆಶನ್ ಅಕ್ಕಿ, ಅಪರೂಪಕ್ಕೆ ಒಂದು ಲೀಟರ ಸೀಮೆ ಎಣ್ಣೆ, ಸರಕಾರದ ಈ ಎರಡು ಸೌಲಭ್ಯಗಳಷ್ಟೇ ಈತನ ಸೌಭಾಗ್ಯವಾಗಿದೆ. ಇಲ್ಲಿನ ರೇಶನ್ ಅಂಗಡಿಯಲ್ಲಿ 2-3 ತಿಂಗಳಿಗೊಮ್ಮೆ ಕೊಡುವ 1ಲೀಟರ್ ಸೀಮೆ ಎಣ್ಣೆಯನ್ನೆ ಈತ ನಂಬಿಕೊಂಡಿದ್ದಾನೆ. ಸೀಮೆ ಎಣ್ಣೆಯ ದೀಪದ ಬೆಳಕಿನಲ್ಲೇ ಈತನ ರಾತ್ರಿಯ ಊಟ, ಅಡುಗೆ ಎಲ್ಲವೂ. ಈತ ಕಟ್ಟಿಗೆಯ ಒಲೆಯಲ್ಲೆ ತನ್ನ ಅಡುಗೆ ತಯಾರಿಸಿಕೊಳ್ಳುತ್ತಾನೆ.

ಪೊಲೀಸರಲ್ಲಿ ವಿನಂತಿ: ಈತನ (ನಾರಾಯಣ) ಹೆಂಡತಿ ಮೃತಪಟ್ಟಿದ್ದರಿಂದ ಈತನಿಗೆ ಆಕೆ ಇಂದ ಸಂಘವೊಂದರ ಹಣ ಸುಮಾರು 40 ರಿಂದ 50 ಸಾವಿರ ಇತ್ತೀಚೆಗೆ ಸಿಕ್ಕಿತ್ತು. ಇದನ್ನು ನೋಡಿ, ಗೊತ್ತಿದ್ದವರ್ಯಾರೋ ಈತ ಮನೆಯಲ್ಲಿ ಇಲ್ಲದಿದ್ದಾಗ ಈತನ ಮನೆಯೊಳಗೆ ನುಗ್ಗಿ ಹಣ ಇಟ್ಟ ಟ್ರಂಕ್ ನ ಬೀಗ ಮುರಿದು ಈತನ ಪೂರ್ತಿ ಹಣ ಕದ್ದಿದ್ದಾರೆ. ಈತ ಅಸಾಯಕನಾಗಿರುವುದರಿಂದ ಈ ಬಗ್ಗೆ ಪೊಲೀಸ್ ದೂರು ಸಹ ದಾಖಲಾಗಿಲ್ಲ. ಈಗಲಾದರೂ ಪೊಲೀಸರು ಈತನಿಂದ ದೂರು ದಾಖಲಿಸಿಕೊಂಡು, ಕದ್ದವರಿಂದ ಆ ಹಣ ಆತನಿಗೆ ವಾಪಸ್ ಕೊಡಿಸಿ, ಅವರನ್ನು ಕಂಬಿ ಹಿಂದೆ ಕಳಿಸುವ ಕಾರ್ಯ ಮಾಡಬೇಕೆಂದು ಸ್ಥಳಿಯರು ವಿನಂತಿಸಿಕೊಂಡಿದ್ದಾರೆ.

ನಾಗಿ ಗಣಪು ಮುಕ್ರಿ: ಇನ್ನು, ಇದೇ ಕೇರಿಯ ವೃದ್ಧೆ, ವಿಧವೆ ನಾಗಿ ಗಣಪು ಮುಕ್ರಿ ಮತ್ತು ಮಕ್ಕಳಿರುವ ಮನೆಯ ಮೇಲ್ಚಾವಣಿ ಈಗಲೋ ಆಗಲೋ ಬೀಳುವಂತಿದೆ.
ಇವಳ ಬಾವ ಜೋಗಿ ಮುಕ್ರಿ (ಗಂಡನ ಅಣ್ಣ)ನ ಮನೆ ನದಿಯ ಪಿಚಿಂಗ್ ಮೇಲಿದ್ದರೆ, ಅದರ ಪಕ್ಕವೇ ಇವರ ಮನೆ ಇದ್ದು, ಮನೆ ಇರುವಷ್ಟೇ ಈ ಇಬ್ಬರ ಜಾಗ.
ಸರಿಯಾಗಿ ಓಡಾಡಲು ಸಹ ಆಗದ ಈ ವೃದ್ಧ ಮಹಿಳೆ ನಾಗಿಗೆ ಇನ್ನೂ ವಿಧವಾ ವೇತನವಾಗಲಿ, ವೃದಾಪ್ಯ ವೇತನವಾಗಲಿ ಅಥವಾ ಸರಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀಯ ರೂ. 2 ಸಾವಿರ ಭಾಗ್ಯವಾಗಲಿ ಇನ್ನೂ ಸಿಕ್ಕಿಲ್ಲ.

ಶಿವು ಅಮವಾಸೆ ಮುಕ್ರಿ: ಯುವಕ ಶಿವು ಮುಕ್ರಿಯು ತನ್ನ ಅನಾರೋಗ್ಯದಿಂದ ಹಾಸಿಗೆ ಹಿಡಿದ ವೃದ್ಧ ತಾಯಿಯ ಎಲ್ಲಾ ಚಾಕರಿ, ಮನೆ ಕೆಲಸದ ಜೊತೆ, ಹೊಟ್ಟೆಯ ಹಿಟ್ಟಿಗಾಗಿ ಕಾಂಕ್ರೀಟ್ ಕೆಲಸ ಮಾಡುತ್ತಾನೆ. ಈತನೀಗ ವಿವಿಧ ಸಂಘ, ಬ್ಯಾಂಕ್ ಗಳಿಂದ ರೂ. 4 ಲಕ್ಷಕ್ಕೂ ಹೆಚ್ಚು ಸಾಲ ಪಡೆದು ಸ್ವತಂತ್ರವಾಗಿ ಹೊಸ ಮನೆ ನಿರ್ಮಿಸುತ್ತಿದ್ದಾನೆ. ಇಲ್ಲಿನ ಬಡಗಣಿ ನದಿಯ ತಡೆಗೋಡೆಗೆ ಹೊಂದಿಕೊಂಡಿರುವ, ಕೇವಲ ಮನೆಯಷ್ಟೇ ಇರುವ ಇವರ ಪುಟ್ಟ ಜಾಗಕ್ಕೆ ಆರ್. ಟಿ. ಸಿ. ಇಲ್ಲ. ಇದೇ ಕಾರಣಕ್ಕೆ ಇವರ ಈ ಬಡಕುಟುಂಬಕ್ಕೆ ಸರಕಾರಿ ಮನೆ ಕೊಡಲಾಗುವುದಿಲ್ಲ ಎಂದು ಇಲ್ಲಿನ ಸಂಬಂಧ ಪಟ್ಟವರು ಹೇಳಿದ್ದಾರೆ ಎನ್ನುವುದು ಈ ಯುವಕನದ್ದು. ಆದರಿಂದ, ಲಕ್ಷಗಟ್ಟಲೆ ಸಾಲ ಪಡೆದು ಮನೆ ಕಟ್ಟಿಕೊಳ್ಳುತ್ತಿದ್ದಾನೆ.
ಒಂದು ಕಡೆ ಅನಾರೋಗ್ಯದಿಂದ ಹಾಸಿಗೆ ಹಿಡಿದ ಹೆತ್ತಬ್ಬೆಯ ಔಷದೋಪಚಾರದ ನಡುವೆ ಈತ ದುಡಿಮೆಗೆ ಹೋಗಬೇಕು. ಇದರ ನಡುವೆ ಈಗ ಸಾಲಮಾಡಿ ಸ್ವಂತ ಮನೆ ಕಟ್ಟಿಕೊಳ್ಳುತ್ತಿದ್ದಾನೆ. ಕಾಂಕ್ರೀಟ್ ಕೆಲಸ ಮಾಡುವ ಈತ, ತನ್ನ ಈ ಎಲ್ಲಾ ಕಷ್ಟ, ಸಮಸ್ಯೆ, ನೋವುಗಳ ನಡುವೆ ಮನೆ ನಿರ್ಮಿಸುಲು ಮಾಡಿದ ಲಕ್ಷಗಟ್ಟಲೆ ಸಾಲದ ಹಣ ನಾಳೆ ತೀರಿಸುವುದಾದರೂ ಹೇಗೆ ಎನ್ನುವ ಚಿಂತೆ ಈಗ ಇವನನ್ನು ಕಾಡುತ್ತಿದೆ. ಸರಕಾರದಿಂದ ತನಗೊಂದು ಮನೆ ಮಂಜುರಾಗಿದ್ದರೆ ತುಂಬಾ ಒಳ್ಳೆಯದಾಗಿತ್ತು ಅಂತಾನೆ ಬಡ ಶಿವು ಮುಕ್ರಿ. ಈ ಮೇಲಿನ ಒಬ್ಬೊಬ್ಬರ ಕುಟುಂಬವು ಒಂದೊಂದು ರೀತಿಯಲ್ಲಿ ಸರಕಾರದ ಸೌಲಭ್ಯಗಳಿಂದ ವಂಚಿತವಾಗಿದೆ. ಹಾಗಂತ, ಈ ಎಲ್ಲರ ಕುಟುಂಕ್ಕೂ ಪಡಿತರ ಚೀಟಿ ಇದೆ. ಅಲ್ಲದೆ, ಈ ಪ್ರತಿ ಮನೆಯ ಎಲ್ಲಾ ಸದಸ್ಯರಿಗೂ ಆಧಾರ್ ಕಾರ್ಡ್, ವೋಟಿಂಗ್ ಕಾರ್ಡ್ ಸಹ ಇದೆ. ಪ್ರತೀ ಚುನಾವಣೆಯಲ್ಲೂ ಇವರೆಲ್ಲಾ ತಪ್ಪದೇ ತಮ್ಮ ಹಕ್ಕು (ಮತದಾನ)ಚಲಾಯಿಸುತ್ತಾರೆ. ಅಷ್ಟೇ ಅಲ್ಲ, ಕಾಲಕಾಲಕ್ಕೆ ತಮ್ಮ ಹರಕುಮುರಕು ಮನೆಗಳಿಗೆ ತಪ್ಪದೆ ಇಲ್ಲಿನ ಗ್ರಾಮ ಪಂಚಾಯತಕ್ಕೆ ಇವರೆಲ್ಲಾ ತೆರಿಗೆ ತುಂಬುತ್ತಿದ್ದಾರೆ. ಆದರೂ, ಇವರೆಲ್ಲಾ ಸರಕಾರದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇನ್ನಾದರೂ ಇವರಿಗೆ ಸರಕಾರದ ಸೌ ‘ಭಾಗ್ಯ’ ಗಳನ್ನು ನಮ್ಮ ಅಧಿಕಾರಿ/ಜನಪ್ರತಿನಿಧಿಗಳು ಒದಗಿಸಿಕೊಡುತ್ತಾರೆಯೇ ಎಂದು ಕಾದುನೋಡಬೇಕು…

-ಕರುನಾಡ ಕಂದ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ