ವಿಜಯನಗರ ಜಿಲ್ಲೆಯ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದಲ್ಲಿ ದಿ;07-12-2024 ರಂದು ಸೂಲದಹಳ್ಳಿ- ಗೊಲ್ಲರಹಟ್ಟಿಯ ಸಿ.ಸಿ. ರಸ್ತೆ (16.33 ಲಕ್ಷಗಳು) ಹಾಗೂ ಮೊರಬನಹಳ್ಳಿ- ಗೊಲ್ಲರಹಟ್ಟಿ ಸಿ. ಸಿ. ರಸ್ತೆಯ (21.58 ಲಕ್ಷಗಳು) ಕಾಮಗಾರಿಯ ಭೂಮಿ ಪೂಜೆಯನ್ನು ಮಾನ್ಯ ಶಾಸಕರಾದ ಡಾ.ಶ್ರೀನಿವಾಸ್. ಎನ್.ಟಿ. ಅವರು ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು, ಗೊಲ್ಲರಹಟ್ಟಿಗಳ ಹಿರಿಯರು ಹಾಗೂ ಸಂಘಟನಾಕಾರರೊಂದಿಗೆ ನೆರವೇರಿಸಿದರು.
ಶಾಸಕರು ಮಾತನಾಡುತ್ತಾ, ಚುನಾವಣೆ ಸಂದರ್ಭದಲ್ಲಿ ಪ್ರತಿ ಗೊಲ್ಲರಹಟ್ಟಿಗಳಿಗೆ ಭೇಟಿ ನೀಡಿ ನೋಡಿದಾಗ, ಆರ್ಥಿಕ, ಸಾಮಾಜಿಕ ಹಾಗೂ ಮೂಲಭೂತ ಸೌಕರ್ಯಗಳಿಂದ ಹಿಂದುಳಿದಿರುವುದನ್ನು ಗಮನದಲ್ಲಿಟ್ಟುಕೊಂಡು, ಪ್ರಸ್ತುತ ದಿನಗಳಲ್ಲಿ ಏಕಕಾಲದಲ್ಲಿ 18 ಗೊಲ್ಲರಹಟ್ಟಿಗಳಿಗೆ ಒತ್ತು ಕೊಡುವ ನಿಟ್ಟಿನಲ್ಲಿ ಈಗಾಗಲೇ ಸರ್ಕಾರದಲ್ಲಿ 4 ಕೋಟಿ ಅನುದಾನ ತಂದು ಕೆಲಸ ಮಾಡುತ್ತೇವೆ ಎಂದೂ ಹೇಳಿದರು.
ಎಲ್ಲಾ ವರ್ಗದ ಜನರು ಇರುವಂತಹ ಕ್ಷೇತ್ರ ವಿದು. ಇಲ್ಲಿ ಅವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮುಖ್ಯವಾಗಿ, ಸಂಬಂಧಗಳಲ್ಲಿ ಮದುವೆಯಾಗುತ್ತಿರುವುದು ಇದೆ. ಹಾಗೆಯೇ, ಬಾಲ್ಯ ವಿವಾಹಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಹೀಗಾಗಿ ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಎಷ್ಟೇ ಅನುದಾನ ಕೊಟ್ಟರು ಸಹಿತ ಕಡಿಮೆ ಎಂದೂ ಹೇಳಿದರು.
ಆ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಮಂತ್ರಿಯೂ ನಮ್ಮ ಮನವಿಗೆ ಸ್ಪಂದಿಸಿ ಅನುದಾನ ಕೊಟ್ಟು ಅಭಿವೃದ್ಧಿಗೆ ಸ್ಪಂದಿಸುತ್ತಿರುವುದು ಇದೆ ಎಂದೂ ಹೇಳಿದರು.
ಶಾಸಕರು, ನಮ್ಮ ಅಭಿವೃದ್ಧಿ ನಡೆ ಹಳ್ಳಿಗಳ ಕಡೆ ಎಂದೂ ಹೇಳಿದರು. ನಿಮ್ಮ ಮನ ಬಿಚ್ಚಿದ ಮಾತುಗಳನ್ನು ಕೇಳಿಸಿಕೊಂಡಾಗ, ನಾನು ಸಹಿತ, ಮನಸ್ಸಿಂದ ಪ್ರತಿಯೊಂದು ವರ್ಗದ ಜನರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸೂಲದಹಳ್ಳಿ ಗ್ರಾ. ಪಂ. ಅಧ್ಯಕ್ಷರಾದ ಭೋವಿ ರತ್ನಮ್ಮ, ಉಪಾಧ್ಯಕ್ಷರು ಎನ್. ರತ್ನಮ್ಮ ಮತ್ತು ಗ್ರಾ. ಪಂ. ಸರ್ವ ಸದಸ್ಯರು, ಗೊಲ್ಲಸಮುದಾಯ ಜಿಲ್ಲಾ ಅಧ್ಯಕ್ಷರಾದ ಶ್ರೀ ಗುರುಲಿಂಗಪ್ಪ, ತಾಲೂಕು ಅಧ್ಯಕ್ಷರಾದ ದೊಡ್ಡಪ್ಪ, ಮುಖಂಡರಾದ ಗೌಡ್ರು ಗಪ್ಪಣ್ಣ, ಸಿದ್ದಪ್ಪ, ಪಾತ್ರಿ ಸಿದ್ದಪ್ಪ, ಋಷಿಭೇಂದ್ರ, ತಿಮ್ಮಣ್ಣ, ಕೌವಲಪ್ಪ, ಕಲ್ಲೇಶ, ಮಲ್ಲೇಶ, ಮಹಾಂತೇಶ, ಹನುಮಂತ, ಕೊಟ್ರೇಶ, ಮಲ್ಲಿಕಾರ್ಜುನ ಹಾಗೂ ಮೊರಬನಹಳ್ಳಿ ಗೊಲ್ಲರಹಟ್ಟಿ ಭಾಗದ ಮಾಜಿ ತಾ. ಪಂ. ಸದಸ್ಯರಾದ ಕೊಟ್ರೇಶ, ಹಾಗೂ ಮುಖಂಡರಾದ ವೀರಭದ್ರಪ್ಪ, ಬಸವರಾಜ, ಶಾಲೆ ಮಾರಪ್ಪ, ಕರಿಯಪ್ಪ, ಮಂಜುನಾಥ, ಹೊನ್ನೂರಾಲಿ, ಓಬಣ್ಣ ಮೇಷ್ಟ್ರು, ಗ್ರಾ. ಪಂ.ಸದಸ್ಯರಾದ ರತ್ನಮ್ಮ ಜಾತಪ್ಪ, ಇನ್ನೂ ಮುಂತಾದವರು, ಊರಿನ ಗ್ರಾಮಸ್ಥರು ಮತ್ತು ಹಿರಿಯರು ಉಪಸ್ಥಿತರಿದ್ದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ .ಟಿ.
