ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಪಟ್ಟಣದ ಆಜಾದ್ ನಗರದ ಬಾಣಂತಿಯರಾದ ಸುಮಯ್ಯ ಬಾನು( 23) ಗಂಡ ಅಬ್ದುಲ್ ರೆಹಮಾನ್ ಅವರು ದಿ; 05-12-2024 ರಂದು ಹಾಗೂ ಚಂದ್ರಶೇಖರಪುರ ಗ್ರಾಮದ ಮಹಾಲಕ್ಷ್ಮಿ(20) ಗಂಡ ಮಾರೇಶ್ ಅವರು ದಿ; 27-11-2024 ರಂದು ಆರೋಗ್ಯದಲ್ಲಿ ತೊಂದರೆಯಾಗಿದ್ದು, ಬಳ್ಳಾರಿಯ ಬೀಮ್ಸ್ ಆಸ್ಪತ್ರೆಯಲ್ಲಿ ನಿಧನರಾದ ಹಿನ್ನೆಲೆಯಲ್ಲಿ,
ಎಚ್ಚೆತ್ತುಕೊಂಡಿರುವ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ ದಿನೇಶ್ ಗುಂಡೂರಾವ್ ಅವರು ಹಾಗೂ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು, ದಿ; 07-12-2024 ರಂದು ದುಃಖದಲ್ಲಿರುವ ಬಾಣಂತಿಯರ ಕುಟುಂಬಗಳಿಗೆ ಭೇಟಿ ನೀಡಿ, ಸರ್ಕಾರದ ಪರವಾಗಿ ಸಾಂತ್ವಾನ ಹೇಳಿ ಧೈರ್ಯ ತುಂಬಿದರು. ಹಾಗೆಯೇ, ಸರ್ಕಾರದಿಂದ ಬರುವ ಪರಿಹಾರದ ಜೊತೆಗೆ ಹೆಚ್ಚಿನದಾಗಿ ಒದಗಿಸಿಕೊಡಲು ಬರುವ ಅಧಿವೇಶನದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ, ಸಚಿವರು ಈ ವೇಳೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾನ್ಯ ವಿಜಯನಗರ ಜಿಲ್ಲಾಧಿಕಾರಿಗಳಾದ ಎಂ.ಎಸ್, ದಿವಾಕರ್, ಕೂಡ್ಲಿಗಿ ತಾಲೂಕಿನ ತಹಶೀಲ್ದಾರರಾದ ಎಂ.ರೇಣುಕಾ, ಸಾರ್ವಜನಿಕ ತಾಲೂಕು ಆಡಳಿತ ವೈದ್ಯಾಧಿಕಾರಿಗಳಾದ ಡಾ. ಎಸ್. ಪ್ರದೀಪ್ ಮತ್ತು ಸಿಬ್ಬಂದಿ ವರ್ಗ, ಸಿಪಿಐ ಸುರೇಶ್ ತಳವಾರ್ ಮತ್ತು ಸಿಬ್ಬಂದಿ ವರ್ಗ, ಪಟ್ಟಣ ಪಂಚಾಯತಿ ಆಡಳಿತ ವರ್ಗ ಮತ್ತು ಸಿಬ್ಬಂದಿಗಳು, ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಶ್ರೀ ಕಾವಲಿ ಶಿವಪ್ಪನಾಯಕ, ಉಪಾಧ್ಯಕ್ಷರಾದ ಲೀಲಾವತಿ ಕೆ. ಪ್ರಭಾಕರ್, ಸರ್ವ ಸದಸ್ಯರು, ಕಾಂಗ್ರೆಸ್ ಮುಖಂಡರು ಹಾಗೂ ಸಮಾಜ ಸೇವಕರಾದ ಶ್ರೀಯುತ ತಮ್ಮಣ್ಣ ಎನ್. ಟಿ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಸಯ್ಯದ್ ಶೂಕರ್ ಅವರು, ಮುಖಂಡರಾದ ಲಾಯರ್ ಬಷಿರ್, ಜಿಲಾನ್, ಮಾದಿಹಳ್ಳಿ ನಜೀರ್, ಇನಾಯತ್ ಇಲಿಯಾಸ್, ಅಬ್ದುಲ್ , ಶಫಿ ಉಲ್ಲ, ಅನ್ನಾನ್ ಶಫಿ ರಫಿಕ್, ದಾದು, ಇಬಾದುಲ್, ಲಂಕೇಶ್, ಯರಿಸ್ವಾಮಿ, ದುರ್ಗಾದಾಸ್, ಕಡ್ಡಿ ಮಂಜಣ್ಣ, ಆಶಾ ಕಾರ್ಯಕರ್ತರಾದ ಸಾವಿತ್ರಿ, ಪತ್ರಕರ್ತರು, ಸ್ಥಳೀಯ ಹಿರಿಯರು, ಇನ್ನೂ ಮುಂತಾದವರು ಉಪಸ್ಥಿತರಿದ್ದರು
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
