ವಿಜಯನಗರ: ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ವಿರೂಪಾಪುರ ಗ್ರಾಮದ ಕಾಂಗ್ರೆಸ್ ಮುಖಂಡರಾದ ಹರೀಶ್ ಅವರ ತಾಯಿ ಹಾಗೂ ಬಯಲಾಟ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತರಾದ ರಂಗನಟಿ ಶ್ರೀಮತಿ ಬಿ. ಗಂಗಮ್ಮ ಅವರ ಕನ್ನಡ ರಂಗಭೂಮಿಯಲ್ಲಿ ಕಳೆದ 40 ವರ್ಷಗಳಿಂದ ಕಲಾ ಕ್ಷೇತ್ರದ ಜೀವಮಾನದ ಸಾಧನೆಯನ್ನು ಗುರುತಿಸಿ ಕರ್ನಾಟಕ ಬಯಲಾಟ ಅಕಾಡೆಮಿಯಿಂದ ಗೌರವ ಪ್ರಶಸ್ತಿ ನೀಡಿ ಗೌರವಿಸಿದ ನಿಟ್ಟಿನಲ್ಲಿ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಅವರ ಕುಟುಂಬಕ್ಕೆ ಭೇಟಿ ನೀಡಿ ದಿ – 07-11-2024 ರಂದು ಕಲಾವಿದೆಯನ್ನು ಸನ್ಮಾನಿಸಿ, ಅಭಿನಂದನೆಗಳು ಸಲ್ಲಿಸಿದರು.
ಶಾಸಕರು ಮಾತನಾಡಿ ನಮ್ಮ ತಾಲೂಕು ಮತ್ತು ಜಿಲ್ಲೆಗೆ ತಾವು ಒಳ್ಳೆಯ ಹೆಸರನ್ನು ತಂದುಕೊಟ್ಟಿದ್ದೀರಿ
ಆ ನಿಟ್ಟಿನಲ್ಲಿ ನೀವು ಕನ್ನಡ ರಂಗಭೂಮಿಗೆ ನೀಡಿರುವ ಕೊಡುಗೆಗಳು ಅಪಾರ ಎಂದು ಅವರ ಸಾಧನೆ ಹಾದಿಯನ್ನು ಸ್ಮರಿಸಿಕೊಂಡು ಶಾಸಕರು ಹೆಮ್ಮೆ ಪಟ್ಟರು ಹಾಗೂ ರಂಗಭೂಮಿ ಕಲಾವಿದರು ಇತ್ತೀಚಿಗೆ ಕಣ್ಮರೆಯಾಗುತ್ತಿದ್ದಾರೆ, ನೀವು ಹಲವಾರು ಸಾಹಿತಿ ಕಲಾಕ್ಷೇತ್ರಗಳಿಂದ ಹಾಗೂ ರಂಗಭೂಮಿ ನಟಿಯಾಗಿ ಗುರುತಿಸಿಕೊಂಡಿದ್ದೀರಿ ಕಲೆಗೆ ಬೆಲೆ ಕೊಡಬೇಕು ಕಲೇಯೇ ನೆಲೆ ಆಗುತ್ತೆ ನೆಲೆಯ ಜೀವನ ಆಗುತ್ತದೆ ಅದರಿಂದ ಎಷ್ಟೋ ಜನ ತನ್ನ ಜೀವನವನ್ನೇ ಮುಡುಪಾಗಿಟ್ಟು ಆ ಕ್ಷೇತ್ರದಲ್ಲಿ ಅವರಿಗೆ ಜಯವನ್ನು ಸಾಧಿಸಲು ಸಹಕಾರಿಯಾಗಿದೆ ಇಂದು ಹೆಮ್ಮೆಪಟ್ಟರು ಹಾಗೂ ಹಾಗೂ ಆ ದೇವರು ನಿಮಗೆ ನೀವು, ಸುಖ, ಶಾಂತಿ, ಸಂತೋಷ ಮತ್ತು ನೆಮ್ಮದಿಯಿಂದ ಅನ್ಯೋನ್ಯವಾಗಿ ನೂರು ವರ್ಷಗಳ ಕಾಲ ಬಾಳಬೇಕು ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ
ರಂಗನಟಿಯರಾದ ಅಂಜಿನಮ್ಮ, ಮಂಜುಳಾ, ಮುಖಂಡರಾದ ಚೌಡಾಪುರ ಮಲ್ಲಿಕಾರ್ಜುನ, ಗಾಣಗಟ್ಟೆ ಮಹಾಂತೇಶ, ಗ್ರಾಮಸ್ಥರು, ಹಿರಿಯರು ಉಪಸ್ಥಿತರಿದ್ದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
