ವಿಜಯಪುರ : ಜಿಲ್ಲಾ ವಕೀಲರ ಸಮುದಾಯ ಭವನದಲ್ಲಿ ಭಗವದ್ಗೀತಾ ಮತ್ತು ಕಾನೂನು ಎಂಬ ವಿಷಯದ ಮೇಲಿನ ಚಿಂತಾನಾಗೋಷ್ಠಿಯು ವಿಜಯಪುರ ವಕೀಲರ ಭವನದಲ್ಲಿ ಸುಂದರವಾಗಿ ನೆರವೇರಿತು.
ಶಿರಸಿ ಸೋಂದಾ ಶ್ರೀ ಸ್ವರ್ಣವಲ್ಲಿ ಮಠ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳ ದಿವ್ಯ ಮಾರ್ಗದರ್ಶನದಲ್ಲಿ ಈ ವರ್ಷ ವಿಜಯಪುರವನ್ನು ಕೇಂದ್ರವಾಗಿಸಿಕೊಂಡು ಶ್ರೀ ಭಗವದ್ಗೀತಾ ಅಭಿಯಾನವು ನಡೆಯುತ್ತಿದೆ. ನವೆಂಬರ್ ನಾಲ್ಕರಂದು ವಿಜಯಪುರ ಜಿಲ್ಲೆಯಲ್ಲಿ ಉದ್ಘಾಟನೆಗೊಂಡು ಅನೇಕ ವಿಶಿಷ್ಟ ಕಾರ್ಯಕ್ರಮಗಳು ನೆರವೇರಿದವು. ಅದರಲ್ಲಿ ಇಂದಿನ ಚಿಂತನಾಗೋಷ್ಠಿಯೂ ಒಂದು ಇಂದಿನ ಶ್ರೀ ಭಗವದ್ಗೀತೆ ಮತ್ತು ಕಾನೂನು ಚಿಂತನಾ ಗೋಷ್ಠಿಯಲ್ಲಿ ದಿವ್ಯ ಸಾನ್ನಿಧ್ಯವನ್ನು ಶ್ರೀಮದ್ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಸ್ವರ್ಣವಲ್ಲೀ ಹಾಗೂ ಶ್ರೀ ಬಸವಲಿಂಗ ಸ್ವಾಮೀಜಿ ಜ್ಞಾನಯೋಗಾಶ್ರಮ ವಿಜಯಪುರ ವಹಿಸಿದ್ದರು.
ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ಶ್ರೀನಿವಾಸ ಹರೀಶ್ ಕುಮಾರ್ ಅವರು ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ತಮ್ಮ ಉದ್ಘಾಟನಾ ಮಾತುಗಳನ್ನಾಡಿದರು.
ಹಿರಿಯ ವಕೀಲರು ಶ್ರೀ ಅಶೋಕ ಹಾರ್ನಳ್ಳಿಯವರು ಭಗವದ್ಗೀತೆಯಲ್ಲಿ ಅಡಕವಾಗಿರುವ ಕಾನೂನಿನ ವಿಶೇಷ ಚಿಂತನೆಯನ್ನು ನಿರೂಪಿಸಿದರು.
ಜಿಲ್ಲಾ ನ್ಯಾಯಾಧೀಶರಾದ ಶ್ರೀ ಶಿವಾಜಿ ಅನಂತ ನಾಲ್ವಡೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು ಶ್ರೀ ಡಿ ಜಿ ಬಿರಾದಾರ ಹಾಗೂ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ ವಿ ಎನ್ ಹೆಗಡೆ ಬೊಮ್ಮನಳ್ಳಿ, ಜಿಲ್ಲಾ ನ್ಯಾಯಾಲಯದ ವಕೀಲರು, ಜಿಲ್ಲಾ ವಕೀಲರ ಸಂಘದ ಪ್ರಮುಖರು, ಅನೇಕ ವಕೀಲರು, ವಿದ್ಯಾರ್ಥಿಗಳು ಇತರರು ಇದ್ದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
