ಬೀದರ್ ಜಿಲ್ಲೆ ಔರಾದ್ ತಾಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಸಹಾಯಕ ಕಾರ್ಯನಿರ್ವಾಹ ಅಭಿಯಂತರರಾದ ಸುಭಾಷ್ ಮತ್ತು ಹಿರಿಯ ಅಭಿಯಾoತರರಾದ ಶಿವರಾಜ್ ಪಾಟೀಲ್ ಕೌಠಾ (ಬಿ ) ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಕೊಳವೆ ಬಾವಿ ತೋಡದೆ ಕಳಪೆ ಸಾಮಗ್ರಿಗಳನ್ನು ಬಳಸಿ ಗುತ್ತೆದಾರರ ಹೆಸರಿನಲ್ಲಿ ಕೆಲಸ ಮಾಡಿ ನಕಲಿ ದಾಖಲೆ ಸೃಷ್ಟಿಸಿ ಹಣ ಲೂಟಿ ಮಾಡಿದ್ದು ತನಿಖೆ ಮಾಡಿ ಕೌಠಾ( ಬಿ) ಗ್ರಾಮದಲ್ಲಿ ಒಂದು ಕೋಟಿ, ಕೌಡಗಾoವ್ ಗ್ರಾಮದಲ್ಲಿ 80 ಲಕ್ಷ ನಕಲಿ ಬಿಲ್ಲು ಪಾವತಿ ಆಗಿದೆ ಒಂದು ವಾರದಲ್ಲಿ ತನಿಖೆ ಮಾಡಿಲ್ಲವಾದರೆ ಕೌಠಾ ಬಿ ಗ್ರಾಮ ಪಂಚಾಯತಿ, ತಾಲೂಕ ಪಂಚಾಯತ್, ಜಿಲ್ಲಾ ಪಂಚಾಯತಿಗೆ ಮುತ್ತಿಗೆಗಳನ್ನು ಹಾಕಿ ಸತ್ಯಾಗ್ರಹದ ಮೂಲಕ ದಲಿತ ವಿಮೋಚನಾ ಮಾನವ ಹಕ್ಕುಗಳ ವೇದಿಕೆ ಬಾಬುರಾವ್, ಮಾನವ ಹಕ್ಕು ವೇದಿಕೆ ತಾಲೂಕ ಅಧ್ಯಕ್ಷರು ನಾಗೇಶ್ ದೇವರೇ ಕೌಠಾ ಬಿ ನೇತೃತ್ವದಲ್ಲಿ ಗ್ರಾಮದ ಮುಖ್ಯಸ್ಥರು, ಗ್ರಾಮದ ಎಲ್ಲಾ ಗ್ರಾಮಗಳ ಮುಖ್ಯ ನಾಯಕರಾದಿಯಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ವರದಿಗಾರ ಸಂಗಮೇಶ್ ಚಿದ್ರೆ
