ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅರವಿಂದರ ಮಹಾಕಾವ್ಯ –ʻʻಸಾವಿತ್ರಿʼʼಭಾರತೀಯ ಅಸ್ಮಿತೆ

ಉತ್ತರ ಕನ್ನಡ/ ಶಿರಸಿ: ಶ್ರೀ ಅರವಿಂದರು ಮತ್ತು ಶಿರಸಿ ನಗರಕ್ಕೂ ಅವಿನಾಭಾವ ಸಂಬಂಧವಿದೆ. ಶಿರಸಿಯ ಸುಪ್ರಸಿದ್ಧ ಚಿಂತಕ ಲೇಖಕ ಎಸ್.‌ ಎಮ್.‌ ಪಂಡಿತ್‌ ಅರವಿಂದರ ಆಪ್ತರಾಗಿ, ಅರವಿಂದ ತತ್ವಜ್ಞಾನದ ಆಳ ಆಭ್ಯಾಸಿಗಳಾಗಿ, ನೂರಾ ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು, ಇಪ್ಪತ್ತನೆಯ ಶತಕದ ಮಧ್ಯಭಾಗದಲ್ಲೇ ಇಂಗ್ಲಿಷ್ ಭಾಷೆಯಲ್ಲಿ ರಚಿಸುತ್ತಾರೆ. ಒಂದು ದೃಷ್ಟಿಯಲ್ಲಿ ಅರವಿಂದರ ತಾತ್ವಿಕತೆಯನ್ನು ಜಗತ್ಪ್ರಖ್ಯಾತಗೊಳಿಸಿದ ಕೀರ್ತಿ ಪಂಡಿತರಿಗೆ ಸಲ್ಲುತ್ತದೆ.
ಅದರಲ್ಲಿಯೂ ಶ್ರೀ ಅರವಿಂದರ ಸಾವಿತ್ರಿ ಮಹಾಕಾವ್ಯ, ಭಾರತೀಯ ತಾತ್ವಿಕ ಹೃದಯವುಳ್ಳ, ಇಂಗ್ಲಿಷ್ ಭಾಷೆಯ ಮಹತ್ವದ ಕೃತಿ.
ತಾತ್ವಿಕ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಆಯಾಮವನ್ನು ಪಡೆದಿರುವ ಪ್ರಸ್ತುತ ಕೃತಿ ನವೋದಯ ಕಾಲದ ಕುವೆಂಪು, ಬೇಂದ್ರೆ, ಗೋಕಾಕ್‌ ಸೇರಿ ಇಡೀ ಭಾರತೀಯ ಲೇಖಕ ಚಿಂತಕರುಗಳ ಮೇಲೆ ಗಾಢ ಪ್ರಭಾವ ಬೀರಿದೆ. ನಲ್ವತ್ತರ ದಶಕದಲ್ಲೇ ಅರವಿಂದರು ದರ್ಶಿಸಿದ ವೈಜ್ಞಾನಿಕ ಒಳನೋಟ, ಖಗೋಲದ ವೈಶಿಷ್ಟ್ಯ ಈಗ ನಿಜವಾಗುತ್ತಿದೆ. ವಿಶ್ವದ ಮಹಾಕಾವ್ಯ ಪರಂಪರೆಗೆ ಆರನೆಯ ಕೃತಿಯಾಗಿ ಸಲ್ಲಬಹುದಾದ ಸಾವಿತ್ರಿ ಕಠಿಣ ಇಂಗ್ಲಿಷ್ ಭಾಷೆಯಲ್ಲಿರುವುದರಿಂದ, ಭಾರತೀಯರಿಗೆ ದೂರವಾಯಿತು. ಇಂಗ್ಲಿಷ್ ಅರಿವಿರುವವರಿಗೆ ಭಾರತೀಯ ತತ್ವಪರಂಪರೆಯ ಅಜ್ಞಾನ, ಅವರಿಂದಲೂ ದೂರಗೊಂಡಿತು. ಈಗ ಸಾವಿತ್ರಿ ಎಲ್ಲಾ ಭಾಷೆಗಳಲ್ಲಿ ಅನುಸ್ಪಂದಗೊಳ್ಳುತ್ತಿದೆ. ಮೆಲ್ಲನೆ ಚಿಂತಕರ ಗಮನ ಸೆಳೆಯುತ್ತಿದೆ ಎಂದು ಸಾವಿತ್ರಿ ಕಾವ್ಯದ ಪದ್ಯಾನುವಾದವನ್ನು ಕನ್ನಡದಲ್ಲಿ ತಂದ, ಕವಿ ಪುಟ್ಟು ಕುಲಕರ್ಣಿ ಇತ್ತೀಚೆಗೆ ಶಿರಸಿಯ ಗಾಯತ್ರಿ ಬಳಗ ಏರ್ಪಡಿಸಿದ ʻʻ ಅರವಿಂದರ ಸಾವಿತ್ರಿ ಮಹಾಕಾವ್ಯ ಚಿಂತನೆ–ಮಂಥನʼʼ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ತುಮಕೂರಿನಿಂದ ಆಗಮಿಸಿದ ಭೌತವಿಜ್ಞಾನಿ, ಆಧ್ಯಾತ್ಮಿಕ ಚಿಂತಕ, ಯೋಗ ಸಾಧಕ ಪಿ. ಕೆ. ನಂದೀಶ್‌, ಕುವೆಂಪುವಂಥ ಮೇರು ಕವಿಗಳಮೇಲೆ ಅರವಿಂದರ ಪ್ರಭಾವಗಳ ಬಗೆಗೆ ವಿವರಿಸುತ್ತಾ ಸಾವಿತ್ರಿ ಮಹಾಕಾವ್ಯದ ಕೆಲವು ಪದ್ಯಗಳನ್ನು ಸುಶ್ರಾವ್ಯವಾಗಿ ಹಾಡಿ ಸಭೆಯ ಗಮನಸೆಳೆದರು.
ಸಭಾಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಅಶೋಕ ಹಾಸ್ಯಗಾರ, ನಮ್ಮೆಲ್ಲ ಮಹಾಕಾವ್ಯಗಳು, ಜನಪ್ರಿಯ ಗೊಂಡಿದ್ದು, ಓದಿನಿಂದಲ್ಲ. ಗಮಕಿಗಳಿಂದ, ಕೀರ್ತನೆ, ಯಕ್ಷಗಾನದಂತಹ ಮೌಖಿಕ ಕಲಾಪ್ರಕಾರಗಳ ಕೊಡುಗೆಯಿಂದ. ಸಾವಿತ್ರಿಯಂತಹ ಮಹತ್ವಪೂರ್ಣ ಆಧುನಿಕ ಮಹಾಕಾವ್ಯ ಇನ್ನಷ್ಟು ಜನಮನವನ್ನು ತಲುಪುವಂತಾಗಲು, ಮೌಖಿಕ ಪ್ರಸ್ತುತಿ ಅತ್ಯಂತ ಅವಶ್ಯ. ಗಾಯತ್ರಿ ಬಳಗದ ಮಹಾಕಾವ್ಯ ಸ್ಪಂದನ, ಒಂದು ಶ್ಲಾಘನೀಯ ಸಾಧನೆ, ಎಂದು ನುಡಿದರು.
ಗಾಯತ್ರಿ ಬಳಗದ ಇನ್ನೊಂದು ಮಹತ್ವದ ಬೆಳವಣಿಗೆಯೆಂದರೆ, ಮಾರುತಿ ವಾಚನಾಲಯ ( ಓದು ಮನೆ) ವನ್ನು ಪ್ರಾರಂಭಿಸಿದ್ದು. ಸಂಘಟನೆಯ ಸಂಚಾಲಕ ವಿ. ಜಿ. ಗಾಯತ್ರಿಯವರ ಖಾಸಗಿಯಾದ ಬ್ರಹತ್‌ ಗ್ರಂಥ ಸಂಗ್ರಹ, ಪುಸ್ತಕಪ್ರಿಯರ ಗಮನ ಸೆಳೆಯಿತು.
ಸುಬ್ರಾಯ ಮತ್ತೀಹಳ್ಳಿ ಸ್ವಾಗತಿಸಿದರು. ವಿ.ಜಿ.ಗಾಯತ್ರಿ ವಂದಿಸಿದರು. ಕವಿ ರಾಜೀವ ಅಜ್ಜೀಬಾಳ್‌ ನಿರ್ವಹಿಸಿದರು.

ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ