ಜಾಲಿ ರೈಡ್ ಪುಸ್ತಕದ ಕರ್ತೃ ಕವಿ ಹಾಗೂ ಲೇಖಕ ವಿ ಶ್ರೀನಿವಾಸ ವಾಣಿಗರಹಳ್ಳಿ, ದೊಡ್ಡಬಳ್ಳಾಪುರದವರು ಬರೆದಿರುವ ಈ ಪುಸ್ತಕ ವೀರಲೋಕ ಪುಸ್ತಕ ಸಂತೆಯಲ್ಲಿ ಬಿಡುಗಡೆಗೊಂಡ ಒಂದೊಳ್ಳೆ
ಪುಸ್ತಕವಾಗಿದೆ ಇದು ಪರ್ಸನಾಲಿಟಿ ಡೆವಲಪ್ಮೆಂಟ್ ಪುಸ್ತಕವಾಗಿದ್ದು ಓದುಗರ ಮನಸ್ಸನ್ನು ಏಕಕಾಲಕ್ಕೆ ಸೆಳೆದು ತನಲ್ಲಿ ಕೇಂದ್ರೀಕೃತವಾಗಿರಿಸಿಕೊಳ್ಳುತ್ತದೆ
ಈ ಪುಸ್ತಕವು ಬಾಲ್ಯದಿಂದ ಮುಪ್ಪಿನವರೆಗಿನ ಎಲ್ಲಾ ವ್ಯಕ್ತಿಗಳಿಗೂ ಸಹಾಯವಾಗುವಂತಹ ಪುಸ್ತಕವಾಗಿದೆ ಇಲ್ಲಿ ಲೇಖಕರು ಹೇಳುವ ಮಾತುಗಳೆಲ್ಲವೂ ಪ್ರಸ್ತುತ ದಿನಗಳ ಪರಿಸ್ಥಿತಿಗಳೇ ಸಾಧನೆಗೆ ಸಾಲು ಸಾಲು ಮೆಟ್ಟಿಲು ಎಂಬಂತೆ ನಾವು ಮಾಡಲೊರಡುವ ಸಾಧನೆಗೆ ಈ ಜಾಲಿ ರೈಟ್ ಪುಸ್ತಕ ಸ್ಪೂರ್ತಿ ಆಗಬಲ್ಲದು ಯುವಕರು ಹೇಗಿರಬೇಕು ಜೀವನದಲ್ಲಿ ಪೋಷಕರ ಪಾತ್ರವೇನು ಸಮಯವನ್ನು ಹೇಗೆ ಬಳಸಿಕೊಳ್ಳಬೇಕು, ಬದುಕಿನಲ್ಲಿ ಸಮಯ ಪ್ರಜ್ಞೆ ಹೇಗಿರಬೇಕು ಎಂಬೆಲ್ಲಾ ಅರಿವನ್ನು ನಮ್ಮಲ್ಲಿ ನಮಗೆ ಗೋಚರಿಸುವಂತೆ ಮಾಡುವ ಪುಸ್ತಕ ಈ ಜಾಲಿ ರೈಡ್ ಈಗಿನ ಯುವಕರೆಲ್ಲಾ ಇದ್ದಕ್ಕಿದ್ದ ಹಾಗೆ ಡಿಪ್ರೆಶನ್ ಗೆ ಹೋಗುತ್ತಾರೆ. ಫ್ರೆಂಡ್ಸ್ ಏನು ಅಂದ್ರು ಜೊತೆಯಲ್ಲಿದ್ದವರು ನೆಗೆಟಿವ್ ಆಗಿ ಮಾತಾಡಿದ್ರು ಎಂದು ನೆಗೆಟಿವಿಟಿನೇ ತುಂಬಿಕೊಂಡು ಅದರ ಬಗ್ಗೆ ಯೋಚಿಸುತ್ತಾರೆ ಅಂತವರಿಗೆಲ್ಲಾ ಇದು ಪಾಸಿಟಿವ್ ಆಗಿ ಥಿಂಕ್ ಮಾಡೋಕೆ ಹೆಲ್ಪ್ ಮಾಡುತ್ತೆ ಈ ಪುಸ್ತಕದಲ್ಲಿ ಕೆಲವೊಂದು ಗಾದೆಗಳು, ಪದಗಳು ನಮಗಾಗಿ ಬರೆದು ನಮಗಾಗಿ ಹೇಳಿದ್ದಾರೇನೋ ಎಂಬಂತಿವೆ ಎಲ್ಲಾ ಲೇಖನಗಳು ಓದುಗರನ್ನು ಸೆಳೆಯುವಂತಿದ್ದು ಛಲವಿರಲಿ ಗೆಲುವು ಬೇಕಾದರೆ, ಹೆಜ್ಜೆ ಗುರುತುಗಳು.. ಗೆಲುವಿನ ಕಡೆ ಗಮನವಿರಲಿ. ಮನಸ್ಸಿಗೆ ಕೊಂಚ ಮುಲಾಮು. ಆಲಿಸುವ ಕಲೆ. ಯು ಟರ್ನ್. ನಿರಂತರ ಪ್ರಯತ್ನ ಸಮಯ… ಇವೆಲ್ಲಾ ಬಹಳ ಸುಂದರವಾದ ಲೇಖನಗಳು .. ಈಗಿನ ಸಮಯದಲ್ಲಿ ಎಲ್ಲರಿಗೂ ಬೇಕಾದಂತಹ.. ಎಲ್ಲರೂ ಗಮನಹರಿಸಬೇಕೆಂದಾದಂತಹ.. ವಿಷಯಗಳಾಗಿವೆ.. ವಾಸ್ತವದ ಪ್ರಜ್ಞೆ ಮೂಡಿಸುವಂತಹ ಇಂತಹ ಪುಸ್ತಕವನ್ನು ಬಿಡುಗಡೆ ಮಾಡಿ ಪ್ರಪಂಚಕ್ಕೆ ನೀಡಿದ ವಿ ಶ್ರೀನಿವಾಸ್ ವಾಣಿಗರಹಳ್ಳಿ ಅವರಿಗೆ ಧನ್ಯವಾದಗಳು.. ಎಲ್ಲರೂ ಕೊಂಡು ಓದಿ ಹಾಗೂ ಇದರ ಅನುಭವಗಳನ್ನು ನೀವು ಪಡೆದು.. ನಿಮ್ಮಲ್ಲಿ.. ಆತ್ಮಸ್ಥೈರ್ಯ ತುಂಬಿಸಿಕೊಳ್ಳಿ.
-ಕವಯಿತ್ರಿ ಹಾಗೂ ಲೇಖಕಿ ರೂಪಾ ಹಿರಿಯ ಕೆಂಪಣ್ಣ ಮೇಷ್ಟ್ರು ,ಆರೂಡಿ
