ಕೊಪ್ಪಳ ಜಿಲ್ಲೆಯ ಹುಲಿಗಿ ಸಮೀಪದ ಹೊಸ ಲಿಂಗಾಪುರ ಗ್ರಾಮದ , ಯುವ ಪ್ರತಿಭಾವಂತ ,ರಮೇಶ ಅವರು ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ,ಭಾಷಾ ನಿಕಾಯದ ಭಾಷಾಂತರ ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿ,
ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾಂತರ ಅಧ್ಯಯನ ವಿಭಾಗದ ಡಾ.ಜಿ.ಉಮಾಮಹೇಶ್ವರ ಅವರ ಮಾರ್ಗದರ್ಶನದಲ್ಲಿ
“ಷೇಕ್ಸಪಿಯರ್ ನ ಕನ್ನಡ ರೂಪಾಂತರ ನಾಟಕಗಳ ವಿಮರ್ಶಾತ್ಮಕ ವಿಶ್ಲೇಷಣೆ “ಎಂಬ ವಿಷಯವನ್ನು ಕುರಿತು ಸಂಶೋಧನೆಯನ್ನು ಕೈಗೊಂಡು, ಮಹಾ ಪ್ರಬಂಧವನ್ನು ಅರ್ಪಿಸಿದ್ದಾರೆ, ಅವರು ಸಲ್ಲಿಸಿದ ಈ ಮಹಾಪ್ರಬಂಧಕ್ಕೆ ವಿಶ್ವ ವಿದ್ಯಾಲಯವು ಡಾಕ್ಟರ್ ಆಫ್ ಫಿಲಾಸಫಿ ಪದವಿಯನ್ನು ಘೋಷಿಸಿದೆ.
ಪ್ರತಿಭಾವಂತ ರಮೇಶ ಅವರ ಈ ಸಾಧನೆಗೆ ಭಾಷಾಂತರ ವಿಭಾಗದ ಡೀನ್ ಪ್ರೊ.ಎಫ್.ಟಿ.ಹಳ್ಳಿಕೇರಿ,
ವಿಭಾಗದ ಮುಖ್ಯಸ್ಥರಾದ ಪ್ರೊ.ಮೋಹನ್ ಕುಂಟಾರ್,
ವಿಷಯ ತಜ್ಞರಾದ ಡಾ.ಸಿ ವೆಂಕಟೇಶ್,
ಡಾ.ಗೋವಿಂದ ಹಾಗೂ ಸಿಬ್ಬಂದಿ ವರ್ಗ ದವರು,ಸ್ನೇಹ ಬಳಗದವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
