ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಮಡಗು ಗ್ರಾಮದಲ್ಲಿ ಮತ್ತು ಕುಟುಂಬ ಇಲಾಖೆ ವಿಜಯನಗರ ಜಿಲ್ಲಾ, ಏಡ್ಸ್ ನಿಯಂತ್ರಣ ಮತ್ತು ನಿರ್ವಾಹಕ ಘಟಕ ವಿಜಯನಗರ ಪ್ರಾಥಮಿಕ ಕೇಂದ್ರ ಆರೋಗ್ಯ ಇಲಾಖೆ ಆಲೂರು, ಕೂಡ್ಲಿಗಿ ತಾಲೂಕು, ವಿಜಯನಗರ ಜಿಲ್ಲೆ ಸಹಯೋಗದೊಂದಿಗೆ ಗ್ರಾಮದ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಸ್ವಾಮಿ ವಿವೇಕಾನಂದ ರಕ್ತ ಬಂಡಾರ ಹಗರ ಬೊಮ್ಮನಹಳ್ಳಿ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು ಶ್ರೀ ಕ್ಷೇತ್ರದ ದಾಸೋಹ ಮಠದ ಸದ್ಭಕ್ತರು ಹಾಗೂ ಸುತ್ತಮುತ್ತಲಿನ ಊರಿನ ಸರ್ವ ಭಕ್ತಾದಿಗಳು ಹಾಗೂ ಗ್ರಾಮದ ಹಿರಿಯರು ಯುವಕರು, ಪಾಲ್ಗೊಂಡು ಹಾಗೂ ಹೆಚ್ಚಿನ ಜನಸಂಖ್ಯೆಯಲ್ಲಿ ಸಹ ಬಂದು ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ಹಾಗೂ ಯಾವುದೇ ವ್ಯಕ್ತಿ ಇನ್ನೊಂದು ಜೀವವನ್ನು ಉಳಿಸಲು ಸ್ವಯಂ ಪ್ರೇಯತವಾಗಿ ರಕ್ತದಾನ ಮಾಡಿ ಇನ್ನೊಂದು ಜೀವಕ್ಕೆ ಜೀವ ಬಂದಂತಹ ಸ್ಪೂರ್ತಿ, ರಕ್ತದಾನಕಿಂತ ದೊಡ್ಡ ದಾನವಿಲ್ಲ ಎಂದು ದಾಸೋಹ ಮಠದ ಧರ್ಮಧಿಕಾರಿಯದಂತಹ ದಾ. ಮ. ಐಮಡಿ ಶರಣಚಾರ್ಯರು ಹಾಗೂ ನಾನಾ ಮಠಾಧೀಶರು ಹಾಗೂ ಕಮಿಟಿಯ ಸರ್ವ ಸದಸ್ಯರು ಊರಿನ ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು.
ರಕ್ತದಾನ ಮಾಡುವುದರಿಂದ ದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುವುದು ಸಹಾಯವಾಗುತ್ತದೆ,
ದೇಹದಲ್ಲಿ ಹೊಸ ರಕ್ತ ಚಲನೆಯಿಂದ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ,
ಹೃದಯಘಾತವನ್ನು ಸಹ ನಿಯಂತ್ರಣದಲ್ಲಿರುತ್ತದೆ, ಎಂದು ದಾಸೋಹ ಮಠದ ಧರ್ಮ ಅಧಿಕಾರಿ ಶ್ರೀ ಶ್ರೀ ಐಮಡಿ ಶರಣಚಾರ್ಯರು ತಮ್ಮ ಅಭಿಪ್ರಾಯವನ್ನು ಸಹ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಕಾನಮಡಗು ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಊರಿನ ಹಿರಿಯರು ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಸಹ ಭಾಗವಹಿಸಿದ್ದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
