ಮೈಸೂರು ಜಿಲ್ಲೆಯ ನಂಜನಗೂಡಿನ ಬಸವ ಭಕ್ತರಾದ ಬಸವೇಶ್ವರ ಸೂಪರ್ ಮಾರ್ಕೆಟ್ ನ ಮಾಲೀಕರಾದ ಮಹದೇವಸ್ವಾಮಿರವರು ಆರ್ ಪಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಬಸವೇಶ್ವರ ಗಿಪ್ಟ್ ಮತ್ತು ಅಪ್ಲೈಯನ್ಸ ನ ಉದ್ಘಾಟನೆ ನಡೆಯಿತು. ಯಾವುದೇ ಆಡಂಬರ ಮತ್ತು ಮೂಢನಂಬಿಕೆ ಇಲ್ಲದೆ ಶ್ರೀ ಬಸವಯೋಗಿ ಪ್ರಭುಗಳು ಬಸವೇಶ್ವರ ಮತ್ತು ಅಕ್ಕಮಹಾದೇವಿ ಭಾವಚಿತ್ರಕ್ಕೆ ವಿಭೂತಿ ಧಾರಣೆ ಪುಷ್ಪ ವೃಷ್ಟಿ ಮಾಡುವುದರ ಮೂಲಕ ಬಸವಾದಿ ಶರಣರ ವಚನಗಳನ್ನು ಪಠಿಸುವುದರ ಮೂಲಕ ಉದ್ಘಾಟಿಸಲಾಯಿತು.
ಪೂಜ್ಯ ಶ್ರೀ ಬಸವಯೋಗಿಪ್ರಭುಗಳು ಕಾಯಕದಲ್ಲಿ ನಿಷ್ಠೆ ,ಶ್ರದ್ಧೆ, ಶತತ ಪರಿಶ್ರಮದಿಂದ ಮನುಷ್ಯ ಅಭಿವೃದ್ಧಿಯತ್ತ ಸಾಗಬಹುದು ಲಿಂಗಾಯತ ಧರ್ಮದಲ್ಲಿ ಯಾವುದೇ ಮೂಢನಂಬಿಕೆ ಇಲ್ಲದೆ ಪ್ರತಿಯೊಬ್ಬ ಲಿಂಗಾಯತನು ಬಸವಾದಿ ಶರಣರ ನಿಜಾಚರಣೆಯನ್ನು ಆಚರಿಸಬೇಕು ಎಂದರು.
ಎಲ್ಲರಿಗೂ ವಿಭೂತಿ ಧಾರಣೆ ಮಾಡುವುದರ ಮೂಲಕ ಆಶೀರ್ವಚನ ನೀಡಿದರು.
ಮಹದೇವಸ್ವಾಮಿ ,ಮಹೇಶ್ವರಿ,ರತ್ನಮ್ಮ ,ಸಿದ್ದಾರ್ಥ,
ವಚನ,ಸ್ವಾಮಿ ಹಸಗೂಲಿ,ಡೈರಿ ಶಿವಕುಮಾರ್ ,ಆನಂದ್ ಸಿದ್ದಮಲ್ಲು ಇನ್ನೂ ಹಲವಾರು ಭಕ್ತರು ಉಪಸ್ಥಿತರಿದ್ದರು.
