ವಿಜಯನಗರ/ಹಗರಿಬೋಮ್ಮನಹಳ್ಳಿ : ಕಲಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಂಜಾರ ಸಮಾಜದ 11 ವರ್ಷದ ಆಪ್ರಾಪ್ತೆ ಮೇಲೆ ಅತ್ಯಾಚಾರ ಎಸೆಗಿರುವ ಮುಖ್ಯ ಶಿಕ್ಷಕ ಹಾಜಿ ಮಲಂಗ್ ರವರೆಗೆ ಗಲ್ಲು ಶಿಕ್ಷೆ ನೀಡಿ ಅನ್ಯಾಯಕ್ಕೆ ಒಳಗಾದ ಕುಟುಂಬಸ್ಥರಿಗೆ ಸೂಕ್ತ ನ್ಯಾಯ ಒದಗಿಸುವ ಕುರಿತು ಚಳಿಗಾಲ ಅಧಿವೇಶನದಲ್ಲಿ ಮಾನ್ಯ ಸಭಾಪತಿ ಹಾಗೂ ಮುಖ್ಯಮಂತ್ರಿಗಳಿಗೆ ಕಲಾಪದಲ್ಲಿ ಆಗ್ರಹಿಸಿ ಎಂದು ಹಗರಿಬೊಮ್ಮನಹಳ್ಳಿಯ ಶಾಸಕರಾದ ಕೆ. ನೇಮಿರಾಜ್ ನಾಯ್ಕ ರವರಿಗೆ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ತಾಲೂಕು ಘಟಕದ ವತಿಯಿಂದ ಹಾಗೂ ಗೋರ್ ಬಂಜಾರ ಮಳಾವ್ ಜಿಲ್ಲಾ ಘಟಕ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಂಜಾರ ಧರ್ಮ ಗುರುಗಳಾದ ಶ್ರೀ ತಿಪ್ಪೇಸ್ವಾಮಿ ಮಹಾರಾಜರು ಜಿಲ್ಲಾಧ್ಯಕ್ಷರಾದ ಎಲ್ ಹನುಮನಾಯ್ಕ ಮೋದಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ತಾಲೂಕು ಅಧ್ಯಕ್ಷ ಆರ್ ಪ್ರಕಾಶ್ ಕಾರ್ಯಾಧ್ಯಕ್ಷರು ರಾಮ ನಾಯ್ಕ , ಪ್ರಧಾನ ಕಾರ್ಯದರ್ಶಿ ಈಶ್ವರ್ ನಾಯ್ಕ್ ಅಲೋಕ್ ನಾಯ್ಕ ಜಿಲ್ಲಾಧ್ಯಕ್ಷರಾದ ಶಿವುಕುಮಾರ್ ಗೋರ್ಮಳಾವ್ ತಾಲೂಕು ಅಧ್ಯಕ್ಷರಾದ ಬಾಲಾಜಿ ನಾಯ್ಕ ಪಾಟೀಲ್ ಪಾಂಡು ನಾಯ್ಕ ಸುನೀಲ್ ಗುರ್ಯಾ ನಾಯ್ಕ ಯಮುನಾ ಗೋವಿಂದ ನಾಯ್ಕ ಕೊಟ್ರೇಶ್ ರಾಮ ನಾಯ್ಕ ಲೋಲೇಶ್ ದುರ್ಗ ನಾಯಕ್ ಮೋಹನ್ ಸೇರಿದಂತೆ ಸಹಸ್ರಾರು ಬಂಜಾರ ಯುವ ಮುಖಂಡರು ಉಪಸ್ಥಿತರಿದ್ದರು.
