ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕು ಕಾಗನೂರು ಗ್ರಾಮದ ಶಿವಕುಮಾರ್ ಕಾಗನೂರು ಇವರ ಮಕ್ಕಳಾದ ದಿವ್ಯ ಹಾಗೂ ಪ್ರಜ್ವಲ್ ಗೌಡ ಇವರು ತಾವು ಕೂಡಿಟ್ಟ ಹಣವನ್ನು ಸರ್ಕಾರಿ ಶಾಲೆಗೆ ಮಹನೀಯರ ಫೋಟೋಗಳನ್ನು ಕೊಡುವುದಕ್ಕೆ ವಿನಿಯೋಗಿಸಿದ್ದಾರೆ ಖರ್ಚಿಗೆ ಕೊಟ್ಟ ಹಣವನ್ನು ದುರುಪಯೋಗ ಮಾಡದೆ ಹುಂಡಿಯಲ್ಲಿ ಹಣವನ್ನು ಕಲೆಹಾಕಿ ಸಂಗ್ರಹ ಮಾಡಿ ತಾವು ಓದುತ್ತಿರುವ ಶಾಲೆಗೆ ಕೊಡುಗೆಯನ್ನು ಕೊಡಬೇಕು ಎನ್ನುವ ಉದ್ದೇಶದಿಂದ ಫೋಟೋಗಳನ್ನು ಶಾಲೆಗೆ ಕೊಡುವುದರ ಮುಖಾಂತರವಾಗಿ ಇತರ ಮಕ್ಕಳಿಗೆ ಮಾದರಿಯಾಗಿದ್ದಾರೆ.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ದೀಪದ ಕೃಷ್ಣಪ್ಪ ವಾಲ್ಮೀಕಿ ಮುಖಂಡರು ಇವರು ಮಕ್ಕಳು ಮಾಡಿದ ಈ ಉತ್ತಮ ಕಾರ್ಯವನ್ನು ಶ್ಲಾಘಿಸಿ ಶುಭವನ್ನು ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿವಕುಮಾರ ಕಾಗನೂರು ಸರ್ಕಾರಿ ಶಾಲೆಗಳಲ್ಲಿ ಶಾಲೆ ಮುಗಿದ ನಂತರ ಗ್ರಾಮದ ಕೆಲವು ಪುಢಾರಿಗಳು ಶಾಲೆಯ ಒಳಗೆ ಬಂದು ಗಲೀಜು ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ ಆ ವಿಚಾರವನ್ನು ಕೈಗೆತ್ತಿಕೊಂಡು ಅಂತಹ ಮೂರ್ಖರಿಗೆ ಎಚ್ಚರಿಸುವ ಕೆಲಸವನ್ನು ಶಿವಕುಮಾರ ಮಾಡಿದರು.
ಶಾಲೆಗಳು ದೇವಾಲಯವಿದ್ದಂತೆ ಅಲ್ಲಿ ಓದುವ ಮಕ್ಕಳು ದೇವರುಗಳು ಅವರನ್ನು ಪೂಜಿಸುವ ಕೆಲಸ ಮಾಡಬೇಕೇ ಹೊರತು ಗಲೀಜನ್ನು ಅವರ ಕೈಯಿಂದ ಸ್ವಚ್ಛ ಮಾಡಿಸುವ ಕೆಲಸವಾಗಬಾರದು ಇನ್ನಾದರೂ ತಿದ್ದಿಕೊಳ್ಳಿ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಮುಖಂಡರು ಶಾಲಾ ಶಿಕ್ಷಕರು ಮುಖ್ಯ ಗುರುಗಳು ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತರು, ಪಿ ಎಚ್ ಸಿ ಓ ನರ್ಸ್ ಇತರರು ಹಾಜರಿದ್ದರು.
