
ಬೆಂಗಳೂರು: ಕರ್ನಾಟಕ ನೇತಾಜಿ ಚಾರಿಟಬಲ್ ಟ್ರಸ್ಟ್ (ರಿ.) ಮತ್ತಿಕೆರೆ, ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ರವೀಂದ್ರ ಕಲಾಕ್ಷೇತ್ರ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ಧ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಜನಪದ ಕೂಗು ಕಾರ್ಯಕ್ರಮದ ಮೂಲಕ ನಾಡು ನುಡಿ ಸೇವೆ ಮಾಡುತ್ತಿರುವ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ ಕಲಾವಿದ ಶ್ರೀ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಅವರಿಗೆ 2025ನೇ ಸಾಲಿನ ಜನಪದ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಶ್ರಾಂತ ನ್ಯಾಯಮೂರ್ತಿ ಸಂತೋಷ ಹೆಗಡೆ, ಕರ್ನಾಟಕ ನೇತಾಜಿ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರಾದ ರವಿಕುಮಾರ, ನಿವೃತ್ತ ತಹಶೀಲ್ದಾರ ಡಾ ಶಿವಣ್ಣ, ಉದ್ಯಮಿಗಳಾದ ಡಾ.ಲಕ್ಷ್ಮೀದೇವಿ, ಡಾ.ರೇವಣ್ಣ, ನಿವೃತ್ತ ಸಹಾಯಕ ಪೋಲಿಸ್ ಕಮಿಷನರ್ ಡಾ.ಎಸ್.ಬಿ. ಛಬ್ಬಿ, ಡಾ ಶಿವರಾಜ ಗವಿಪುರ, ಹಿರಿಯ ಸಾಹಿತಿಗಳಾದ ಮಹಾಬಲಮೂರ್ತಿ ಕೊಡ್ಲೆಕರ್, ಡಾ.ಎಸ್.ಎಲ್.ರವಿ, ಚಿತ್ರನಟಿ ಭವ್ಯ, ಡಾ.ರವಿಕುಮಾರ ಪಾಂಡೆ, ಡಾ.ಎಸ್.ಪಿ.ಆಚಾರ್ಯ, ಡಾ.ರವಿವರ್ಮ ಪಾಟಿಲರು, ರವಿಕೋಟಿ ಸೂರ್ಯ ಸೇರಿದಂತೆ ಮುಂತಾದವರು ವೇದಿಕೆಯಲ್ಲಿದ್ದರು.
