ಹೆಣ್ಣಿಗೆ ಗಂಡು ಎಂಬ ಆಗಿನ ನುಡಿ
ಈಗಿನ ದಿನಮಾನಗಳಲ್ಲಿ ಅದು ಬಿಡಿ
ಹೆಣ್ಣು ಕೊಟ್ಟು ಕನ್ಯಾದಾನ ಮಾಡುತ್ತಿದ್ದರು ಆಗ
ಗಂಡಿಗೆ ಬೈಸಿಕಲ್, ವರದಕ್ಷಣೆ ಕೊಡುತ್ತಿರುವಾಗ !!೧!!
ಡಿಗ್ರಿಗಳು, ಜಾಬುಗಳು ಇಲ್ಲದ ಸಂದರ್ಭದಲ್ಲಿ
ಗಂಡಿಗಾಗಿ ಹುಡುಕುತ್ತಿದ್ದರೂ ಹೆಣ್ಣಿನ ಮಾವರಲ್ಲಿ
ಕಷ್ಟದ ಜೀವನದ ಬೇಗೆಯಲ್ಲಿ ಬದುಕಿರುವರಲ್ಲಿ
ಮದುವೆ ಮಾಡಿ ಮುಗಿಸಬೇಕೆಂಬ ಭರವಸೆಯಲ್ಲಿ !!೨!!
ಹೆಣ್ಣಿನ ಓದೋ ವಿದ್ಯಾಭ್ಯಾಸವನ್ನು ಮುಟಕುಗೊಳಿಸಿ.
ದುಡಿಮೆಯ ಹಚ್ಚುತ್ತಿರುವ ಆ ಸಂದರ್ಭದಲ್ಲಿ
ಒಲೆ ಊದಿ ಅಕ್ಕಿ ಬೇಯಿಸುವರಲ್ಲಿ
ಕಪ್ಪಾಗಿನ ಪಾತ್ರಗಳನ್ನು ತೊಳೆಯುವ ದಿನಮಾನಗಳಲ್ಲಿ !!೩!!
ಕಾಲವು ಬದಲಾದ ಈ ಸಂದರ್ಭದಲ್ಲಿ
ಗಂಡು- ಹೆಣ್ಣಿನ ಮನೆ ಅಂಗಳದಲ್ಲಿ
ಹುಡುಕಿಕೊಂಡು ಬರಲು ಹೆಗಲ ಮೇಲೆ ಚೀಲ ಏರಿ
ತಿರುಗಿಕೊಂಡು ಬರಬೇಕು ಊರು ಬೀದಿಗಳನ್ನು ಇಲ್ಲಿ !!೪!!
ಹೆಣ್ಣು ಮಕ್ಕಳು ಇರುವರು ಡಿಗ್ರಿ, ಜಾಬ್ ಗಳಲ್ಲಿ
ಅವರು ಕೇಳುವರು ಸರ್ಕಾರಿ ನೌಕರನಂತ ಗಂಡನನ್ನು ಇಲ್ಲಿ
ಪ್ರತಿಷ್ಠೆಯ ಕಣ ಆಗಿರುವುದು ಇವರ ಜೀವನದಲ್ಲಿ
ಗಂಡಿನ ನಡೆ ಮುಂದೆ ಎತ್ತ ಸಾಗುತ್ತಿರುವುದು ಈ ದಿನ ಮನಗಳಲ್ಲಿ !!೫!!
- ಚಂದ್ರಶೇಖರಚಾರ್ ಎಂ. ಶಿಕ್ಷಕರು
ವಿಶ್ವಮಾನವ ವಸತಿ ಪ್ರೌಢಶಾಲೆ
ಸೀಬಾರ ಗುತ್ತಿ ನಾಡು, ಚಿತ್ರದುರ್ಗ.
