ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸರಳ ವ್ಯಕ್ತಿ – ಧೀಮಂತ ವ್ಯಕ್ತಿತ್ವ ಡಾ. ಎಚ್.

ನರಸಿಂಹಯ್ಯ ಅವರ ಸ್ಮರಣ ದಿನದ ನಿಮಿತ್ಯ ಶಿಕ್ಷಕ – ಸಾಹಿತಿಗಳಾದ ಚಿರಂಜೀವಿ ರೋಡಕರ್ ಅವರ ಲೇಖನ.

ಆಪ್ತ ವರ್ಗದಲ್ಲಿ “ಎಚ್ ಎನ್ ” ಎಂದು ಪ್ರಸಿದ್ಧರಾಗಿದ್ದ ಎಚ್ ನರಸಿಂಹಯ್ಯ ಅವರ ಸ್ಮರಣದಿನ ಇಂದು.

ಯಾವ ವ್ಯಕ್ತಿ ಪವಾಡಗಳನ್ನು ನಂಬುತ್ತಿರಲಿಲ್ಲ ಅಂತಹ ವ್ಯಕ್ತಿಯ ಬದುಕೇ ಒಂದು ಪವಾಡ. ಅಪ್ಪಟ ಗಾಂಧಿವಾದಿ, ಅಗಾಧ ಪ್ರತಿಭೆ, ಸರಳ ಉಡುಗೆ, ಸಾರ್ಥಕ ಮನೋಭಾವ, ಧೀರೋದ್ಧಾತ ವ್ಯಕ್ತಿತ್ವ, ಅಂತಹ ಗಾಂಧಿಯುಗದ ಕೊಂಡಿಯೊಂದು 31 ಜನವರಿ 2005ರಂದು ಸಹಸ್ರಾರು ಅನುಯಾಯಿ ಮತ್ತು ಅಭಿಮಾನಿಗಳನ್ನು ಅಗಲಿ ಹೋಯಿತು.

ಡಾ. ಎಚ್ ಎನ್ ಅವರು 6 ಜೂನ್ 1920 ರಂದು ಹೊಸೂರಿನ ಬಡ ಕುಟುಂಬವೊಂದರಲ್ಲಿ ಜನಿಸಿದರು ತಂದೆ ಹನುಮಂತಪ್ಪ ತಾಯಿ ವೆಂಕಟಮ್ಮ. ತಂದೆ ಕೂಲಿ ಮಠದ ಮೇಷ್ಟ್ರು ಒಳ್ಳೆಯ ಪ್ರಭುತ್ವ ಹೊಂದಿದ್ದರು. ಸಂಬಳದ ಬದಲಾಗಿ ದವಸದಾನ್ಯ ಸಿಗುತ್ತಿತ್ತು. ತಾಯಿ ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಬಡತನದಲ್ಲಿಯೇ ಮಗನನ್ನು ಶಾಲೆಗೆ ಸೇರಿಸಿದರು. ಜಾಣ ಪ್ರತಿಭಾವಂತ ಸೌಮ್ಯ, ಪರೋಪಕಾರ ಗುಣ ನರಸಿಂಹಯ್ಯನವರ ದಾಗಿತ್ತು. ಪುಸ್ತಕ ಕೊಳ್ಳಲು ಹಣ ಇರುತ್ತಿರಲಿಲ್ಲ ಸ್ನೇಹಿತರ ಪುಸ್ತಕಗಳ ಸಹಾಯದಿಂದ ಓದಿಕೊಳ್ಳುತ್ತಿದ್ದರು,

ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿದ್ದ ಬಾಲಕ ನರಸಿಂಹಯ್ಯನವರು 12 ನೇ ವಯಸ್ಸಿನಲ್ಲಿಯೇ ತಾಯಿ ತಂಗಿ ಜೊತೆ ಮನೆಯಲ್ಲಿ ನೂಲು ನೇಯುತ್ತಿದ್ದರು. ಆಗಿನಿಂದಲೇ ಅವರು ಖಾದಿದಾರಿ ಆದರು. ಜೀವನದುದ್ದಕ್ಕೂ ಗಾಂಧಿಟೋಪಿ, ಬಿಳಿ ಶರ್ಟು ಮತ್ತು ದಟ್ಟಿ ಪಂಚೆ ಅವರ ಉಡುಗೆಯಾಗಿತ್ತು.

ನರಸಿಂಹಯ್ಯನವರ ಬಾಲ್ಯದ ದಿನಗಳಲ್ಲಿ ಹೊಸೂರಿನ ಪರಿಸರವು ಅವರ ಜೀವನಕ್ಕೆ ಶಿಸ್ತು, ಶ್ರದ್ಧೆ, ಸಸ್ಯಾಹಾರ, ದೇಶಭಕ್ತ ಹಾಗೂ ಕಷ್ಟ ಜೀವನದ ಭದ್ರ ಬುನಾದಿಯನ್ನು ಹಾಕಿತು. ಅಲ್ಲಿಂದ ಅನಿಷ್ಟ ಪದ್ಧತಿಗಳ ಬಗ್ಗೆ ವಸ್ತುನಿಷ್ಠ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವಲ್ಲಿ ಈ ಉದಾರವಾದಿ ಆದರ್ಶಗಳ ಹಾಗೂ ಆದರ್ಶ ಗುರುಗಳ ಪ್ರಭಾವವು ಬಹುಮಟ್ಟಿಗೆ ಸಹಕಾರಿಯಾಯಿತು. ಹೊಸೂರಿನಿಂದ ಮುಂದಿನ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದರು. ಅಲ್ಲಿಂದ ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ಸ್ವತಂತ್ರ ಚಳುವಳಿಗೆ ಧುಮುಕಿದರು. ಚಳವಳಿ ಮತ್ತು ವಿದ್ಯಾಭ್ಯಾಸ ಜೊತೆಜೊತೆಗೆ ಸಾಗಿದವು .

1946 ರಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿ ಬೆಂಗಳೂರಿನ ನ್ಯಾಷನಲ್ ಕಾಲೇಜಿಗೆ ನೇಮಕಗೊಂಡರು. ಅವರ ಕಾಲು ಚಪ್ಪಲಿ ಕಂಡದ್ದು ಅವತ್ತೆ. ಇಪ್ಪತ್ತಾರು ವರ್ಷಗಳ ಕಾಲ ಬರಿಗಾಲಲ್ಲಿ ನಡೆದ ಜೀವ ಅದು. ನಂತರದಲ್ಲಿ ಮತ್ತೆ ಅಧ್ಯಾಪಕ ವೃತ್ತಿಗೆ ರಾಜೀನಾಮೆ ಕೊಟ್ಟು “ಮೈಸೂರು ಚಲೋ” ಚಳುವಳಿಗೆ ಧುಮುಕಿ ಬಿಟ್ಟರು. ಪುನಹ 1961ರಲ್ಲಿ ಡಾ. ಎಚ್ ಎನ್ ನ್ಯಾಷನಲ್ ಕಾಲೇಜಿನ ಪ್ರಿನ್ಸಿಪಾಲರಾಗಿ ಅಧಿಕಾರ ವಹಿಸಿಕೊಂಡರು. 12 ವರ್ಷಗಳ ಅವಧಿಯಲ್ಲಿ ಹಲವಾರು ಸುಧಾರಣೆಗಳನ್ನು ತಂದರು. ನ್ಯಾಷನಲ್ ಕಾಲೇಜು ಸಮಸ್ತ ಆದರ್ಶಗಳ ಪ್ರಯೋಗ ಶಾಲೆಯೇ ಆಯಿತು. ಮೊದಲ ಬಾರಿಗೆ ಸಹ ಶಿಕ್ಷಣ ಪದ್ಧತಿ ಜಾರಿಗೆ ತಂದರು, ಹಾಜರಾತಿ ಪುಸ್ತಕದಲ್ಲಿ ಸಹಿ ಪದ್ಧತಿ ರದ್ದು ಮಾಡಿದರು, ಟುಟೋರಿಯಲ್ ಪದ್ಧತಿ ಮತ್ತು ವಿಶೇಷ ಸಂಜೆ ತರಗತಿಗಳು ಪ್ರಾರಂಭವಾದವು, ಪಠ್ಯೇತರ ಚಟುವಟಿಕೆಗಳು ಕೂಡಾ ಮುಖ್ಯ ಶಿಕ್ಷಣದ ಅಂಗ ಎಂಬುದು ಅವರ ನಂಬಿಕೆಯಾಗಿತ್ತು. ಆದ್ದರಿಂದ ಕಾಲೇಜಿನಲ್ಲಿ ನಾಟಕದ ಕಾಲೇಜು ಪ್ರಾರಂಭಿಸಿದರು, ಮೇಲ್ವಿಚಾರಕರು ಇಲ್ಲದೆ ಅಂತಃಸಾಕ್ಷಿಯ ಮೇರೆಗೆ ಪರೀಕ್ಷೆಗಳನ್ನು ತಂದರು, ಸಮಾಜವನ್ನು ನೈತಿಕವಾಗಿ ಸದೃಢಗೊಳಿಸಲು 1966 ರಲ್ಲಿ ಗಾಂಧಿ ಅಧ್ಯಯನ ಕೇಂದ್ರ ಸ್ಥಾಪಿಸಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವ ಸೇವಾ ಸಂಘ ಸ್ಥಾಪನೆ ಮಾಡಿದರು, 1972ರಲ್ಲಿ ಡಾ. ಎಚ್ ಎನ್ ಅವರನ್ನು ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಸರ್ಕಾರ ನೇಮಿಸಿತು. 1980 ರಲ್ಲಿ ವಿಧಾನಪರಿಷತ್ತಿಗೆ ಸದಸ್ಯರಾಗಿ ನೇಮಕವಾದರು. ಹಣ ಮತ್ತು ಅಧಿಕಾರ ರಾಜಕಾರಣವನ್ನು ಮೀರಿದ ಜನಪರ ಕಾಳಜಿಯನ್ನು ಪ್ರತಿನಿಧಿಸುತ್ತಿದ್ದ ಅವರ ವ್ಯಕ್ತಿತ್ವವೂ ಸದನದ ನೈತಿಕ ಕೇಂದ್ರದಂತಿತ್ತು. ನಂತರದಲ್ಲಿ ಶ್ರೀ ಎಚ್ ಡಿ ದೇವೇಗೌಡರ ಅವಧಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡರು. HN ಅವರ ಹೆಸರು ರಾಷ್ಟ್ರಪತಿಯ ಸ್ಥಾನಕ್ಕೂ ಸಹ ಸೂಚಿತಗೊಂಡಿತ್ತು.

ಪ್ರಶ್ನೆ ಮಾಡದೆ ಏನನ್ನೂ ಒಪ್ಪಬೇಡಿ ಎಂದು ಎಚ್ಚೆನ್ ಸದಾ ಎಲ್ಲರನ್ನೂ ಎಚ್ಚರಿಸುತ್ತಿದ್ದರು. ರೂಢಿಯಲ್ಲಿದೆ, ಸಂಪ್ರದಾಯ, ಧರ್ಮಗ್ರಂಥ ಹೇಳಿದೆ ಎಂಬ ಕಾರಣಕ್ಕಾಗಿ ಅವುಗಳ ಹಿನ್ನಲೆಯನ್ನು ವಿಚಾರ ಮಾಡದೆ ಏನನ್ನು ಅನುಸರಿಸಬಾರದು ಎನ್ನುತ್ತಿದ್ದರು. ಭಾರತದಲ್ಲಿ ಧರ್ಮ ಮತ್ತು ದೇವರ ಹೆಸರಿನಲ್ಲಿ ಜನತೆಯಲ್ಲಿ ಮೂಢನಂಬಿಕೆಗಳನ್ನು ಬಿತ್ತಿ ಅವರನ್ನು ಶೋಷಿಸಲಾಗುತ್ತಿದೆ. ದೇಶದ ಪ್ರಗತಿಯಾಗಬೇಕಾದರೆ ಮೂಢನಂಬಿಕೆಗಳಿಂದ ಹೊರಬಂದು ವೈಚಾರಿಕ, ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಪ್ರತಿಪಾದಿಸುತ್ತಿದ್ದರು. ಪವಾಡಗಳ ವಿರುದ್ಧ, ಪವಾಡ ಪುರುಷರು ಎಂದು ಹೇಳಿಕೊಳ್ಳುವವರು ವಿರುದ್ಧ ಎಚ್ಚೆನ್ ವೈಚಾರಿಕ ಸಮರವನ್ನೇ ಸಾರಿದರು. ಕರ್ನಾಟಕದಲ್ಲಿ ವಿಚಾರವಾದದ ನೆಲೆಯನ್ನು ಬಲಗೊಳಿಸುವಲ್ಲಿ ಅವರದು ಗಣನೀಯ ಕೊಡುಗೆ.

2003 ನೇ ಇಸವಿಯಿಂದ ಡಾಕ್ಟರ್ ಎಚ್ ಎನ್ ಅವರ ಆರೋಗ್ಯ ಆಗಾಗ ಹದಗೆಡುತ್ತಿತ್ತು. ಸ್ವಂತ ಊರಿಗೆ ಬರುವುದು ಸಹ ಕಡಿಮೆಯಾಯಿತು ಅವರನ್ನು ನರ್ಸಿಂಗ್ ಹೋಂ ಗೆ ಸೇರಿಸಲಾಯಿತು ದಿನದಿಂದ ದಿನಕ್ಕೆ ಆರೋಗ್ಯ ಕುಸಿಯತೊಡಗಿತ್ತು ಅವರ ಅಭಿಮಾನಿಗಳು ಹಿತೈಷಿಗಳು ನಿಕಟವರ್ತಿಗಳ ಆತಂಕ ಅವರನ್ನು ಧೃತಿಗೆಡಿಸಲಿಲ್ಲ. ಎಚ್ ಎನ್ ಅವರು ಸಾವಿಗೆ ಹೆದರಿದ್ದವರಲ್ಲ. ಆದರೆ ಇನ್ನಷ್ಟು ಕಾಲ ಬದುಕಿ ತಮ್ಮ ಕಾರ್ಯಚಟುವಟಿಕೆಗಳನ್ನು ಮುಂದುವರೆಸಬೇಕೆಂಬ ಅದಮ್ಯ ಆಸಕ್ತಿ ಇತ್ತು. ಒಂದುವರೆ ತಿಂಗಳು ಸೇವಾ ಸೌಲಭ್ಯ ಒದಗಿಸಲಾಯಿತು. ಹದಿನೈದು ದಿನಗಳ ಕಾಲ ಪ್ರಜ್ಞಾಶೂನ್ಯ ಸ್ಥಿತಿಯಲ್ಲಿದ್ದ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆಯನ್ನು ಅಳವಡಿಸಲಾಯಿತು. ಜನವರಿ 31 2005ರಂದು ಡಾಕ್ಟರ್ ಎಚ್ ಎನ್ ನಿಧನರಾದರು. ಗಾಂಧಿ ತತ್ವದ ಪ್ರಬಲ ಕೊಂಡಿಯೊಂದು ಗಾಂಧಿ ಸ್ಮರಣೆಯ ಮರುದಿನ ಅಂತಿಮವಾಗಿ ಕಳಚಿ ಹೋಯಿತು.

  • ಚಿರಂಜೀವಿ ರೋಡಕರ್
    •ಜಿಲ್ಲಾಧ್ಯಕ್ಷರು
    ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಬಾಗಲಕೋಟ.
    •ಜಿಲ್ಲಾ ಕಾರ್ಯದರ್ಶಿಗಳು
    ದಲಿತ ಸಾಹಿತ್ಯ ಪರಿಷತ್ತು ಬಾಗಲಕೋಟ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ