ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪ್ರತಿಭಾವಂತ ಸಾಹಿತಿ ಅಶ್ವಜೀತ ದಂಡಿನ

ಸಾಧಕರಾದವರು ಕಷ್ಟಗಳ ಬೆಂಕಿಯಲ್ಲಿ ಬೆಂದು ಅಪ್ಪಟ್ಟ ಚಿನ್ನದಂತೆ ಅರಳಿದವರು, ಸಾಧನೆ ಮಾಡುವವರಿಗೆ ಯಾವುದೇ ಇತಿ ಮಿತಿಗಳಿಲ್ಲ, ಅವರು ಎಲ್ಲವನ್ನೂ ಎದುರಿಸಿ ಮೇಲಕ್ಕೇರುವ ಸಾಧಕರು ಅಂಗವೈಕಲತೆ ಸಮಸ್ಯೆ ಎನ್ನುವುದು ಅವರಿಗೆ ಲೆಕ್ಕಕ್ಕೆ ಬರುವದಿಲ್ಲ ಸಾಧಿಸುವ ಛಲವೊಂದೇ ಅವರ ಗುರಿಯಾಗಿರುತ್ತದೆ.

ವಿಕಲಚೇತನರು ಎಂದಾಕ್ಷಣ ಕೈಲಾಗದವರು ಎಂದರ್ಥವಲ್ಲ ಅವರಲ್ಲಿಯೂ ವಿಶೇಷ ಸಾಮರ್ಥ್ಯವಿರುತ್ತದೆ. ವಿಕಲಚೇತನರಾದವರು ಯಾರಿಗೂ ಬೇಡವಾದರೂ ದೇವರಿಗೆ ಹೆಚ್ಚು ಪ್ರಿಯವಾಗಿರುತ್ತಾರೆ. ವಿಧಿ ಎಲ್ಲರಂತೆ ಸಹಜವಾಗಿ ಬದುಕುವ ಸ್ವಾತಂತ್ರ್ಯವನ್ನು ಕಸಿದುಕೊಂಡರೂ ಬಂದಿದ್ದೆಲ್ಲವನ್ನು ದಿಟ್ಟವಾಗಿ ಎದುರಿಸುವ ಶಕ್ತಿಯನ್ನು ಕರುಣಿಸಿಯೇ ಕರುಣಿಸುತ್ತಾನೆ ಎನ್ನುವ ಮಾತು ಅಕ್ಷರ ಸಹ ಸತ್ಯವಾದ ಮಾತು. ಆ ಒಂದು ಅಂಗವಿಕಲ ನ್ಯೂನ್ಯತೆ ಬದುಕುವ ಛಲ, ಆತ್ಮಬಲ ಹೋರಾಟ ಮನೋಭಾವವನ್ನು ಕಲಿಸುತ್ತದೆ.
ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆ ಅರುಣ ಸಿನ್ಹಾ, ಪ್ಯಾರಾ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಪಡೆದ ರಾಜಸ್ಥಾನ್ ಮೂಲದ ಯುವತಿ ಮೊನಾ ಅಗ್ರವಾಲ, ಬೆಳ್ಳಿ ಪದಕ ಪಡೆದ ವಿಕಲಾಂಗ ಪ್ರವೀಣ, ಬ್ಯಾಡ್ಮಿಂಟನ್ ಆಟಗಾತಿ ಮನೀಷಾ ಮುಂತಾದವರಲ್ಲದೆ ವಿಕಲಾಂಗರಾದ ಅದೆಷ್ಟೋ ಮಂದಿ ಕೆ. ಎ. ಎಸ್., ಐ.ಎ. ಎಸ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಅಂತವರ ಸಾಧನೆ ಪಟ್ಟಿಯಲ್ಲಿ ಗುರುತಿಸಿಕೊಳ್ಳುವ ಸಾಧಕರಾದವರು ಯುವ ಬರಹಗಾರರಾದ ಅಶ್ವಜೀತ ದಂಡಿನರವರು.

ಎಲ್ಲರಂತೆ ಓಡಾಡಿಕೊಂಡಿದ್ದ ಅಶ್ವಜೀತರವರ ಬದುಕಿನನಲ್ಲಿ ಕಹಿ ಘಟನೆಯೊಂದು ನಡೆದು ಹೋಯಿತು. ಒಂದು ದಿನ ರಾತ್ರಿ ನಡೆದುಕೊಂಡು ಬರುತ್ತಿರುವಾಗ ಅಪಘಾತವಾಗಿ ಕಾಲಿನ ಮೂಳೆ ಮುರಿಯಿತು. ತರುವಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಾತ್ರೆ ಸೇವಿಸಿದ ಬಳಿಕ ಕಾಲ ಕ್ರಮೇಣ ಅವರ ಕಿವಿಗಳ ಮೇಲೆ ಅದು ಅಡ್ಡಪರಿಣಾಮ ಬೀರಿದ ಕಾರಣಕ್ಕಾಗಿ ಶೇ ೬೯ರಷ್ಟು ಕಿವಿ ಮಂದವಾಗಿ ಅಕ್ಷರಶಃ ಕೇಳಿಸುವ ಶಕ್ತಿಯನ್ನು ಕಳೆದುಕೊಂಡಿದ್ದು ಅವರ ಉಜ್ವಲ ಭವಿಷ್ಯಕ್ಕೆ ತೊಡಕಾಯಿತು. ಆದರೆ ಅದನ್ನೇ ಸವಾಲಾಗಿ ತೆಗೆದುಕೊಂಡ ಅವರು ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಸಾಧನೆ ಪಥದಲ್ಲಿ ಸಾಗಿದರು.

ಬಾಲ್ಯದ ದಿನಗಳು

ಮೂಲತ: ಬೀದರ ತಾಲೂಕಿನ ಮಾಳೆಗಾಂವ ಗ್ರಾಮದವರಾದ ಅಶ್ವಜೀತರವರು ತಂದೆ ಬಕ್ಕಪ್ಪ ತಾಯಿ ಪಾರ್ವತಿಯವರ ಮಗನಾಗಿ ಡಿಸೆಂಬರ್ ೫ ರ ೧೯೯೬ ರಲ್ಲಿ ತಮ್ಮ ತಾಯಿಯ ತವರೂರಾದ ಪಕ್ಕದ ತೆಲಂಗಾಣ ರಾಜ್ಯದ ನಾರಾಯಣಖೇಡ ತಾಲೂಕಿನ ತೋರ್ನಾಲ ಎಂಬ ಪುಟ್ಟ ಹಳ್ಳಿಯಲ್ಲಿ ಜನಸಿದರು.

ಪ್ರಾಥಮಿಕ ಶಿಕ್ಷಣವನ್ನು ಮತ್ತು ಪ್ರೌಢ ಶಿಕ್ಷಣವನ್ನು ತಮ್ಮ ಸ್ವಂತ ಊರು ಮಾಳೆಗಾಂವನಲ್ಲಿ ಮುಗಿಸಿದರು. ಮುಂದೆ ಪಿ. ಯು. ಸಿ. ಯನ್ನು ಶ್ರೀ ಸಿದ್ದರಾಮಯ್ಯ ಐ. ಟಿ. ಐ. ಕಾಲೇಜು ಬೀದರ್ ನಲ್ಲಿ ಮುಗಿಸಿದರು.

ಚಿಕ್ಕoದಿನಿಂದಲೂ ಶಾಲಾ ಪಠ್ಯಪುಸ್ತಕಗಳಾದ ಕನ್ನಡ ಮತ್ತು ಸಮಾಜ ವಿಜ್ಞಾನ (ಇತಿಹಾಸ) ವಿಷಯಗಳ ಜೊತೆ ಜೊತೆಗೆ ಪಠ್ಯತರ ಪುಸ್ತಕಗಳನ್ನು ಓದುವ ಗೀಳು ಹಚ್ಚಿಕೊಂಡ ಇವರು ೭೦ ದಶಕದ ಕ್ರಾಂತಿ ಗೀತೆಗಳು, ಕೇಳುತ್ತ ತಂದೆಯವರು ಮನೆಯಲ್ಲಿ ತಂದಿಟ್ಟ ಪುಸ್ತಕಗಳನ್ನು ಓದುತ್ತಾ ಬೆಳೆದವರು.

ಅಶ್ವಜೀತರವರ ತಂದೆಯವರು ಕಡು ಬಡತನವನ್ನು ಕಂಡವರು. ಇವರ ತಂದೆ ಉಳ್ಳವರ ದನ ಆಡುಗಳನ್ನು ಮೇಯಿಸುತ್ತಾ B.A ವರೆಗೆ ವಿದ್ಯೆ ಕಲಿತು ಸಂಸಾರದ ನೊಗ ಹೊರುವ ಜೊತೆಗೆ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ನಂತರ ಡಾ.ಬಿ ಆರ್ ಅಂಬೇಡ್ಕರ ಹಿರಿಯ ಪ್ರಾಥಮಿಕ ಶಾಲೆ ಪಕಲವಾಡದಲ್ಲಿ ಮೂರು ವರ್ಷ ಸಹಾಯಕ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಆದರೆ, ಆಡಳಿತದವರು ಅವರ ತಂದೆಯವರ ಹೆಸರು ಅಪ್ರೂವಲಗೆ ಕಳುಹಿಸಲು ಹೆಚ್ಚಿನ ಹಣ ಕೇಳಿದರು. ಆದರೆ ಆ ಸಮಯದಲ್ಲಿ ಬಡತನ ಕಾರಣ ಲಂಚ ಕೊಡಲು ಸಾಧ್ಯವಾಗದೆ ಮತ್ತು ನಕಲಿ ದಾಖಲೆ ಸ್ರಷ್ಟಿ ಮಾಡಲು ಮನಸಾಕ್ಷಿ ಒಪ್ಪದ ಕಾರಣ ಶಿಕ್ಷಕರ ನೌಕರಿಗೆ ವಿದಾಯ ಹೇಳಿ ಅಂದಿನಿಂದ ಕೃಷಿ ಮತ್ತು ಕೃಷಿ ಕೂಲಿ ಕಾರ್ಮಿಕರಾಗಿ ದುಡಿಯುತ್ತ ಬರುವ ಅಲ್ಪ ಮೊತ್ತದಲ್ಲಿಯೇ ಕುಟುಂಬದ ಬೇಕು ಬೇಡಗಳನ್ನು ನಿರ್ವಾಹಿಸುವ ಜೊತೆಗೆ ಮಕ್ಕಳಿಗೆ ಅಕ್ಷರ ಕಲಿಸಿ ವಿದ್ಯಾವಂತರನ್ನಾಗಿ ಮಾಡಿದರು.

ವಿದ್ಯೇಯ ಮಹತ್ವ ಚೆನ್ನಾಗಿಯೇ ಬಲ ಅಶ್ವಜೀತರವರ ತಂದೆ ಯಾವುದೇ ರೀತಿಯ ಹಣ ಪಡೆಯದೆ ಸಾಕ್ಷರತೆಯ ಸ್ವಯಂ ಪ್ರೇರಕರಾಗಿ ಸೇವೆ ಸಲ್ಲಿಸುತ್ತಾ ರಾತ್ರಿಯ ವೇಳೆ ಗ್ರಾಮಸ್ಥರಿಗೆ ಅಕ್ಷರ ಕಲಿಸುತ್ತಿದ್ದರು. ಜೊತೆಗೆ ಹಾಡುಗಾರಿಕೆ ಮತ್ತು ನಟನೆಯಲ್ಲಿಯೂ ಎತ್ತಿದ ಕೈ ಅಶ್ವಜೀತರವರ ತಂದೆ ಬಕ್ಕಪ್ಪನವರದು. ಕಾರಣ ಸರಕಾರದ ಯೋಜನೆಗಳ ಪ್ರಸಾರ, ಬಿದಿನಾಟಕ, ಜಾನಪದ ಸಂಗೀತದೊಂದಿಗೆ ವಿಶೇಷವಾಗಿ ಸಾಮಾಜಿಕ ಸೇವೆ- ಹೋರಾಟ ಸಾಮಾಜಿಕ ನ್ಯಾಯಕ್ಕಾಗಿ ಅವಿರತ ಸೇವೆಯನ್ನು ಗೈಯುವ ಅವರ ಕಾರ್ಯವು ಅಶ್ವಜೀತರವರ ಮನಸಿನ ಮೇಲೆ ಗಾಢ ಪರಿಣಾಮ ಬೀರಿತು. ಹಾಗೆಯೇ ಅವರ ತಂದೆಯವರ ಸಹಪಾಠಿಗಳಾದ ಕಾಶೀನಾಥ ಪಂಚಶೀಲ ಗವಾಯಿ, ಮಾಣಿಕ ಜ್ಯೋತಿ, ನೀಲಖಂಠ ಕುರುಬಖೆಳಗಿ ಮುಂತಾದವರ ಹಾಡುಗಳು ಹಾಗೂ ಬೀದರ ಜಿಲ್ಲೆಯ ಖ್ಯಾತ ಬಂಡಾಯ ಸಾಹಿತಿಗಳಾದ ಎಂ. ಎಸ್. ಮನೋಹರವರು ರಚಿಸಿದ “ಮಾಟ ಮಂತ್ರ” ನಾಟಕವು ಅಶ್ವಜೀತರವರ ಮನಸಿನ ಮೇಲೆ ತುಂಬ ಪರಿಣಾಮ ಬೀರಿದ ಪರಿಣಾಮ ಮೌಢ್ಯತೆಯಿಂದ ಹೊರಬರಲು ಸಾಧ್ಯವಾಯಿತೆಂದು ಅಶ್ವಜೀತರವರೇ ಹೇಳಿಕೊಂಡಿದ್ದಾರೆ.

ಸಾಹಿತ್ಯ ಸೇವೆ

ಅಶ್ವಜೀತರವರು ಬುದ್ಧ ಬಸವ ಅಂಬೇಡ್ಕರ ಪೆರಿಯಾರ ಅವರ ವಿಚಾರಧಾರೆಯನ್ನು ಮೈಗೂಡಿಸಿಕೊಂಡವರು. ಖ್ಯಾತ ಬಂಡಾಯ ಸಾಹಿತಿಗಳಾದ ಕವಿ ಚೆನ್ನಣ್ಣ ವಾಲಿಕರ್, ಸಿದ್ದಲಿಂಗಯ್ಯ, ಪ್ರೋ.ಬಿ ಕೃಷ್ಣಪ್ಪ ಮುಂತಾದ ಸಾಹಿತಿಗಳ ವಿಚಾರಗಳ ಅಧ್ಯಯನದೊಂದಿಗೆ ತಮ್ಮ ತಂದೆಯವರ ಸಾಮಾಜಿಕ ಕಾರ್ಯಚಟುವಟಿಕೆಯಿಂದ ಪ್ರಭಾವಿತರಾಗಿ ದಿನ ಬಡವರ ಮೇಲೆ, ದಲಿತರ ಮೇಲೆ ಆಗುತ್ತಿರುವ ಶೋಷಣೆಗಳ ವಿರುದ್ಧ ಮೌಢ್ಯತೆಯ ವಿರುದ್ಧ ಜನರಲ್ಲಿ ಜಾಗೃತಿ ಮುಡಿಸುತ್ತಾ ನೊಂದ ಬಡವರ ಪರವಾಗಿ ತಮ್ಮ ಬರಹದ ಮೂಲಕ ಧ್ವನಿ ಎತ್ತುವ ಕೆಲಸವನ್ನು ಮಾಡಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಓದುತ್ತಿರುವಾಗಲೇ ಬುದ್ದ, ಭೀಮರ ಭಜನೆ ಹಾಡುಗಳನ್ನು ಬರೆಯುವ ಮೂಲಕ ಸಾಹಿತ್ಯದೆಡೆಗೆ ತಮ್ಮ ಹವ್ಯಾಸವನ್ನು ಮೈಗೂಡಿಸಿಕೊಂಡರು. ಅದೇ ರೀತಿ ಲೇಖನಗಳು, ಕವನಗಳು, ವಿವಿಧ ಪತ್ರಿಕೆಗಳಲ್ಲಿ ಅಂಕಣ ಬರಹಗಳು ಬರೆಯುತ್ತ ಹೋದರು. ಇವರ ಲೇಖನಗಳು ಮೌಲ್ಯಯುತವಾದ ಸಮಾಜವನ್ನು ತಿದ್ದುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಪ್ರಸ್ತುತ ವಿಷಯಗಳ ಬೆಳಕು ಚೆಲ್ಲುವ ಲೇಖನಗಳಾಗಿದ್ದು ಉದಯಕಾಲ, ಪ್ರಜಾಲೇಖನಿ, ಪ್ರಜಾ ಪ್ರಗತಿ, ಪ್ರಜಾವಾಹಿನಿ, ಬಸವ ಭಾರತ ಮುಂತಾದ ಸುಮಾರು ೧೮ ಕ್ಕೂ ಹೆಚ್ಚಿನ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುತ್ತವೆ.

ಚಿಮ್ಮಿದ ಬುಗ್ಗೆ(ವೈಚಾರಿಕ ಕವನ ಸಂಕಲನ), ಬುದ್ಧ ಭೀಮರ ಭಜನೆ ಹಾಡುಗಳು, ಧರಿನಾಡ ಸಿರಿ(ಕವನ ಸಂಕಲನ) ಮತ್ತು ಈ ನೆಲದ ಅಳಲು ಲೇಖನ ಪುಸ್ತಕ ಈಗಾಗಲೇ ಪ್ರಕಟಣೆಗೆ ಸಿದ್ಧವಾಗಿವೆ.

ಅದೇ ರೀತಿ ಯುವ ಬರಹಗಾರರಾದ ಅಜಿತ ಎನ್ ನೇಳಗಿ, ಬಾಲಾಜಿ ಕುಂಬಾರ, ರಾಜೇಶ್ ಶಿಂಧೆ, ಅವಿನಾಶ ಸೋನೆ ಮುಂತಾದವರ ಒಡನಾಟ ಹೊಂದಿರುವ ಅಶ್ವಜೀತರವರು ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಹಲವಾರು ಕನ್ನಡ ಕಾರ್ಯಕ್ರಮದ ಕವಿಗೋಷ್ಠಿಯಲ್ಲಿ ಭಾಗವಹಿಸುವ ಮೂಲಕ ತಮ್ಮ ಛಾಪನ್ನು ಮೂಡಿಸಿದ್ದಾರೆ.

ಅಶ್ವಜೀತರವರ ಸಾಹಿತ್ಯ ಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಯವರು ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿದ್ದಾರೆ.

ಪ್ರಶಸ್ತಿ ಪುರಸ್ಕಾರ

೧)ರಾಜ್ಯ ಮಟ್ಟದ ‘ಕವಿಭೀಮರತ್ನ ಪ್ರಶಸ್ತಿ’ :-ದಲಿತ ಸಾಹಿತ್ಯ ಪರಿಷತ್
೨)ರಾಜ್ಯ ಮಟ್ಟದ ‘ಬೀರಡಿ ಸಾಹಿತ್ಯ ಪ್ರಶಸ್ತಿ’:-ಬಿರಡಿ ಚಾನಲ್
3)ರಾಜ್ಯೋತ್ಸವ ‘ಕನ್ನಡ ಸೇವಾ ರತ್ನ ಪ್ರಶಸ್ತಿ’
ಪುರಸ್ಕಾರಕ್ಕೆ ಪಾತ್ರರಾಗಿರುವ ಯುವಕರಾದ ಅಶ್ವಜೀತ ದಂಡಿನ ಕಿವಿಯಿಂದ ನ್ಯೂನತೆಯಾದರೂ ಕವಿಯಾಗಿ, ಸಾಹಿತಿಗಳಾಗಿ, ಉತ್ತಮ ಬರಹಗಾರರಾಗಿ ದೈಹಿಕ ಸಮಸ್ಯೆ ಇದ್ದರೂ ಮಾನಸಿಕವಾಗಿ ಸದೃಢತೆಯಿಂದ ಸಾಧನೆ ಪಥದಲ್ಲಿ ಸಾಗುತ್ತಿರುವ ಇಂತಹ ಯುವಕರಿಗೆ ಕನ್ನಡಪರ ಸಂಘ ಸಂಸ್ಥೆಗಳು, ಸರ್ಕಾರದ ಜನಪ್ರತಿನಿಧಿಗಳು ಸೇರಿದಂತೆ ಸಾಹಿತ್ಯ ಆಸಕ್ತಿಯುಳ್ಳ ಎಲ್ಲರು ಪ್ರೋತ್ಸಾಹ ನೀಡಿ ಮುನ್ನಲೆಗೆ ತರಬೇಕಾದದ್ದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು ಯುವ ಸಾಹಿತಿಗಳಾದ ಅಶ್ವಜೀತ ರವರ ವೈಚಾರಿಕತೆಯುಳ್ಳ ಬರಹಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಹೊರಬರಲೆಂದು ಆಶಿಸುತ್ತೇನೆ.

  • ಓಂಕಾರ ಪಾಟೀಲ, ಕಾರ್ಯದರ್ಶಿಗಳು
    ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ – ಬೀದರ
    ಮೊ. : ೬೩೬೦೪೧೩೯೩೩
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ