ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಕೈಗೊಂಡ ಆಕ್ಸಿಜನ್ ಕ್ರಾಂತಿ ಯೋಜನೆ ಕಾರ್ಯ ಶ್ಲಾಘನೀಯ : ಪರಮ ಪೂಜ್ಯ ಶ್ರೀ ಗುಂಡಯ್ಯ ಸ್ವಾಮಿ ಮಹಾಸ್ವಾಮಿಗಳು, ಸರ್ವೇಶ್ವರ ಮಠ ತುರುವಿಹಾಳ
ಸಿಂಧನೂರು ನಗರದ ವನಸಿರಿ ಫೌಂಡೇಷನ್ ಕಾರ್ಯಾಲಯಕ್ಕೆ ಪರಮ ಪೂಜ್ಯ ಶ್ರೀ ಗುಂಡಯ್ಯ ಸ್ವಾಮಿ ಮಹಾಸ್ವಾಮಿಗಳು ಸರ್ವೇಶ್ವರ ಮಠ ತುರುವಿಹಾಳ ಅವರು ಭೇಟಿ ನೀಡಿ ವನಸಿರಿ ಫೌಂಡೇಷನ್ ವತಿಯಿಂದ ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ,ಶುದ್ಧ ಗಾಳಿ, ಮಣ್ಣಿನ ಸಂರಕ್ಷಣೆ ಹಾಗೂ ದೇಶದ ಖನಿಜ ಸಂಪತ್ತುಗಳನ್ನು ಉಳಿಸುವ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆಗಾಗಿ ಕೈಗೊಂಡ ಆಕ್ಸಿಜನ್ ಕ್ರಾಂತಿ ಯೋಜನೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಅವರು ವನಸಿರಿ ಫೌಂಡೇಶನ್ ತಂಡ ಪ್ರತಿದಿನ ಪ್ರತಿಕ್ಷಣ ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂಬ ಧ್ಯೇಯೋದ್ದೇಶವನ್ನು ಇಟ್ಟುಕೊಂಡು ನಾಡಿನ ಜನತೆಗೆ ಪರಿಸರ ಸಂರಕ್ಷಣೆಯ ಕುರಿತು ಹಾಗೂ ಪರಿಸರ ವಿನಾಶದ ಪರಿಣಾಮಗಳನ್ನು ತಿಳಿಸಲು ವಿಭಿನ್ನವಾಗಿ ವಿವಿಧ ರೀತಿಯಲ್ಲಿ ವಿವಿಧ ಯೋಜನೆಗಳ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತೊಡಗಿರುವ ಕಾರ್ಯ ತುಂಬಾ ಶ್ಲಾಘನೀಯ. ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ, ಶುದ್ಧ ಗಾಳಿ, ಮಣ್ಣಿನ ಸಂರಕ್ಷಣೆ ಹಾಗೂ ದೇಶದ ಖನಿಜ ಸಂಪತ್ತುಗಳನ್ನು ಉಳಿಸುವ ನಿಟ್ಟಿನಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳು,ಅತಿ ಹೆಚ್ಚು ಗಿಡಮರಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗಾಗಿ ಆಕ್ಸಿಜನ್ ಕ್ರಾಂತಿ ಯೋಜನೆ ಕೈಗೊಂಡಿದ್ದಾರೆ. ಇಂತಹ ಒಂದು ಅದ್ಭುತವಾದ ಯೋಜನೆಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಗುವಂತಾಗಲಿ ಮತ್ತು ಅತ್ಯಂತ ಅಭೂತಪೂರ್ವಕವಾಗಿ ಈ ಯೋಜನೆ ಯಶಸ್ವಿಯಾಗಿ ಮುಂದೆ ಸಾಗಲಿ, ವನಸಿರಿ ತಂಡ ಅಮರೇಗೌಡ ಮಲ್ಲಾಪುರ ನೇತೃತ್ವದಲ್ಲಿ ಇನ್ನಷ್ಟು ಹೆಚ್ಚಿನ ಪರಿಸರ ಸೇವೆಯಲ್ಲಿ ತೊಡಗಲಿ ಮತ್ತು ಈ ಪರಿಸರ ಸೇವೆಯಲ್ಲಿ ತೊಡಗಿದ ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ ಎಂದು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ, ಶಂಕರಗೌಡ ಎಲೆಕೂಡ್ಲಿಗಿ ರಾಜು ಬಳಗನೂರು, ಚಂದ್ರು ಪವಾಡ ಶೆಟ್ಟಿ, ಚನ್ನಪ್ಪ ಕೆ ಹೊಸಹಳ್ಳಿ, ಮುದುಕಪ್ಪ ಹೊಸಳ್ಳಿ ಕ್ಯಾಂಪ್ ಇನ್ನಿತರರು ಇದ್ದರು.
