ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನರೇಗಾ:“ಮಹಿಳೆಯರದ್ದೇ ಮೇಲುಗೈ ”

ಪುರುಷರ ಸಮಾನವಾಗಿ ಎಲ್ಲಾ ಕ್ಷೇತ್ರದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಮಹಿಳೆಯರು, ನರೇಗಾ ಯೋಜನೆಯಲ್ಲೂ ಮೇಲುಗೈ ಸಾಧಿಸಿದ್ದಾರೆ.
ಗ್ರಾಮೀಣ ಮಹಿಳೆಯರು ಕೇವಲ ಮನೆ, ಮಕ್ಕಳು ಎನ್ನದೇ ಈಗ ಅದನ್ನು ದಾಟಿ ಗಂಡಿಗೆ ಸಮಾನವಾದ ದುಡಿಮೆಗೆ ಕಾಲಿಟ್ಟಿದ್ದಾರೆ. ಇಂತಹ ಸಮಾನ ದುಡಿಮೆಗೆ ಅವಕಾಶ ಮಾಡಿಕೊಟ್ಟಿರುವುದು ನರೇಗಾ ಯೋಜನೆ.
ಮಹಿಳೆಯರಿಗೆ ಸಮಾನ ಮತ್ತು ಸಹಬಾಳ್ವೆಯ ಹಾದಿಯಲ್ಲಿ ಸಾಗಲು ಸಹಕಾರಿಯಾಗಿರುವುದು ಹಾಗೂ ಹೊಸ ಚೈತನ್ಯ ತುಂಬಿರುವುದು ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ.
ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಿಲ್ಲೆಯ ಗ್ರಾಮೀಣ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಆ ಮೂಲಕ ಮಹಿಳೆಯರಿಗೆ ಸ್ವಾವಲಂಬಿಯ ಬದುಕನ್ನು ಕಟ್ಟಿಕೊಡುತ್ತಿದೆ. ಕಳೆದ 6 ವರ್ಷಗಳಿಂದ ಜಿಲ್ಲೆಯಲ್ಲಿ ಈ ಯೋಜನೆ ಯಶಸ್ವಿಯಾಗಿ ಸಾಗುತ್ತಿರುವುದಲ್ಲದೆ ಪುರುಷರಿಗಿಂತ ಮಹಿಳೆಯರೇ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ.
ಜಿಲ್ಲೆಯ 7 ತಾಲ್ಲೂಕುಗಳಲ್ಲಿ ಒಟ್ಟು 262 ಗ್ರಾಮಗಳು ಇದ್ದು, 2.42 ಲಕ್ಷಕ್ಕೂ ಹೆಚ್ಚಿನ ಜನ ಉದ್ಯೋಗ ಕಾರ್ಡ್ನ್ನು ಹೊಂದಿದ್ದಾರೆ. ಇದರಲ್ಲಿ 1.47 ಲಕ್ಷ ಜನರ ಜಾಬ್ ಕಾರ್ಡ್ ಚಾಲ್ತಿಯಲಿದ್ದು, ಪ್ರಸ್ತುತದಲ್ಲಿ 5.57 ಲಕ್ಷ ಜನರು ಕೆಲಸದಲ್ಲಿ ನಿರತರಾಗಿದ್ದಾರೆ. ಇದರಲ್ಲಿ ಪರಿಶಿಷ್ಟ ಜಾತಿಯವರು ಶೇ. 2.82 ಹಾಗೂ ಪರಿಶಿಷ್ಟ ಪಂಗಡದವರು ಶೇ.5 ರಷ್ಟು ಇದ್ದಾರೆ. 2024-25 ರಲ್ಲಿ ಶೇ.54.95 ಮಹಿಳೆಯರು ಇದ್ದಾರೆ.

ಮಹಿಳೆಯರೇ ಮೇಲುಗೈ:

ಜಿಲ್ಲೆಯಲ್ಲಿ ಮಹಿಳೆಯರು ಇದರ ಲಾಭವನ್ನು ಹೆಚ್ಚಾಗಿ ಪಡೆಯುತ್ತಿದ್ದು, 2019-20 ರಲ್ಲಿ ಶೇ.64.96 ರಷ್ಟು ನರೇಗಾ ಯೋಜನೆಯ ಫಲಾನುಭಾವಿಗಳು ಇದ್ದರೆ ಅದರಲ್ಲಿ ಶೇ. 50.86 ರಷ್ಟು ಫಲಾನುಭವಿಗಳು ಮಹಿಳೆಯರೇ ಆಗಿದ್ದಾರೆ. 2020-21 ರಲ್ಲಿ ಶೇ.100 ರಷ್ಟರಲ್ಲಿ ಮಹಿಳೆಯರು ಶೇ.49.65, 2021-22 ರಲ್ಲಿ ಶೇ.102.19 ರಲ್ಲಿ ಮಹಿಳೆಯರು ಶೇ.49.39, 2022-23 ರಲ್ಲಿ ಶೇ.108.09 ರಲ್ಲಿ ಮಹಿಳೆಯರು ಶೇ.51.29, 2023-24 ರಲ್ಲಿ ಶೇ. 100.32 ರಷ್ಟರಲ್ಲಿ ಮಹಿಳೆಯರು ಶೇ.53.84, 2024-25 ರಲ್ಲಿ ಶೇ.77.22 ರಷ್ಟರಲ್ಲಿ ಮಹಿಳೆಯರು ಶೇ. 54.95 ರಷ್ಟು ಫಲಾನುಭವಿಗಳಿರುವುದು ಮಹಿಳೆಯರದ್ದೇ ಮೈಲುಗೈ ಎಂಬುದನ್ನು ಸಾಬೀತುಪಡಿಸಿದೆ.

ಆಯವ್ಯಯದಲ್ಲಿ ಕೊರತೆ ಇಲ್ಲ :

ಜಿಲ್ಲೆಯಲ್ಲಿ ನರೇಗಾ ಯೋಜನೆಯು ಯಶಸ್ವಿಯಾಗಿ ಸಾಗುತ್ತಿದೆ. ಪ್ರತಿ ವರ್ಷವೂ ಈ ಯೋಜನೆಗೆ ಬೇಕಾದ ಅನುದಾನವನ್ನು ಸರಿಯಾದ ಕ್ರಮದಲ್ಲಿ ಎಲ್ಲೂ ವ್ಯರ್ಥವಾಗದಂತೆ ಜಿಲ್ಲಾ ಪಂಚಾಯತ್ ನಿಗಾ ವಹಿಸಿ ಬಳಸುತ್ತಿದೆ. ಅದರಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಎಷ್ಟು ಅನುದಾನ ಬೇಕೋ ಅಷ್ಟು ಮಾತ್ರ ಅನುದಾನ ಪಡೆಯುತ್ತಿದ್ದು, ಅನುದಾನವನ್ನು ವ್ಯರ್ಥವಾಗದಂತೆ ಕಾಪಾಡಿಕೊಂಡು ಬರುತ್ತಿದೆ.
ಫಲಾನುಭವಿಗಳಿಗೆ ಕೂಲಿಯ ರೂಪದಲ್ಲಿ ದಿನಕ್ಕೆ ರೂ. 349 ರೂ ಗಳು ನೀಡಲಾಗುತ್ತದೆ. 2024-25 ನೇ ಸಾಲಿನಲ್ಲಿ ವಾರ್ಷಿಕ ಗುರಿ ಒಟ್ಟು 29,00,000 ಮಾನವ ದಿನಗಳಾಗಿದ್ದು 22,51,876 ಮಾನವ ದಿನಗಳನ್ನು ಪೂರೈಸಲಾಗಿದೆ. ಸಾಧನೆ ಮಾಡಲಾಗಿದ್ದು ಭೌತಿಕವಾಗಿ ಶೇ.77.56 ಹಾಗೂ ಆರ್ಥಿಕವಾಗಿ ಶೇ.58.77 ಆಗಿದೆ.
ಇದರಲ್ಲಿ ಭದ್ರಾವತಿ ಮೊದಲ ಸ್ಥಾನದಲ್ಲಿದ್ದರೆ, ತೀರ್ಥಹಳ್ಳಿ ಕೊನೆಯ ಸ್ಥಾನದಲ್ಲಿದೆ. ಭದ್ರಾವತಿ ಭೌತಿಕ ಗುರಿ ಶೇ.85.38, ಆರ್ಥಿಕ ಗುರಿ ಶೇ. 64.86 ಸಾಧಿಸಲಾಗಿದೆ ಹೊಸನಗರ ಭೌತಿಕ ಶೇ.59 ,ಆರ್ಥಿಕ ಶೇ.50.89, ಸಾಗರ ಭೌತಿಕ ಶೇ.86.84 ಹಾಗೂ ಆರ್ಥಿಕ ಶೇ.71.72, ಶಿಕಾರಿಪುರ ಭೌತಿಕ ಶೇ.73.69 ಮತ್ತು ಆರ್ಥಿಕ ಶೇ.59.52, ಶಿವಮೊಗ್ಗ ಭೌತಿಕ ಶೇ.91.45 ಹಾಗೂ ಆರ್ಥಿಕ ಶೇ.61.53, ಸೊರಬ ಭೌತಿಕ ಶೇ.74.93 ಹಾಗೂ ಆರ್ಥಿಕ ಶೇ.50.43, ತೀರ್ಥಹಳ್ಳಿ ಭೌತಿಕ ಶೇ.61.50 ಹಾಗೂ ಆರ್ಥಿಕ ಶೇ.47.02 ಗುರಿ ಸಾಧಿಸಲಾಗಿದೆ.

ನರೇಗಾ ಯೋಜನೆ ಕೇವಲ ಜಿಲ್ಲೆಯಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ನಮ್ಮ ಜಿಲ್ಲೆಯಲ್ಲಿ ಮಹಿಳೆಯರು ಅತ್ಯಂತ ಸಕ್ರಿಯವಾಗಿ ಈ ಯೋಜನೆಯಡಿ ಪಾಲ್ಗೊಂಡು ಪ್ರಯೋಜನೆ ಪಡೆಯುತ್ತಿದ್ದಾರೆ. ಪ್ರಸ್ತುತ ಮಾನವ ದಿನಗಳನ್ನು 100 ದಿನಗಳಿಂದ 150 ದಿನಗಳಿಗೆ ಹೆಚ್ಚಿಸಲು ಆಲೋಚನೆ ನಡೆಸಲಾಗುತ್ತದೆ. ಈ ಹಿಂದೆ ಪ್ರವಾಹ, ಬರದಂತಹ ಪ್ರಾಕೃತಿಕ ವಿಕೋಪ ಸಂಭವಿಸಿದಾಗ 150 ದಿನಗಳು ಕೂಲಿಯನ್ನು ನೀಡಲಾಗುತ್ತಿತ್ತು. ಈಗ ಇದನ್ನು ಸಂಪೂರ್ಣ ಯೋಜನೆಗೆ 150 ದಿನಗಳನ್ನು ನೀಡುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ.
ಹೇಮಂತ್ ಎನ್, ಜಿ.ಪಂ. ಸಿಇಓ
‌ ‌ ‌ಶಿವಮೊಗ್ಗ.

ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ