ತಾಯಿ ಎಂದರೆ ಮಮತೆ.
ಪ್ರೀತಿ, ದಯೆ, ಕರುಣೆಯೆ ವಾತ್ಸಲ್ಯ ಪ್ರತೀಕ. ತಾಯಿಯಾದವಳು ಜೀವವೆಲ್ಲ ತನ್ನ ಮಕ್ಕಳಿಗಾಗಿ ಮೀಸಲಿಟ್ಟಿರುತ್ತಾಳೆ. ಮುಕ್ಕೋಟಿ ದೇವತೆಗಳ ಮುಂದೆ ತಾಯಿಯೇ ಸರ್ವಸ್ವ.
ನನಗೆ ಇತ್ತೀಚಿಗೆ ಬುದ್ಧಿ ಬಂದಾಗ ಅಮ್ಮ ಆಗ ನನಗೆ ತಿಳಿಸಿಕೊಟ್ಟಂತಹ ಕೆಲವು ಘಟನೆಗಳು, ನೆನಪಿಗೆ ಬರುತ್ತವೆ, ಬಾಲ್ಯದಲ್ಲಿ ನಾವು ಕಷ್ಟ- ಸುಖವನ್ನು ಅನುಭವಿಸುತ್ತಿರುತ್ತೇವೆ. ಅದನ್ನು ಯಾವ ರೀತಿಯಾಗಿ ನಿಭಾಯಿಸಬೇಕು ಎಂಬುದರ ಬಗ್ಗೆ ಗೊತ್ತಿರುವುದಿಲ್ಲ.
ನಾವು ಬಾಡಿಗೆ ಮನೆಯಲ್ಲಿದ್ದಾಗ ಅಮ್ಮ ಒಂದು ತುಪ್ಪದ ಈರೇಕಾಯಿ ಬಳ್ಳಿನ ಹಾಕಿದ್ದಳು. ಅದು ಮನೆ ತುಂಬಾ ಹಬ್ಬಿತು, ಸಿಕ್ಕಾಪಟ್ಟೆ ಕಾಯಿಯೂ ಬಿಡುತ್ತಿತ್ತು. ಇದರಿಂದ ಅಮ್ಮನಿಗೆ ಉಪಾಯ ಉಳಿಯಿತು
ಹೇಗಾದರೂ ಮಾಡಿ ಮಕ್ಕಳಿಗೆ ಪಾಠ ಕಲಿಸಬೇಕಲ್ಲ ಅಂತ ಉದ್ದೇಶದಿಂದ ಮನೆ ತುಂಬಾ ಬಿಟ್ಟಂತಹ ತುಪ್ಪದ ಹೀರೆಕಾಯಿಯ ಕಾಯಿಗಳನ್ನು ಕೀಳಲು ಹೇಳಿದರು. ನಾನು ಎಲ್ಲವನ್ನೂ ಕಿತ್ತು ಹಾಕಿದೆ.
ತದನಂತರ ಅಮ್ಮ ಕಿತ್ತಂತಹ ಎಲ್ಲವನ್ನೂ ಸಂಗ್ರಹಿಸಿ ಮನೆ ಮನೆಗೆ ಮಾರಿಕೊಂಡು ಬಾ ಎಂದಳು. ನನಗೆ ಈ ಒಂದು ವಿಚಾರವೇ ತಿಳಿದಿರಲಿಲ್ಲ
ಹಣವನ್ನು ಯಾವ ರೀತಿಯಾಗಿ ಗಳಿಸಬೇಕು ಎಂಬ ಐಡಿಯಾವನ್ನೇ ಗೊತ್ತಿಲ್ಲದ ದಿನಗಳಲ್ಲಿ ತಾಯಿ ಪರಿಚಯಿಸಿದಳು ದುಡಿಮೆಗೆ ನೂರಾರು ದಾರಿ ಅನ್ನುವಂತೆ ನನ್ನಮ್ಮನ ಬುದ್ಧಿ ಮಾತುಗಳನ್ನೊಡನೆ ಹಣವನ್ನು ಯಾವ ರೀತಿಯಾಗಿ ಮಾಡಬಹುದು ಎಂಬಂತಹ ಸಲಹೆಯನ್ನು ಕೊಟ್ಟರು.
ಮಕ್ಕಳಿಗೆ ಬರೀ ವಿದ್ಯೆ ಸಾಲದು ತಮ್ಮ ಸುತ್ತಮುತ್ತಲಿನವರ ಬಡತನವೂ ಗೊತ್ತಿರಬೇಕೆಂಬ ವಿಚಾರವನ್ನು ಹೇಳಿದಳು.
ಆಗ ನಾನು ಅಪ್ಪನನ್ನ ಕೇಳಿದೆ.
ಪ್ರತಿನಿತ್ಯ ಪಟ್ಟಣಕ್ಕೆ ಹೋಗಿ ಅಲ್ಲಿ ಯಾರಾದರೂ ಜೊತೆಗೆ ನಿಂತು, ಮಾರುವ ಉದ್ದೇಶವನ್ನು ಇಟ್ಟುಕೊಂಡೆ ನನಗೆ ಆ ಸಮಯಕ್ಕೆ ಗೊಂದಲ ಉಂಟಾದವು, ಕಾರಣ ಯಾರೂ ನನಗೆ ಪರಿಚಯ ಇಲ್ಲದವರು. ಪಟ್ಟಣದ ಒಂದು ದಾರಿಯಲ್ಲಿ ಸೊಪ್ಪನ್ನು ಮಾರುವವರ ಪರಿಚಯವಾಯಿತು. ಸೊಪ್ಪಿನವರ ಪಕ್ಕದಲ್ಲಿ ನಾನು ಹೀರೇಕಾಯಿನ ಇಟ್ಟುಕೊಂಡೆ
ಹಾಗೆಯೇ ಸುಮ್ಮನಿದ್ದೆ.
ಆಗ ಸೊಪ್ಪನ್ನು ಮಾರುವ ವ್ಯಕ್ತಿ ತಮ್ಮ ಹೀಗೆಲ್ಲಾ ನಿಂತುಕೊಂಡರೆ ಆಗೋದಿಲ್ಲ. ಏನಾದರೂ ಹೇಳಿ ಮಾರು ಎಂದಾಗ ಮತ್ತೆ ಸುಮ್ಮನೆ ನಿಂತೆ.
ಕೊನೆಗೆ ಆ ಸೊಪ್ಪನ್ನು ಮಾರುವ ವ್ಯಕ್ತಿಯೆ ತನ್ನ ಬಳಿ ಬಂದಂತಹ ಗಿರಾಕಿಗಳಿಗೆ ಹೇಳಿ ಒಂದು ತುಪ್ಪದ ಹೀರೆಕಾಯಿ 5 ರುಪಾಯಿ ನಾಲ್ಕು ತೆಗೆದುಕೊಂಡರು 20 ರೂಪಾಯಿ ಎಂದು ಹೇಳಿದರು.
ಆಗ ನನಗೆ ಅವರು ಕೊಟ್ಟ ಸಲಹೆಯಂತೆ. ದಿನಕ್ಕೆ ಒಂದು ಚೀಲವನ್ನು ತಂದು ಮಾರುತಿದ್ದೆ.
ಆಗ ನನಗೆ ವಯಸ್ಸು 15, ಮನೆಯಲ್ಲಿ ಕೂಡಾ ಕೆಲಸ ಮಾಡುವಂತೆ ಯಾರು ಕೂಡಾ ಹೇಳುತ್ತಿರಲಿಲ್ಲ.
ಅಪ್ಪನಿಗೆ ಸಹಾಯ ಮಾಡುತ್ತಿದ್ದೆ , ಅಮ್ಮನಿಗೂ ಸಹಾಯ ಮಾಡುತ್ತಿದ್ದೆ. ಬೇಸಿಗೆ ದಿನದಲ್ಲಿ ಶಾಲೆಗೆ ರಜೆ ಇದ್ದಾಗ ಎಲ್ಲಾದರೂ ಹೋಗಿ ದುಡಿಯುತ್ತೇನೆ ಎಂದಾಗ ಅಪ್ಪ ಬೈಯುತ್ತಿದ್ದರು. ಎಲ್ಲರೂ ಬಟ್ಟೆ ಅಂಗಡಿಗೆ ಹೋಗುತ್ತಾರೆ ಅವರ ದುಡ್ಡು ನೋಡಿ. ಓದುವುದನ್ನು ನಿಲ್ಲಿಸುತ್ತಾರೆ ಎಂಬ ಭಯ ಅಪ್ಪನಗಿತ್ತು. ಹಾಗಾಗಿ ಎಷ್ಟೇ ಕಷ್ಟವಾದರೂ ಅಪ್ಪನೇ ದುಡಿತಿದ್ದರು.
ಹೀಗಾಗಿ ಪ್ರತಿನಿತ್ಯ
ಸರ್ಕಾರ ಕೊಟ್ಟಂತಹ ಬೈಸಿಕಲ್ ಮೇಲೆ ಮನೆಯ ಮೇಲೆ ಬಿಟ್ಟಂತಹ ಹೀರೆಕಾಯಿಗಳನ್ನು ಕಿತ್ತುಕೊಂಡು ಪಟ್ಟಣಕ್ಕೆ ಹೋಗುವುದು ಸೊಪ್ಪಿನವರ ಜೊತೆ ಸೇರಿ ವ್ಯಾಪಾರ ಮಾಡಿಕೊಂಡು ಮನೆಗೆ ಬರುತ್ತಿದ್ದೆ. ಬಂದಂತಹ ಆದಾಯವನ್ನ ಅಮ್ಮನಿಗೆ ಕೊಡುತ್ತಿದ್ದೆ. ಅಮ್ಮನಿಗೂ ಖುಷಿ ನನಗೂ ಖುಷಿಯಾಗುತ್ತಿತ್ತು. ಕಾರಣ ನನಗೆ ಇದೇ ಮೊದಲು ಪಟ್ಟಣಕ್ಕೆ ಹೋಗಿ ಮಾರುವುದು. ಹಾಗಾಗಿ ಜೀವನದಲ್ಲಿ ಏನೇ ಕಷ್ಟ ಬಂದರೂ ಕೂಡ ಅಮ್ಮ ಪರಿಹಾರವನ್ನು ಹುಡುಕುತ್ತಿದ್ದಳು.
ಹಾಗಾಗಿ ಪ್ರತಿಯೊಬ್ಬರೂ ತಂದೆ ತಾಯಿ ಕಷ್ಟವನ್ನು ಅರಿತುಕೊಳ್ಳಬೇಕು.
ಜೀವನದಲ್ಲಿ ಅವರ ಸಲಹೆಗಳು ಅತಿ ಮುಖ್ಯವಾಗಿರುತ್ತದೆ.
- ಎಂ ಚಂದ್ರಶೇಖರ ಚಾರಿ, ಸಹ ಶಿಕ್ಷಕರು
ವಿಶ್ವಮಾನವ ವಸತಿ ಪ್ರೌಢಶಾಲೆ ,ಚಿತ್ರದುರ್ಗ
7892642593
