ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಪುಟಾಣಿ ಸಂಚಯ ಕೃತಿ ಪರಿಚಯ

ಮುನ್ನುಡಿ : ಪುಟಾಣಿ ಸಂಚಯ…
( ಮಕ್ಕಳ ಕವನ ಸಂಕಲನ )

ಕವಯತ್ರಿಯವರು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕನ್ನಡದ ಪ್ರಥಮ ಶಾಸನವಾದ ಹಲ್ಮಿಡಿ ಗ್ರಾಮದ ಸಮೀಪವಿರುವ ನಾರಾಯಣಪುರ ಎಂಬ ಹಳ್ಳಿಯ ಆದರ್ಶ ದಂಪತಿಗಳಾದ ಲೋಕೇಶ್ ಎನ್. ಈ, ರತ್ನಮ್ಮ ಲೋಕೇಶ್, ಇವರ ಜೇಷ್ಠ ಪುತ್ರಿಯಾಗಿ 1984 ಜುಲೈ 13 ರಂದು ಭವ್ಯಾ ಸುಧಾಕರ್ ಜಗಮನೆ ಅವರು ಜನಿಸಿದರು. ಇವರು M.A, B.ED, ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಇವರ ಸಾಹಿತ್ಯಯಾನ ಪದವಿ ಪೂರ್ವ ಹಂತದಲ್ಲಿ ಇರುವಾಗಲೇ ಆರಂಭವಾಗಿದೆ. ಮತ್ತು ಅವರ ಸಾಹಿತ್ಯವನ್ನು ಗುರುತಿಸಿ ಅವರಿಗೆ ಹಲವಾರು ಬಿರುದುಗಳು ಕೂಡಾ ಸಂಧಿಸಿವೆ. ಅವುಗಳೆಂದರೆ, ಭಾರತೀಯ ಸರ್ವ ಶ್ರೇಷ್ಠ ಕರುನಾಡು ಕೋಗಿಲೆ ಬಿರುದು, ಜ್ಞಾನ ಚಾಣಕ್ಯ ಬಿರುದು, ಚೈತನ್ಯಶ್ರೀ ರಾಜ್ಯ ಪ್ರಶಸ್ತಿ ಪುರಸ್ಕೃತ ಹೀಗೆ ಅವರು ಸಾಹಿತ್ಯ ಕ್ಷೇತ್ರದಲ್ಲಿ ಪಡೆದಿರುವ ಬಿರುದುಗಳಾಗಿವೆ. ಇವರು ಪುಸ್ತಕಗಳನ್ನು ಕೂಡಾ ಪ್ರಕಟಣೆ ಮಾಡಿದ್ದಾರೆ. ಅವುಗಳೆಂದರೆ, ಲೋಕ ರತ್ನ ಸ್ವರಚಿತ ನುಡಿಮುತ್ತುಗಳು 2023 ಅಕ್ಟೋಬರ್ ಕಥಾಬಿಂದು ಪ್ರಕಾಶನ, “ಭಾವಸುಧೆ” ಕವನ ಸಂಕಲನ ಇವರು ಪ್ರಕಟಣೆ ಮಾಡಿರುವ ಪುಸ್ತಕಗಳಾಗಿವೆ. ನಾಡು ನುಡಿ ಉಳಿಸಿ ಬೆಳೆಸುತ್ತಾ ರಾಷ್ಟ್ರಸೇವೆ ಮಾಡುತ್ತಾ ವಿಶ್ವಶಾಂತಿ ಕಾಪಾಡುತ್ತ ವಿಶ್ವ ಮಾನವರಾಗೋಣ  ಎಂದು ಅವರು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಇನ್ನೊಂದು ಕವನ ಸಂಕಲನವನ್ನು ಬಿಡುಗಡೆ ಮಾಡುತ್ತಿದ್ದಾರೆ.
ಕನ್ನಡ ಸಾಹಿತ್ಯದ ಇತಿಹಾಸದಲ್ಲಿ 20ನೇ ಶತಮಾನ ಅತ್ಯಂತ ವಿಶಿಷ್ಟವಾದದ್ದು. ಈ ಸಂದರ್ಭದಲ್ಲಿ ಮಹಾಕಾವ್ಯ,ಭಾವಗೀತೆ, ಸಣ್ಣ ಕಥೆ, ಕಾದಂಬರಿ, ಪ್ರಬಂಧ,ನಾಟಕ, ವಿಚಾರ ಸಾಹಿತ್ಯ, ಮೊದಲಾದವುಗಳನ್ನು ಮೈಗೂಡಿಸಿಕೊಂಡು ಕನ್ನಡ ಸಾಹಿತ್ಯ ಸಮೃದ್ಧವಾಗಿ ಬೆಳೆದಿದೆ. ಇವುಗಳಲ್ಲಿ ‘ಮಕ್ಕಳ ಸಾಹಿತ್ಯ’ವು ಅಥವಾ ಮಕ್ಕಳ ಬಗ್ಗೆ ಶಿಶು ಗೀತೆಗಳು ಗಮನಾರ್ಹವಾದುದು.               
‘ಮಕ್ಕಳ ಸಾಹಿತ್ಯ’ ಅಥವಾ ಮಕ್ಕಳ ಬಗ್ಗೆ ಹಲವಾರು ಕವನಗಳನ್ನು ಶಿಶು ಗೀತೆಗಳು ಅಂದರೆ ಮಕ್ಕಳ ಮನಸ್ಸನ್ನು ಅರಳಿಸಿ ಕುತೂಹಲವನ್ನು ಕೆರಳಿಸಿ, ಕಲ್ಪನೆಯನ್ನು ರೂಪಿಸಿ, ಭಾವನೆಗಳನ್ನು ಪ್ರಚೋದಿಸಿ, ಆನಂದದಲ್ಲಿ ಮೇಯಿಸಿ ಅವರ ವ್ಯಕ್ತಿತ್ವವನ್ನು ರೂಪಿಸುವ ಸಾಹಿತ್ಯ ಕನ್ನಡದಲ್ಲಿ ಈ ಉದ್ದೇಶವನ್ನು ಈಡೇರಿಸುವಂತಹ ಸಾಹಿತ್ಯ ಇತ್ತಾದರೂ, ಅದಕ್ಕೆ ಮಕ್ಕಳ ಸಾಹಿತ್ಯ ಎಂಬ ಸ್ಪಷ್ಟ ರೂಪ ಬಂದದ್ದು. ಕನ್ನಡದಲ್ಲಿ ಮಕ್ಕಳ ಸಾಹಿತ್ಯದ ಬೇರನ್ನು ಜಾನಪದ ಪರಂಪರೆಯಲ್ಲಿಯೇ ಕಾಣಬಹುದು. ಅಜ್ಜಿ ಹೇಳುವ ಲಾಲಿ ಪದಗಳು, ಪ್ರಾಸಬದ್ಧವಾದ ಆಟದ ಪದಗಳು, ಒಗಟುಗಳು, ಕಥೆಗಳು, ಅದರಲ್ಲೂ ರಾಜಕುಮಾರಿಯರ ಕಥೆ, ಅದ್ಭುತ ರಮ್ಯ ಕಥೆ, ಪಂಚತಂತ್ರದ ಕಥೆ – ಇವೆಲ್ಲಾ ಮಕ್ಕಳ ಮನಸ್ಸನ್ನು ಉಲ್ಲಾಸಗೊಳಿಸುವೆ. ಆದರೂ ಆಧುನಿಕ ಕಾಲದಲ್ಲಿ ಮುದ್ರಣ ಕಲೆ ಬಂದ ಮೇಲೆ ಮಕ್ಕಳ ಸಾಹಿತ್ಯ ವಿಫುಲವಾಗಿ ಬೆಳೆಯಿತು. ಕನ್ನಡದ ಅನೇಕ ಪ್ರಸಿದ್ಧ ಕವಿಗಳು ಮಕ್ಕಳ ಮನಸ್ಸನ್ನು ಪ್ರವೇಶಿಸಿ, ಅವರಿಗೆ ಇಷ್ಟವಾಗುವಂತಹ ಸಾಹಿತ್ಯ ರಚಿಸಿದರು. ಈ ಒಂದು ನಿಟ್ಟಿನಲ್ಲಿ ಯುವ ಬರಹಗಾರ್ತಿ, ಕವಯತ್ರಿಯಾದ, ಭವ್ಯ ಸುಧಾಕರ್ ಜಗಮನೆ ಅವರು ಮಕ್ಕಳ ಬಗ್ಗೆ ಹಲವಾರು ಕವನಗಳನ್ನು ಬರೆದು ಅದರಲ್ಲಿ ಮಕ್ಕಳ ಬೆಳವಣಿಗೆ ಕಲಿಕೆ ಆಟ ಪಾಠ ಜೀವನದ ಬಗ್ಗೆ ಮಕ್ಕಳ ಕವನ ಸಂಕಲನ ಶೀರ್ಷಿಕೆ *ಪುಟಾಣಿ ಸಂಚಯ* ಎಂಬ ಶಿಶು ಗೀತೆಯ ಕವನ ಸಂಕಲನವನ್ನು ಹೊರ ತರುತ್ತಿದ್ದೇನೆ ಸರ್ ಮುನ್ನುಡಿ ಬರೆದು ಕೊಡಿ ಎಂದು ಕೇಳಿದಾಗ ತುಂಬಾ ಖುಷಿಯಿಂದ ಒಪ್ಪಿಕೊಂಡು ಬರೆದುಕೊಡುತ್ತೇನೆ ಎಂದು ಹೇಳಿದೆ.
ಕವಿಯತ್ರಿಯಾದ ಭವ್ಯಾ ಸುಧಾಕರ ಜಗಮನೆ ಅವರು ತಮ್ಮದೊಂದು ಕವನ ಸಂಕಲನಕ್ಕೆ ನನ್ನಿಂದ ಮುನ್ನುಡಿ ಬಯಸಿ ಕೇಳಿದರು. ಅದು ತುಂಬಾ ಸಂತೋಷದ ವಿಷಯವಾಯಿತು.

ಈ ಸಂಗ್ರಹದ ಮೊದಲ ಕವಿತೆ ‘ತಾಯ್ತನ’ ಈ ಒಂದು ಕವನದಲ್ಲಿ ತಾಯಿ ಮತ್ತು ಮಕ್ಕಳ ಸಂಬಂಧದ ನಡುವಿನ ಪ್ರೀತಿ, ಬಾಂಧವ್ಯ ಮತ್ತು ಮಕ್ಕಳಿಗೆ ಜನ್ಮ ನೀಡಿ ತಾಯಿ ಎಂಬ ಪಟ್ಟ ಪಡೆದು, ಮಕ್ಕಳೆ ನನ್ನ ಲೋಕ, ಸ್ವರ್ಗ ಎಂದು ಮತ್ತು ತಾಯಿಗೆ ಇರುವ ಎಲ್ಲಾ ಚಿಂತೆಗಳನ್ನು ದೂರ ಮಾಡಿ ಮಕ್ಕಳ ಬೆಳವಣಿಗೆಯಲ್ಲಿಯೇ ಬೆಳಕನ್ನು ಕಂಡುವಳು. ಅಮ್ಮ ಎನ್ನುವ ಪದ ಕೇಳಲು ಮಹದಾನಂದ ಎಂದು ತುಂಬಾ ಸ್ವಾರಸ್ಯಕರ ಸಂಗತಿಯನ್ನು ವ್ಯಕ್ತಪಡಿಸಿದ್ದಾರೆ.

ಹಾಗೆಯೇ ಇನ್ನೊಂದು ಕವನ ‘ಆಕೃತಿ ಅರಿವು’ ಈ ಒಂದು ಕವನದಲ್ಲಿ ಬನ್ನಿರಿ ಗೆಳೆಯರೇ ಆಕೃತಿಯಾಟವ ಆಡೋಣ ಎಂದು ಗಣಿತಕ್ಕೆ ಸಂಬಂಧಪಟ್ಟ ಆಕೃತಿಗಳ ಬಗ್ಗೆ ಅವರು ಮನೆಯಲ್ಲಿರುವ ವಸ್ತುಗಳ ಜೊತೆಗೆ ಹೋಲಿಕೆ ಮಾಡಿ ಅದನ್ನು ತಿಳಿಸಿಕೊಟ್ಟಿದ್ದಾರೆ.

ಇನ್ನೊಂದು ಕವನ ‘ಸೈನಿಕನಾಗುವೆ’ ಈ ಒಂದು ಕವನದಲ್ಲಿ ಗಾಳಿ, ಮಳೆ, ಚಳಿಯ ಲೆಕ್ಕಿಸದೆ ಗಡಿಯ ರಕ್ಷಣೆ ಮಾಡುವ ಸೈನಿಕರ ಬಗ್ಗೆ, ತಮ್ಮವರ ಪ್ರಾಣ ಜತನದಿ ಉಳಿಸಿ, ಎದುರಾಳಿಗಳ ಪತನಗೊಳಿಸಿದ ಶೂರರೆಂದು ತಾಯಿನೆಲದ ತಂಟೆಗೆ ಯಾರಾದರೂ ಬಂದರೆ ಅವರ ವಿರುದ್ಧ ಹೋರಾಡಿ ಭಾರತಾಂಬೆಗೆ ವಿಜಯಮಾಲೆ ಹಾಕಿ, ದೇಶ ಸೇವೆ ಮಾಡುವುದೇ ನಮ್ಮ ಪುಣ್ಯ, ರಾಷ್ಟ್ರಕ್ಕಾಗಿ ನಮ್ಮ ಜೀವ ಸಮರ್ಪ ಎಂದು ಸೈನಿಕರ ಬಗ್ಗೆ ತುಂಬಾ ಸೊಗಸಾಗಿ ಬರೆದಿದ್ದಾರೆ.

‘ಪುಸ್ತಕ ‘ ಎಂಬ ಕವನದಲ್ಲಿ ಪುಸ್ತಕವನ್ನು ನನ್ನ ಆಪ್ತಮಿತ್ರ ನೀನು ಎಂದು ಹೋಲಿಸಿದ್ದಾರೆ. ಅಂದರೆ “ಪುಸ್ತಕಗಳು ನಮ್ಮ ನಿಜವಾದ ಮಿತ್ರರಿದ್ದಂತೆ ” ಮನುಷ್ಯರು ನಮ್ಮನ್ನು ಬಿಟ್ಟು ಹೋಗುತ್ತಾರೆ. ಪುಸ್ತಕಗಳು ಸದಾ ಜೊತೆಗೆ ಇರುತ್ತವೆ. ನಮಗೆ ಲೋಕಜ್ಞಾನ, ಭಾವೋದ್ರೇಕ, ಸಂತಸ ಸುಖ, ದುಃಖದ ಅನುಭವಗಳನ್ನು ಮಾಡಿಸುವ ಪುಸ್ತಕಗಳು ನಮ್ಮನ್ನು ಬಳಸಿಕೊಳ್ಳುವುದಿಲ್ಲ. ನಾವೇ ಅವುಗಳನ್ನು ಬಳಸಿಕೊಳ್ಳುತ್ತೇವೆ. ಪುಸ್ತಕಗಳ ಹಿಂದೆ ನಾವು ಹೊರಟರೆ ತಲೆ ಎತ್ತಿ ನಡೆಯುತ್ತೇವೆ. ಅವು ನಮಗೆ ಗೌರವ ತರುತ್ತವೆ.  ನಮಗೆ ಒಂದು ಗುರುತು ಕೊಡುತ್ತವೆ. ಆದ್ದರಿಂದ ಪುಸ್ತಕದೊಂದಿಗೆ ಸ್ನೇಹ ನಮ್ಮ ಉನ್ನತಿಯ ಮೂಲ ಎಂದು ತುಂಬಾ ಸೊಗಸಾಗಿ ಬರೆದಿದ್ದಾರೆ.

ಹೀಗೆ ಅರಸ ಹಾಳಾದ, ಕೋಳಿಯ ಕೋರಿಕೆ, ಮುದ್ದು ಮಗ,ಮುದ್ದು ಮಗಳು, ಜಾತ್ರೆಗೆ ಹೋಗಣ, ನಮ್ಮ ಶಾಲೆ, ಅಜ್ಜಿ, ಕನ್ನಡದ ಸ್ವರಗಳು, ಹಳ್ಳಿ ಹುಡುಗಿ ಈ ರೀತಿಯ ಮುಂತಾದ ಕವನಗಳನ್ನು ಅವರು ತುಂಬಾ ಚೆನ್ನಾಗಿ ಹೋಲಿಕೆ ಮಾಡುವುದರ ಮುಖಾಂತರ ಅರ್ಥಗರ್ಭಿತವಾಗಿ ವಿವರಣೆ ಮಾಡಿದ್ದಾರೆ.

ಹೀಗೆ ಭವ್ಯ ಸುಧಾಕರ ಜಗಮನೆ ಅವರು ನಾಡಿಗೆ ಪರಿಚಯಿಸುತ್ತಿರುವ ಅವರ ಕವನ ಸಂಕಲನವು ವಿಶೇಷವಾಗಿ ಮಕ್ಕಳ ಶಿಕ್ಷಣ, ಜೀವನ, ಮಕ್ಕಳ ಭಾಂಧವ್ಯ ಕುಟುಂಬದೊಂದಿಗೆ ಹೇಗೆ ಇರಬೇಕೆಂಬುದನ್ನು ಅವರು ತುಂಬಾ ಸೊಗಸಾಗಿ ತಮ್ಮ ಮನದ ಅಕ್ಷರಗಳ ಮೂಲಕ ವ್ಯಕ್ತಪಡಿಸಿದ್ದಾರೆ.

– ಶ್ರೀ ಮುತ್ತು. ಯ. ವಡ್ಡರ, ಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಿರೇಮಳಗಾವಿ
ಹುನಗುಂದ ತಾಲೂಕು, ಬಾಗಲಕೋಟೆ ಜಿಲ್ಲೆ.
ಮೊಬೈಲ್ – 9845568484

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ