ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಾಂಸಪ್ರಿಯರಿಗೊಂದು ಎಚ್ಚರಿಕೆ ಗಂಟೆ

ವಿಶೇಷ ವರದಿ :ಜಿಲಾನ್ ಸಾಬ್ ಬಡಿಗೇರ.

ನೀವು ಖರೀದಿಸುವ ಮಟನ್ ಒಳ್ಳೆಯದೇ, ತಾಜಾ ಆಗಿದೆಯಾ ಎಂದು ತಿಳಿಯುವುದು ಹೇಗೆ?
ಭಾನುವಾರ ಬಂತೆಂದರೆ ಮನೆಯಲ್ಲಿ ಮಟನ್ ಇದ್ದೇ ಇರಬೇಕು ಮಟನ್ ತಿನ್ನುವವರು ಬಹಳಷ್ಟು ಜನರಿದ್ದಾರೆ. ಇತ್ತೀಚಿಗೆ ಬರ್ಡ್ ಫ್ಲೋರ್ ಸುದ್ದಿಗಳ ಹಿನ್ನೆಲೆಯಲ್ಲಿ ಬಹಳಷ್ಟು ಜನರು ಮಟನ್ ಕಡೆಗೆ ಮುಖ ಮಾಡುತ್ತಿದ್ದಾರೆ. ಇದರಿಂದ ಮಟನ್ ಬೆಲೆಗಳು ಗಗನಕ್ಕೇರಿವೆ. ಆದರೆ ನಾವು ಕೊಂಡುಕೊಳ್ಳುತ್ತಿರುವ ಮಟನ್ ನಿಜವಾಗಿ ಒಳ್ಳೆಯದೇ ಅದು ಹೇಗೆಂದು ನೋಡೋಣ.
ಮಟನ್ ಬೆಲೆಗಳು ಗಗನಕ್ಕೇರಿದ ಕಾರಣ ಕೆಲವರು ಗುಣಮಟ್ಟವಿಲ್ಲದ ಮಾಂಸವನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ ಮುಖ್ಯವಾಗಿ ಕೊಳೆತ ಮಾಂಸವನ್ನೂ ಸಹ ಮಾರಾಟ ಮಾಡುತ್ತಿದ್ದಾರೆ. ಅನಾರೋಗ್ಯ ಕಾರಣಗಳಿಂದ ಮರಣ ಹೊಂದಿದ ಕುರಿಗಳನ್ನು ಮೇಕೆಗಳನ್ನು ಗುಟ್ಟಾಗಿ ಮಾರಾಟ ಮಾಡುತ್ತಿದ್ದಾರೆ.
ಇದರಿಂದ ಇಂಥ ಮಾಂಸವನ್ನು ತಿಂದವರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಅದಕ್ಕೆ ಮಾಂಸವನ್ನು ಕೊಂಡುಕೊಳ್ಳುವ ಮೊದಲು ಕೆಲವು ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕೆಂದು ತಜ್ಞರು ಸೂಚಿಸುತ್ತಾರೆ. ಮಟನ್ ಮಾರಾಟ ಮಾಡುವ ಅಂಗಡಿಗಳಲ್ಲಿ ವೆಟರಿನರಿ ಅಧಿಕಾರಿಗಳು ಮಾಂಸದ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಕೆಲವು ಪರೀಕ್ಷೆಗಳನ್ನು ಮಾಡುತ್ತಾರೆ ನಿಯಮಗಳ ಪ್ರಕಾರ ಸ್ಯಾನಿಟರಿ ಇನ್ಸ್ ಪೆಕ್ಟರ್ ಪಶು ಸಂಗೋಪನ ಇಲಾಖೆ ವೈದ್ಯರು ಪರಿಶೀಲಿಸಿದ ಮಾಂಸವನ್ನೇ ಮಾರಾಟ ಮಾಡಬೇಕು. ಆದರೆ ಬಹಳಷ್ಟು ಅಂಗಡಿಯವರು ಈ ನಿಯಮಗಳನ್ನು ಪಾಲಿಸುವುದಿಲ್ಲ ಅಧಿಕಾರಿಗಳು ಪರಿಶೀಲಿಸಿದ ಮಾಂಸದ ಮೇಲೆ ಒಂದು ಮುದ್ರೆ ಹಾಕುತ್ತಾರೆ ಇಂತಹ ಮಾಂಸವನ್ನು ಕೊಂಡುಕೊಳ್ಳುವುದು ಒಳ್ಳೆಯದು ಮಟನ್ ಕೊಂಡುಕೊಳ್ಳುವ ಮೊದಲು ಕೆಲವು ವಿಷಯಗಳನ್ನು ಖಂಡಿತವಾಗಿ ಪರಿಗಣನೆಗೆ ತೆಗೆದುಕೊಳ್ಳಬೇಕು ಇದರಲ್ಲಿ ಪ್ರಮುಖವಾದವು.

ಲೈಸೆನ್ಸ್ ಇರುವ ಅಂಗಡಿಗಳಲ್ಲಿ ಮಾತ್ರ ಮಾಂಸವನ್ನು ಕೊಂಡುಕೊಳ್ಳಬೇಕು ಇಂತಹ ಅಂಗಡಿಗಳಲ್ಲಿ ಮಾಂಸವನ್ನು ವೈದ್ಯರು ಪರೀಕ್ಷಿಸಿ ನಂತರವೇ ಮಾರಾಟ ಮಾಡುತ್ತಾರೆ.
ರಸ್ತೆಗಳ ಮೇಲೆ ಕೊಳಚೆ ಕಾಲುವೆಗಳ ಪಕ್ಕದಲ್ಲಿ ಮಾರಾಟ ಮಾಡುವ ಮಟನ್ ಅನ್ನು ಯಾವುದೇ ಕಾರಣಕ್ಕೂ ಕೊಂಡುಕೊಳ್ಳಬಾರದು.
ನೀವು ಕೊಂಡುಕೊಳ್ಳುತ್ತಿರುವ ಮಾಂಸ ಆರೋಗ್ಯವಾಗಿದೆಯೇ…? ಅಥವಾ ಕುಳಿತು ಹೋಗಿದೆ ಎಂಬ ವಿಷಯವನ್ನು ಪರಿಶೀಲಿಸಬೇಕು.
ಮಾಂಸದಂಗಡಿಗಳ ಮೇಲೆ ಅಧಿಕಾರಿಗಳು ಮುದ್ರೆ ಹಾಕಿದ್ದನ್ನು ಮಾತ್ರ ಕೊಂಡುಕೊಳ್ಳಬೇಕು.
ಮಾಂಸ ತುಂಬಾ ಗಟ್ಟಿಯಾಗಿದ್ದರೂ, ತಣ್ಣಗಿದ್ದರೂ ಅಂಥವುಗಳನ್ನು ಕೊಂಡುಕೊಳ್ಳಬಾರದು. ಇದರರ್ಥ ಆ ಮಾಂಸವನ್ನು ಫ್ರಿಜ್ ನಲ್ಲಿ ಶೇಖರಿಸಿ ಇಟ್ಟಿದ್ದಾರೆಂದು ಮಟನ್ ನಿಂದ ಕೆಟ್ಟು ವಾಸನೆ ಬರುತ್ತಿದ್ದರೆ ಕೊಂಡುಕೊಳ್ಳಬಾರದು. ತೂಕ ಹಾಕುವಾಗಲೂ ಸರಿಯಾಗಿದೆಯೇ ಇಲ್ಲವೋ ನೋಡಿಕೊಳ್ಳಬೇಕು.
ಕೆಲ ದಿನಗಳ ಹಿಂದೆ ಪ್ರಗತಿಪರ ಸಂಘಟನೆಗಳು ಕಂಪ್ಲಿಯ ಪಶು ವೈದ್ಯಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು ಆಗ ಮಾತ್ರ ಒಮ್ಮೆ ಮಾಂಸದ ಅಂಗಡಿಗಳಿಗೆ ಪರಿಶೀಲಿಸಿದ್ದು ಬಿಟ್ಟರೆ ಮತ್ತೆ ಇತ್ತ ಕಡೆ ಬಂದಿಲ್ಲ ಎಂಬುವುದು ಪ್ರಗತಿಪರ ಸಂಘಟನೆಗಳ ಅಂಬೋಣ.
ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಜನ ಸಾಮಾನ್ಯರ ಹಿತ ಕಾಪಾಡುವತ್ತ ಮನಸು ಮಾಡಲಿ ಎನ್ನುವುದೇ ನಮ್ಮ ಆಶಯ…

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ