ಬಳ್ಳಾರಿ / ಕಂಪ್ಲಿ : ಕಂಪ್ಲಿ ಹೊಸಪೇಟೆ ರಸ್ತೆ ಅಗಲೀಕರಣ ಇರುವುದರಿಂದ ವಿದ್ಯುತ್ ಮಾರ್ಗಗಳ ಸ್ಥಳಾಂತರ ಕಾಮಗಾರಿ ಕಾರ್ಯ ಇರುವುದರಿಂದ ದಿನಾಂಕ 25.03.2025 ಮಂಗಳವಾರದಂದು ಬೆಳಿಗ್ಗೆ 10:00 ಯಿಂದ ಸಾಯಂಕಾಲ 5:00 ವರೆಗೆ ನಂ. 10 ಮುದ್ದಾಪುರ, ಕಣಿವೆ ತಿಮ್ಲಾಪುರ, ರಾಮಸಾಗರ ಹಾಗೂ ಎಲ್ಲಮ್ಮ ಕ್ಯಾಂಪ್ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ ಹಾಗೂ ಐಪಿ ಸೆಟ್ ಮಾರ್ಗಗಳನ್ನು ಬೆಳಿಗ್ಗೆ ನಾಲ್ಕು ಗಂಟೆಯಿಂದ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಜೆಸ್ಕಾಂ ಕಂಪ್ಲಿ ಇವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ. ಆದ್ದರಿಂದ ವಿದ್ಯುತ್ ಗ್ರಾಹಕರು ಸಹಕರಿಸಬೇಕಾಗಿ ವಿನಂತಿಸಿದ್ದಾರೆ.
ವರದಿ : ಜಿಲಾನ್ ಸಾಬ್ ಬಡಿಗೇರ.
