ಬಳ್ಳಾರಿ / ಕಂಪ್ಲಿ : ಎಮ್ಮಿಗನೂರು ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮೂಹ ಸಂಪನ್ಮೂಲ ಕೇಂದ್ರದ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜ್ಞಾನ ದೀಪ ಕಾರ್ಯಕ್ರಮಡಿಯಲ್ಲಿ ಶಿಕ್ಷಕರನ್ನು ಒದಗಿಸಿದ ಸಂಸ್ಥೆಯ ಅಧಿಕಾರಿಗಳಿಗೆ ಅಭಿನಂದಿಸಲಾಯಿತು.
ಈ ವೇಳೆ ಮುಖ್ಯ ಗುರು ಬಿಎಸ್ ಸತ್ತೋಜಾತಪ್ಪ ಮಾತನಾಡಿ ಎಮ್ಮಿಗನೂರು ಕ್ಲಸ್ಟರ್ ನ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ಧರ್ಮಸ್ಥಳ ಸಂಸ್ಥೆಯಿಂದ ಗೌರವ ಶಿಕ್ಷಕರನ್ನು ಒದಗಿಸಿದ್ದು ಮಕ್ಕಳ ಪಾಠ ಪ್ರವಚನಕ್ಕೆ ತುಂಬಾ ಸಹಕಾರಿಯಾಯಿತು. ಇದೇ ರೀತಿಯ ಕಾರ್ಯಗಳು ಶಿಕ್ಷಣದ ದೃಷ್ಟಿಯಿಂದ ಮುಂದುವರೆಯಲಿ ಹಾಗೆ ಮುಂದಿನ ಶೈಕ್ಷಣಿಕ ವರ್ಷದಲ್ಲೂ ಕೂಡ ಹೆಚ್ಚುವರಿ ಆಗಿ ಶಿಕ್ಷಕರ ನೀಡುವುದರ ಮುಖಾಂತರ ಶಿಕ್ಷಣ ಕ್ಷೇತ್ರದ ಪ್ರಗತಿಗೆ ಸಹಕರಿಸಬೇಕು ಎಂದರು.
ನಂತರ ನಿರ್ದೇಶಕ ರೋಹಿತಾಕ್ಷ ಮಾತನಾಡಿ ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣ ಕ್ಷೇತ್ರ ಪಾತ್ರ ಪ್ರಮುಖವಾಗಿದ್ದು ಪ್ರತಿಯೊಬ್ಬ ವಿದ್ಯಾರ್ಥಿಯು ಉತ್ತಮ ಶಿಕ್ಷಣ ಪಡೆಯುವ ಮೂಲಕ ದೇಶಕ್ಕೆ ತಮ್ಮದಾಗಿರತಕ್ಕಂತಹ ಕೊಡುಗೆಯನ್ನು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಸಿಆರ್‌ಪಿ ಸ್ವಯಂ ಪ್ರಭ ಯೋಜನಾಧಿಕಾರಿ ಹಾಲಪ್ಪ ಸಮನ್ವಯ ಅಧಿಕಾರಿ ರೇಖಾ ಮೇಲ್ವಿಚಾರಕ ಮಂಜುನಾಥ್ ಶಿಕ್ಷಕರಾದ ಪಾಂಡುರಂಗ ಶಿವನಗೌಡ ರಾಮಪ್ಪ ಲೋಕೇಶ್ ಮಂಜುನಾಥ್ ಸೇವಾ ಪ್ರತಿನಿಧಿಗಳಾದ ಲಕ್ಷ್ಮಿ, ಶಾಹಿದ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
