ಬಳ್ಳಾರಿ / ಕಂಪ್ಲಿ : ಸಿದ್ಧಾಂತ ಶಿಖಾಮಣಿ’ ಯಂತಹ ಮಹಾನ್ ಗ್ರಂಥವನ್ನು ಕೊಡುಗೆಯಾಗಿ ನೀಡಿದ ಸಾಮರಸ್ಯ, ಸಹಬಾಳ್ವೆ, ಸೌಹಾರ್ದತೆಯ ಬದುಕನ್ನು ಬೋಧಿಸಿದ ಶ್ರೀಮದ್ ವೀರಶೈವ ಧರ್ಮ ಸಂಸ್ಥಾಪನಾಚಾರ್ಯ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ನಾಳೆ 24/ 03/ 2025 ಸೋಮವಾರ ಕಂಪ್ಲಿಯಲ್ಲಿ ಯುಗಮಾನೋತ್ಸವ ಅದ್ದೂರಿ ಸಮಾರಂಭ ಜರಗುವುದು. ನಾಳೆ ಮಧ್ಯಾಹ್ನ 3 ಗಂಟೆಯಿಂದ ಪಂಚಲೋಹದ ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯರ ಮೂರ್ತಿಯನ್ನು ಕಳಸ – ಕನ್ನಡಿ ಮತ್ತು ಸಕಲ ಮಂಗಲವಾದ್ಯಗಳೊಂದಿಗೆ ಸಣಾಪುರ ರಸ್ತೆಯ ಶ್ರೀ ಶಾರದಾ ಶಾಲೆಯ ಆವರಣದಿಂದ ಮೆರವಣಿಗೆ ಪ್ರಾರಂಭವಾಗಿ ಹಳೆಬಸ್ ನಿಲ್ದಾಣದಿಂದ ಡಾ|| ರಾಜಕುಮಾರ್ ಮುಖ್ಯ ರಸ್ತೆಯ ಮೂಲಕ ಸಂಗತ್ರಾಯ ಸಂಸ್ಕೃತ ಪಾಠ ಶಾಲೆಯಲ್ಲಿ ಮುಕ್ತಾಯಗೊಳಿಸಲಾಗುವುದು. ಸಂಜೆ 6 ರಿಂದ ಧರ್ಮಸಭೆ ಇರುತ್ತದೆ. ಸಂಗತ್ರಾಯ ಸಂಸ್ಕೃತ ಪಾಠ ಪಾಠಶಾಲೆ ಆವರಣದಲ್ಲಿ ಇರುತ್ತದೆ. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶ್ರೀ ಷ||ಬ್ರ||ವಾಮದೇವ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಹಂಪಿ ಸಾವಿರ ದೇವರ ಮಠ, ಎಮ್ಮಿಗನೂರು. ದಿವ್ಯ ಸಾನಿಧ್ಯವನ್ನು ಶ್ರೀ ಷ||ಬ್ರ||ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು, ಬೃಹನ್ಮಠ, ಹೆಬ್ಬಾಳ. ದಿವ್ಯ ಉಪಸ್ಥಿತಿ ಶ್ರೀ ಷ||ಬ್ರ|| ಕರಿಸಿದ್ದೇಶ್ವರ ವಿಶ್ವರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಕರಿಸಿದ್ದೇಶ್ವರ ಮಠ, ಬುಕ್ಕಸಾಗರ ಇವರುಗಳ ಸಾನಿಧ್ಯದಲ್ಲಿ ಕಾರ್ಯಕ್ರಮ ಜರಗುವುದು.
ವರದಿ : ಜಿಲಾನ್ ಸಾಬ್ ಬಡಿಗೇರ.
