ಸೇಡಂ/ಯಾನಗುಂದಿ: ಪರಮ ಪೂಜ್ಯ ಮಾತ ಮಾಣಿಕೇಶ್ವರೀ ಮಾತಾಜಿಯವರು ನಿರಾಹಾರಿಯಾಗಿ, ಮಹಾಯೋಗಿನಿಯಾಗಿ ಜನಿಸಿ ಭಕ್ತರಿಗೆ ದರ್ಶನವನ್ನು ನೀಡಿರುವ ಮಹಾನ್ ಜಗನ್ಮಾತೆ.
”ಯೋಗಿದರ್ಶನಂ ಪಾಪನಾಶನಂ” ಎಂಬಂತೆ ಪೂಜ್ಯ ಮಾತಾಜಿಯವರು ಕೋಟಿಲಿಂಗಗಳ ಪ್ರತಿಷ್ಠಾಪನೆ ಸಂಕಲ್ಪ ಕಾರ್ಯಕ್ರಮದ ಅಂಗವಾಗಿ 2013ನೇ ಸಾಲಿನಲ್ಲಿ ಯುಗಾದಿ ಹಬ್ಬದಂದು ಸಹಸ್ರ ಲಿಂಗವನ್ನು ಪ್ರತಿಷ್ಠಾಪನೆ ಮಾಡಿದರು. ತದ ನಂತರ ಅಮ್ಮನವರು ದಿನಾಂಕ 07-03-2020 ರಂದು ದೀರ್ಘಯೋಗ ಅನುಷ್ಠಾನ ಸಲುವಾಗಿ ಮಹಾ ಮಂದಿರದಲ್ಲಿರುವ ಶಿವಲಿಂಗದಲ್ಲಿ ಧ್ಯಾನದಲ್ಲಿ ಲೀನರಾದರು. ಅಮ್ಮನವರು ಯೋಗ ಅನುಷ್ಠಾನದಲ್ಲಿ ಇರುವುದರಿಂದ, ಆಶ್ರಮದ ಟ್ರಸ್ಟನ ಕಾರ್ಯದರ್ಶಿಗಳಾದ ಶ್ರೀ ಶಿವಯ್ಯಸ್ವಾಮಿಯವರ ನೇತೃತ್ವದಲ್ಲಿ ಅಮ್ಮನ ಆದೇಶದಂತೆ ಹಾಗೂ ಸಂಕಲ್ಪದಂತೆ ಕೋಟಿ ಲಿಂಗಗಳ ಪ್ರತಿಷ್ಠಾಪನೆಗೆ ಗುರುಮಠಕಲ್ ಹಾಗೂ ಸುತ್ತ ಮುತ್ತಲಿನ ಸಾವಿರಾರು ಭಕ್ತರೆಲ್ಲರೂ ಭಾಗವಹಿಸಲು ಕರೆ ನೀಡಿದ್ದಾರೆ.
ಮದ್ಯ-ಮಾಂಸಗಳನ್ನು ತ್ಯಜಿಸಬೇಕು, ಅನಿಷ್ಠ ಪದ್ಧತಿಗಳನ್ನು ಬಿಡುವುದರ ಜೊತೆಗೆ ಮೂಕ ಪ್ರಾಣಿಗಳನ್ನು ದರ್ಗಾ ಮತ್ತು ಗ್ರಾಮ ದೇವತೆಗಳ ಹೆಸರಿನಲ್ಲಿ ಬಲಿ ಕೊಡುವುದನ್ನು ನಿಲ್ಲಿಸಬೇಕೆಂದು ತಿಳಿಸುತ್ತಾ, ಈ ಭಾಗದ ಭಕ್ತರೆಲ್ಲರೂ ಪುಣ್ಯವಂತರು, ತಾವೆಲ್ಲರೂ ಕೋಟಿಲಿಂಗಗಳ ಪ್ರತಿಷ್ಠಾಪನೆಯ ಸಂಕಲ್ಪ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಭಕ್ತರು ಒಂದು ಲಿಂಗವನ್ನಾದರೂ ಪ್ರತಿಷ್ಠಾಪನೆ ಮಾಡಬೇಕು, ನಿಮಗೋಸ್ಕರ ಯಾನಗುಂದಿ ಆಶ್ರಮದ ಉತ್ತರ ದಿಕ್ಕಿನಲ್ಲಿ ಸ್ಥಳಾವಕಾಶ ಮಾಡಿಕೊಡಲಾಗಿದೆ ಇದಕ್ಕಾಗಿ ಒಂದು ಲಿಂಗಕ್ಕೆರೂಪಾಯಿ 5100 ಪಾವತಿಸಬೇಕು, ಇದು ಪುಣ್ಯದ ಕಾರ್ಯ, ತಾವೆಲ್ಲರೂ ಕೂಡಾ ಅಮ್ಮನವರ ಕೋಟಿಲಿಂಗಗಳ ಪ್ರತಿಷ್ಠಾನೆಯ ಸಂಕಲ್ಪ ಕಾರ್ಯದಲ್ಲಿ ಭಾಗಿಯಾಗಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ಎಂದು ಯಾನಗುಂದಿ ಆಶ್ರಮದ ಕಾರ್ಯದರ್ಶಿಗಳಾದ ಶ್ರೀ ಶಿವಯ್ಯ ಸ್ವಾಮಿ ತಿಳಿಸಿದರು.
ವರದಿ: ಜಗದೀಶ್ ಕುಮಾರ್
