ಹೌದು ಕರ್ನಾಟಕ ರಾಜ್ಯ ಸರ್ಕಾರದ
ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಯಿಂದ ರ ಪ್ರತಿ ಕುಟುಂಬದಲ್ಲಿ ಮಹಿಳೆಗೆ ಪ್ರತಿ ತಿಂಗಳು 2000 ರೂಪಾಯಿ ಹಣವನ್ನು ನೀಡುವ ಮಾತು
ಗ್ಯಾರಂಟಿಯಲ್ಲಿ ಗೃಹಲಕ್ಷ್ಮಿ ಹಣ ಎರಡು ಕಂತಿನ ಹಣ ಇದೇ ತಿಂಗಳು ಮಾರ್ಚ್ 31ರ ನಂತರ ಖಾತೆಗೆ ಜಮಾ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಗೃಹಲಕ್ಷ್ಮೀ ಯೋಜನೆ ಅದೆಷ್ಟೋ ಮಹಿಳೆಯರಿಗೆ ಆರ್ಥಿಕ ಸಹಕಾರ ಕೊಟ್ಟಿದೆ.
ಗೃಹ ಲಕ್ಷ್ಮೀ ಯೋಜನೆಯ ಸಾಕಷ್ಟು ಸಕ್ಸಸ್ ಸ್ಟೋರಿಗಳು ಗಮನ ಸೆಳೆಯುತ್ತಿದೆ.
- ಗೃಹಲಕ್ಷ್ಮಿ ಹಣದಿಂದ ಬೆಳಗಾವಿ ಜಿಲ್ಲೆ ರಾಯಬಾಗ್ ತಾಲೂಕಿನಲ್ಲಿ ಗ್ರಂಥಾಲಯ ನಿರ್ಮಿಸಿದ್ದ ಮಲ್ಲವ್ವ ಮೇಟಿ ರಾಜ್ಯದ ಗಮನ ಸೆಳೆದಿದ್ದರು.
- ಗೃಹಲಕ್ಷ್ಮಿ ಹಣದಲ್ಲಿ ಮಹಿಳೆಯರು ತಾವು ಕೂಡಿಟ್ಟ ಹಣದಲ್ಲಿ ವ್ಯಾಪಾರ ಶುರು ಮಾಡಿದ್ದಾರೆ.
- ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಿದ್ದಾರೆ,
- ಗದಗದಲ್ಲಿ ಅತ್ತೆ-ಸೊಸೆ ಸೇರಿಕೊಂಡು ಗೃಹ ಲಕ್ಷ್ಮೀ ಹಣದಲ್ಲಿ ಬೋರ್‌ವೆಲ್ ಕೊರೆಸಿದ್ದಾರೆ.
- ಗೋಕಾಕ್ ತಾಲೂಕಿನ ಕೌಜಲಗಿ ಗ್ರಾಮದ ಬಾಗವ್ವಾ ನೀಲಪ್ಪ ಸಣ್ಣಕ್ಕಿ ಎಂಬ ಮಹಿಳೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯ ಹಣ ಕೂಡಿಟ್ಟು ಇದೀಗ ತನ್ನ ಮಗ ರಮೇಶ ನೀಲಪ್ಪ ಸಣ್ಣಕ್ಕಿ ಎಂಬುವನಿಗೆ ಬೈಕ್ ಕೊಡಿಸಿದ್ದಾರೆ.
- ಗೃಹ ಲಕ್ಷ್ಮಿ ಹಣದಿಂದ ಕಣ್ಣಿನ ಶಸ್ತ್ರ ಚಿಕಿತ್ಸೆ ಹಾಗೂ ಸೊಸೆಗೆ ಫ್ಯಾನ್ಸಿ ಸ್ಟೋರ್.
ಹೀಗೆ ಗೃಹ ಲಕ್ಷ್ಮಿ ಹಣದಿಂದ ಅವರವರ ಉಳಿತಾಯಕ್ಕೆ ತಕ್ಕಂತೆ ಉಪಯೋಗ ಆಗಿದೆ.
ರಾಜ್ಯ ಸರ್ಕಾರವು ಅಂಗನವಾಡಿ ಕಾರ್ಯಕರ್ತರ ಗೌರವಧನವನ್ನು 1.000 ರೂಪಾಯಿಗಳು ಹಾಗೂ ಸಹಾಯಕಿಯರ ಗೌರವಧನವನ್ನು 750 ರೂಪಾಯಿಗಳನ್ನು ಹೆಚ್ಚಿಸಿ ಘೋಷಿಸಿದ್ದೇವೆ ಅದನ್ನು ಜೂನ್ ತಿಂಗಳ ಒಳಗಡೆ ಜಾರಿಗೆ ತರುತ್ತೇವೆ ಎಂದು ತಿಳಿಸಿದರು.
ವರದಿ : ಜಿಲಾನ್ ಸಾಬ್ ಬಡಿಗೇರ.
