ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿಯಲ್ಲಿ ಏಳನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಂಡಿದ್ದ ಶ್ರೀಮತಿ ಬಿ ಬಿ ದೇವದುರ್ಗ ಮುಖ್ಯ ಗುರುಮಾತೆಯರು ಇಂದಿನ ಮಕ್ಕಳು ನಾಳಿನ ಭವಿಷ್ಯದ ಉಜ್ವಲ ನಕ್ಷತ್ರಗಳಾಗಬೇಕು. ಕಲಿತ ಶಾಲೆಗೆ ಹೆತ್ತವರಿಗೆ ಹೆಸರು ತರುವ ವಿದ್ಯಾರ್ಥಿಗಳು ನಿವಾಗಬೇಕೆಂದು ಹಾಗೂ ನೀವು ಕಲಿತಿರುವ ಶಾಲೆಗೆ ಮುಂದೊಂದು ದಿನ ವಿಶೇಷ ಅತಿಥಿಯಾಗಿ ಆಗಮಿಸಬೇಕು ಈ ನಾಡು ದೇಶವೇ ಮೆಚ್ಚುವ ವಿದ್ಯಾರ್ಥಿಗಳು ನೀವಾಗಬೇಕೆಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳು ಆಗಿರುವ ಶ್ರೀ ಸಂಗಮೇಶ್ ಪಾಟೀಲ್ ರವರು ಪ್ರತಿ ವಿದ್ಯಾರ್ಥಿಯ ಪಾಲಕರು ಮಕ್ಕಳನ್ನು ಬಹಳ ಜಾಗೃತೆಯಿಂದ, ಮೊಬೈಲ್ ನಿಂದ ದೂರ ಇಟ್ಟು ಓದಿಸಬೇಕು ನಿಮ್ಮ ನಿಮ್ಮ ಮಕ್ಕಳ ಜವಾಬ್ದಾರಿ ಶಿಕ್ಷಕರ ಜೊತೆಗೆ ಹೆಚ್ಚಿಗೆ ನಿಮಗೆ ಇರುತ್ತದೆ ಎಂದು ಪಾಲಕರನ್ನು ಉದ್ದೇಶಿಸಿ ಮಾತನಾಡಿದರು.
ಇನ್ನೊರ್ವ ಮುಖ್ಯ ಅತಿಥಿಗಳು ಆಗಿರುವ ಶ್ರೀ ಸಿದ್ದು ಶೀಲವಂತರ್ ರವರು ಬೀಳ್ಕೊಡುಗೆ ಕ್ಷಣ ನಿಮಗೆ ಸ್ವಲ್ಪ ದುಃಖ ತಂದರೂ ಕೂಡ ಮುಂದಿನ ಭವಿಷ್ಯಕ್ಕಾಗಿ ನೀವು ಎಂಟನೇ ತರಗತಿಗೆ ಹೋಗಲೇಬೇಕು, ಏಳು ವರ್ಷದ ಅಮೂಲ್ಯವಾದ ಜ್ಞಾನವನ್ನು ಮುಂದಿನ ಪ್ರೌಢ ಹಂತದಲ್ಲಿ ಬಳಸಿಕೊಂಡು ನಿಮ್ಮ ಬದುಕನ್ನ ಉಜ್ವಲಗೊಳಿಸಿ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
2024 – 25ನೇ ಸಾಲಿನಲ್ಲಿ ನಮ್ಮ ಶಾಲೆ ನಮ್ಮ ಹೆಮ್ಮೆಯ ಅಡಿಯಲ್ಲಿ ಶಾಲೆಗಾಗಿ ತನುಮನಧನದಿಂದ ದೇಣಿಗೆ ನೀಡಿದ ಶಿಕ್ಷಣ ಪ್ರೇಮಿಗಳಾದ ಶ್ರೀ ಗೋದಲೆಪ್ಪ ಅತ್ತಾಲಟ್ಟಿ, ಶ್ರೀ ವಿ ಎನ್ ಪಾಟೀಲ್ ದೈಹಿಕ ಶಿಕ್ಷಕರು, ಶ್ರೀ ಎಮ್ ಟಿ ಗಚ್ಚಪ್ಪನವರ ಶಿಕ್ಷಕರು, ಶ್ರೀ ರಮೇಶ್ ದೇಗಿನಾಳ ಶಿಕ್ಷಕರು, ಶ್ರೀ ರಮೇಶ ಭದ್ರಶೆಟ್ಟಿ ಶಿಕ್ಷಣ ಪ್ರೇಮಿಗಳು, ಶ್ರೀ ಯಲ್ಲಪ್ಪ ನೀ ಡೋಣಿ ಹವಾಲ್ದಾರ ಹುನಗುಂದ, ಶ್ರೀಮತಿ ರತ್ನಕ್ಕ ಸುಬ್ಬನಗೌಡ ಪಾಟೀಲ, ಶ್ರೀ ನಿಂಗಪ್ಪ ಸಂಗಪ್ಪ ಹಡಪದ , ಶ್ರೀ ಪಾಪಣ್ಣ ನಾಗಪ್ಪ ಭದ್ರಶೆಟ್ಟಿ, ಶ್ರೀ ಡಿ ಬಿ ಹರದೊಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು, ಶ್ರೀ ಸಂತೋಷ ಮಾದರ್ ಇವರೆಲ್ಲರಿಗೂ ಸನ್ಮಾನ ಕಾರ್ಯಕ್ರಮ ನೆರವೇರಿತು.
ಶಾಲೆಯ ಎಲ್ಲಾ ಶಿಕ್ಷಕ ಬಳಗದವರಿಗೆ ಹಿರೇಮಳಗಾವಿ ಗ್ರಾಮದ ಶಿಕ್ಷಣ ಪ್ರೇಮಿಗಳು ಆಗಿರುವ ಶ್ರೀ ನಿಂಗಪ್ಪ ಸಂಗಪ್ಪ ಹಡಪದ ಇವರು ಎಲ್ಲಾ ಶಿಕ್ಷಕರ ಕಾರ್ಯ ಮೆಚ್ಚುಗೆ ವ್ಯಕ್ತಪಡಿಸಿ ಪ್ರೀತಿ ಗೌರವದಿಂದ ಸನ್ಮಾನ ಮಾಡಿದರು.
ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಶ್ರೀ ಎಸ್ ಬಿ ಕನಕನ್ನವರ, ಶ್ರೀ ಸಂಗನಬಸಪ್ಪ ಭದ್ರಶೆಟ್ಟಿ, ಶ್ರೀ ಮಹಾಂತೇಶ ಭಾವಿಕಟ್ಟಿ, ಶ್ರೀ ಅಶೋಕಗೌಡ ಪಾಟೀಲ, ಶ್ರೀ ಮಾನಿಂಗಪ್ಪ ಡೋಣಿ, ಶ್ರೀ ಕೆ ವಿ ಮಡಿವಾಳರ ಶಿಕ್ಷಕರು, ಶ್ರೀ ಪರಸು ಮೇಟಿ, ಶ್ರೀ ಬಸು ಮಾದರ್, ಶ್ರೀ ಗ್ಯಾನಪ್ಪ ಮೇಟಿ, ಶ್ರೀ ಸಂಗಮೇಶ ಹೊಲ್ದೂರು ಬಿ ಆರ್ ಪಿ, ಶ್ರೀ ಅಂದಾನಯ್ಯ ವಸ್ತ್ರದ ಶಿಕ್ಷಕರು ಹಾಗೂ ಊರಿನ ಗಣ್ಯಮಾನ್ಯರು ಶಿಕ್ಷಣ ಪ್ರೇಮಿಗಳು ಹಳೆಯ ವಿದ್ಯಾರ್ಥಿಗಳು ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಶಾಲೆಯ ಮುದ್ದು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು, ಶಿಕ್ಷಕರಾದ ಶ್ರೀ ಮುತ್ತು ವಡ್ಡರ ಇವರು ಕಾರ್ಯಕ್ರಮ ನಿರೂಪಿಸಿದರು. ಶ್ರೀ ಎಮ್ ಎಚ್ ಪೂಜಾರ್ ಗುರುಗಳು 2024-25 ನೇ ಸಾಲಿನ ಒಂದು ವರ್ಷದ ಸಂಪೂರ್ಣ ಶಾಲಾ ಚಟುವಟಿಕೆಗಳ ಕುರಿತು ಸವಿವರವಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಬಿ ಎಂ ಅಂಗಡಿ ಗುರುಗಳು ಸ್ವಾಗತಿಸಿದರು. ಶ್ರೀ ಹೆಚ್ ಬಿ ಮಾದರ್ ಶಿಕ್ಷಕರು ಹಾಗೂ ಶ್ರೀಮತಿ ವಿದ್ಯಾ ಕನಕನ್ನವರ ವಂದಿಸಿದರು.
- ಕರುನಾಡ ಕಂದ
