ಬೆಳಗಾವಿ: ಜಿಲ್ಲೆಯ ಅಥಣಿಯಲ್ಲಿ ಹೊಸದಾಗಿ ರಾಜು ಅಲಬಾಳ ಅವರ ಮಾಲೀಕತ್ವದ ಆರ್ ಕೆ ಮೋಟಾರ್ಸ ಮತ್ತು ಕೈನೆಟಿಕ ಗ್ರೀನ್ ಬೈಸಿಕಲ್ ಶೋ ರೋಮ್ ಉದ್ಘಾಟಿಸಿ ಮಾತನಾಡುತ್ತಾ ಇಂದು ವಾಯುಮಾಲಿನ್ಯದಿಂದ ಮನುಷ್ಯನ ಮೇಲೆ ಅಷ್ಟೇ ಅಲ್ಲ ಪರಿಸರದ ಮೇಲೆಯೂ ಪರಿಣಾಮ ಬೀರುತ್ತಿದೆ ಮನುಷ್ಯ ಆರೋಗ್ಯವಂತನಾಗಿ ಜೀವಿಸಬೇಕಿದ್ದಲ್ಲಿ ವ್ಯಾಯಾಮವೂ ಅತ್ಯಾವಶ್ಯವಾಗಿದೆ, ಜೊತೆಗೆ ನಾವುಗಳು ವಾಯು ಮಾಲಿನ್ಯದ ದುಷ್ಪರಿಣಾಮದಿಂದ ಓಜೋನ್ ಪದರವು ಕ್ಷೀಣಿಸುತ್ತಿದೆ ಮಾನವನ ಆರೋಗ್ಯವಷ್ಟೇ ಅಲ್ಲದೇ ಭೂಮಿಯ ಪರಿಸರ ವ್ಯವಸ್ಥೆಗಳು ಒಂದು ಅಪಾಯವಾಗಿ ಪರಿಣಮಿಸುತ್ತಿದೆ ಎಂಬುದನ್ನು ಬಹಳ ಹಿಂದೆಯೇ ಗುರುತಿಸಲಾಗಿದೆ ಆದ್ದರಿಂದ ಇಂತಹ ಪರಿಸರ ಪ್ರೇಮಿ ವಾಹನಗಳ ಬಳಕೆ ಅವಶ್ಯವಾಗಿದೆ ತಾಲೂಕಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾಗವಾಡ ಶಾಸಕರಾದ ರಾಜುಅಣ್ಣಾ ಕಾಗೆ ಮಾತನಾಡಿ ಇಂದು ಹೆಚ್ಚು ವಿದ್ಯಾಭ್ಯಾಸ ಮಾಡಿದ ಮಕ್ಕಳು ಹಳ್ಳಿಯನ್ನು ತೊರೆದು ಐಷಾರಾಮಿ ಜೀವನ ನಡೆಸಲು ಶಹರ ಪ್ರದೇಶ ಸೇರಿಕೊಳ್ಳುತ್ತಿದ್ದು ಇಲ್ಲಿ ತಂದೆ, ತಾಯಿಯರ ಬದುಕು ಕಷ್ಟಕರವಾದರೆ ಹಳ್ಳಿಯಲ್ಲಿಯೇ ರೈತಾಪಿ ವೃತ್ತಿ ಜೀವನ ನಡೆಸುತ್ತಿರುವ ಗಂಡು ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ ಇದು ಎಲ್ಲಾ ಸಮುದಾಯಗಳ ಯುವಕರು ಎದರಿಸುತ್ತಿರುವ ಗಂಭೀರ ಸಮಸ್ಯೆ, ಒಂದರ್ಥದಲ್ಲಿ ರಾಜ್ಯದ ತರುಣರ “ರಾಷ್ಟ್ರೀಯ ಬಿಕ್ಕಟ್ಟು” ಎನ್ನುವಂತಾಗಿದೆ. ಅದಕ್ಕಾಗಿಯೇ ಏನೋ ರಾಜು ಅಲಬಾಳ ಅವರು ತಮ್ಮ ಮಗನಿಗಾಗಿ ಸ್ವಯಂ ಉದ್ಯೋಗ ಆಯ್ಕೆ ಮಾಡಕೊಂಡಿರುವ ಹಾಗೇ ಕಾಣಿಸುತ್ತಿದೆ. ಇಂದು ಸೂಕ್ಷ್ಮವಾಗಿ ಗಮನಿಸಬೇಕು ಗ್ರಾಮಗಳು ವೃದ್ಧಾಶ್ರಮಗಳಾಗುತ್ತಿವೆ, ಶಿಕ್ಷಣ ಪಡೆಯುವವರ ಸಂಖ್ಯೆ ಹೆಚ್ಚಿದಂತೆಲ್ಲಾ ಹಳ್ಳಿಗಳು ಅನಾದರಕ್ಕೆ ಒಳಗಾದವು, ಕೃಷಿ ಮೂಲೆಗುಂಪಾಯಿತು, ಹೈನುಗಾರಿಕೆ ಹಳ್ಳಹಿಡಿಯಿತು, ಹೀಗಾಗಿ ಇದಕ್ಕೆಲ್ಲಾ ಹೆಣ್ಣು ಹೆತ್ತವರ ಸ್ವಲ್ಪ ಪಾಲು ಇದೆ ಕೌಟುಂಬಿಕ ಸಂರಚನೆಯಲ್ಲಿ ವ್ಯತ್ಯಾಸ ಆಗಿರುವುದು ಪಾಲಕರ ಮನೋಭಾವಕ್ಕೆ ಕಾರಣವೂ ಇರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ವೇಳೆ ಸೈಬಣ್ಣ ಕಮತಗಿ, ಶೇಖರಗೌಡ ನೇಮಗೌಡ, ವಿನಾಯಕ ಬಾಗಡಿ, ವಿಜು ಪಾಟೀಲ, ಅಪ್ಪಾಸಾಬ ಅಲಿಬಾದಿ, ಸ್ವಾಗತ ತೋರಿ, ಆಕಾಶ ಅಲಬಾಳ, ಸತೀಶ ಪಾಟೀಲ, ಧರೇಪ್ಪ ನಂದೇಶ್ವರ ಸೇರಿದಂತೆ ಅನೇಕರಿದ್ದರು. ವಿಜಯ ಹುದ್ದಾರ ಕಾರ್ಯಕ್ರಮ ನಿರ್ವಹಣೆ ಮಾಡಿದರು.
- ಕರುನಾಡ ಕಂದ
