
ಯಾದಗಿರಿ: ಇಂದು ಗುರುಮಠಕಲ್ ಪುರಸಭೆ ಕಾರ್ಯಾಲಯದ ಸಾಮಾನ್ಯ ಸಭೆ ಮತ್ತು 2025-26 ನೇ ಸಾಲಿನ ಆಯವ್ಯಯದ (ಬಜೆಟ್) ಮಂಜೂರಾತಿ ಸಭೆಯನ್ನು
ಮಾನ್ಯ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಆರ್ ಪಾಟೀಲ್ ರವರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು , ಬೆಳಿಗ್ಗೆ 10.30 ಕ್ಕೆ ಪ್ರಾರಂಭವಾದ ಸಾಮಾನ್ಯ ಸಭೆ ಮತ್ತು ಬಜೆಟ್ ಮಂಡನೆಯು ಗುರುಮಠಕಲ್ ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ಭಾರತಿ ದಂಡೊತಿ ಸಮ್ಮುಖದಲ್ಲಿ ಕೆಳಕಂಡ ಪ್ರಮುಖ ವಿಷಯಗಳು ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಾಯಿತು.

- ಆಸ್ತಿ ತೆರಿಗೆ ದರ ಪರಿಷ್ಕರಣೆ ಶೇಕಡ 3℅ ಹೆಚ್ಚಳ.
- ಆದಾಯ ಮತ್ತು ಖರ್ಚಿನ ವಿವರ ನೀಡಿ ಅನಧಿಕೃತ ಪುರಸಭೆ ಪರವಾನಿಗೆ ಇಲ್ಲದ ಸಂಸ್ಥೆಗಳ ವಿರುದ್ದ ಕ್ರಮ ಕೈಗೊಳ್ಳುವ ಕುರಿತು, ಪುರಸಭೆ ಜಾಹೀರಾತು ಫಲಕ 3 ರೂಪಾಯಿ/ಚದರ ಫೂಟ್ ಹಾಗೂ ಜಾಹೀರಾತಿಗಾಗಿ ಬಳಸುವ ನೆಲಬಾಡಿಗೆ ವಾರ್ಷಿಕವಾಗಿ 30,000 ರೂಪಾಯಿ ನಿಗದಿ ಮಾಡಲಾಗಿದೆ, ವರ್ಗಾವಣೆ ಶುಲ್ಕ ಯಥಾಸ್ಥಿತಿ ಕಾಯ್ದುಕೊಳ್ಳಲು ತೀರ್ಮಾನಿಸಲಾಯಿತು. ಅಂಬೇಡ್ಕರ್ ಕಲ್ಯಾಣ ಮಂಟಪ ಮೂಲಭೂತ ಸೌಕರ್ಯ ಕಲ್ಪಿಸಿ ಬಾಡಿಗೆ 5,000 ರೂಪಾಯಿ ನಿಗದಿ ಮಾಡಲಾಯಿತು.
ಬಸ್ ನಿಲ್ದಾಣ ದಿಂದ khdc ಕಾಲೋನಿ ವರೆಗಿನ ಮಾಂಸ ಅಂಗಡಿಗಳ ತೆರವುಗೊಳಿಸುವ ಕುರಿತು ಚರ್ಚೆ ಮಾಡಲಾಯಿತು. - ನೀರು ಶುದ್ದೀಕರಣ ಘಟಕಗಳ ಕುರಿತು ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಹೊಸದಾಗಿ ಸೃಜಿಸಿರುವ ವಸತಿ ವಿನ್ಯಾಸಗಳ ಅನುಮೋದನೆಯ ಕುರಿತು ಚರ್ಚೆ ಮಾಡಲಾಯಿತು UGD ಕುರಿತು ಸಾಕಷ್ಟು ಸಮಸ್ಯ ಗಳ ಚರ್ಚಿಸಲಾಯಿತು. ರಾಜಕುಮಾರ್ ಹಬೀಬ್ J.E ಶೀಘ್ರದಲ್ಲಿ ಅಮೃತ 2.0 ಹಾಗೂ UGD ಕುರಿತು ಪುರಸಭೆ ಅಧಿಕಾರಿಗಳೊಂದಿಗೆ ವಿಶೇಷ ಸಭೆ ಕರೆಯಲು ಪುರಸಭೆ ಸದಸ್ಯರ ತೀರ್ಮಾನ.
ಇದೇ ವಾರದಲ್ಲಿ ಗುರುಮಠಕಲ್ ನಗರದ ಬಸ್ ನಿಲ್ದಾಣದಿಂದ ನಾರಾಯಣಪೇಟ್ ಕ್ರಾಸ್ ವರೆಗಿನ ರಸ್ತೆ ನಿರ್ಮಾಣ ಕಾರ್ಯಕ್ರಮ ಪ್ರಾರಂಭ ಮಾಡುವದಾಗಿ ಲ್ಯಾಂಡ್ ಆರ್ಮಿ ಯಾದಗಿರಿ Asst JE ತಿಳಿಸಿದರು. - ಪುರಸಭೆ ಆಯಾ ವ್ಯಯ ವಿವರಿಸಲಾಯಿತು.
ಸಭೆಯಲ್ಲಿ ಪುರಸಭೆ ಚುನಾಯಿತ ಸದಸ್ಯರು, ನಾಮ ನಿರ್ದೇಶನ ಸದಸ್ಯರು, ಪುರಸಭೆ ಸಿಬ್ಬಂದಿ, ವಿವಿಧ ಇಲಾಖೆ ಅಧಿಕಾರಿಗಳು, ಹಾಜರಿದ್ದರು.
ವರದಿ ಜಗದೀಶ್ ಕುಮಾರ
