ಬಳ್ಳಾರಿ/ ಕಂಪ್ಲಿ : ಬೆಂಗಳೂರು ಕನ್ನಡ ಫಿಲಂ ಚೇಂಬರ್ ವತಿಯಿಂದ ನೀಡುವ ಪ್ರತಿಷ್ಠಿತ 2025ರ ವರ ನಟ ಡಾ. ರಾಜ್‌ಕುಮಾರ್ ಅವರ ಸ್ಪೂರ್ತಿದಾಯಕವಾದ ಕಲಾಸೇವರತ್ನ ಪ್ರಶಸ್ತಿಯನ್ನು ಕಂಪ್ಲಿ ತಾಲೂಕಿನ ಮೆಟ್ರಿ ಕೆ. ಶಂಕರ ಇವರು ಭಾನುವಾರ ಸ್ವೀಕರಿಸಿದರು. ಬೆಂಗಳೂರಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಫಿಲಂ ಚೇಂಬರ್ ಅಧ್ಯಕ್ಷ ಎಂಎಸ್ ರವೀಂದ್ರ, ಉಪಾಧ್ಯಕ್ಷ ಡಾಕ್ಟರ್ ಎನ್ ಖಜಾಂಚಿ ಡಾ|| ಎನ್. ಪ್ರಹ್ಲಾದ್, ಪ್ರಧಾನ ಕಾರ್ಯದರ್ಶಿ ಎಚ್. ನರಸಿಂಹಯ್ಯ, ಖಜಾಂಚಿ ರಾಘವ್ ದಾನಿ, ಕಾರ್ಯಕಾರಿ ಸಮಿತಿಯ ವಿಜಯ್ ನಾಗಲಕ್ಷ್ಮಿ , ಇವರು ಮೆಟ್ರಿ ಶಂಕರ ಇವರಿಗೆ ಕಲಾಸೇವಾರತ್ನ ಪ್ರಶಸ್ತಿ ಪುರಸ್ಕಾರದೊಂದಿಗೆ ಗೌರವಿಸಿದರು. ಕಲಾಸೇವೆಯಾದ ರಂಗಭೂಮಿಯಲ್ಲಿ ನಟ, ನಿರ್ದೇಶಕ, ತಂತ್ರಜ್ಞಾನ ಹಾಗೂ ನಾಟಕನಾಗಿ ಐವತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿ 800ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. ನಾಲ್ಕು ಧಾರವಾಹಿಗಳಲ್ಲಿ ಮೂರು ಸಿನಿಮಾಗಳಲ್ಲಿ ಎಂಟು ಕಿರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಹಳ್ಳಿಯ ಕೆ. ಶಂಕರ ಇವರು ದೆಹಲಿಯನ್ನು ದಾಟಿ ದುಬೈನಲ್ಲಿ ನಡೆದಂತ ಅಂತರಾಷ್ಟ್ರೀಯ ಕನ್ನಡ ಸಮ್ಮೇಳನ ಮತ್ತು ಜಾನಪದ ಉತ್ಸವಕ್ಕೆ ಆಯ್ಕೆಯಾಗಿ ಮಂಟೇಸ್ವಾಮಿ ಕಥಾ ಪ್ರಸಂಗ ನಾಟಕದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ.
ವರದಿ : ಜಿಲಾನ್ ಸಾಬ್ ಬಡಿಗೇರ.
