ಬಳ್ಳಾರಿ / ಕಂಪ್ಲಿ : ಸಿದ್ಧಾಂತ ಶಿಖಾಮಣಿ’ ಯಂತಹ ಮಹಾನ್ ಗ್ರಂಥವನ್ನು ಕೊಡುಗೆಯಾಗಿ ನೀಡಿದ ಸಾಮರಸ್ಯ, ಸಹಬಾಳ್ವೆ, ಸೌಹಾರ್ದತೆಯ ಬದುಕನ್ನು ಬೋಧಿಸಿದ ಶ್ರೀಮದ್ ವೀರಶೈವ ಧರ್ಮ ಸಂಸ್ಥಾಪನಾಚಾರ್ಯ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿಯ ಅಂಗವಾಗಿ ಇಂದು (ಸೋಮವಾರ) ಕಂಪ್ಲಿಯಲ್ಲಿ ಪಂಚಲೋಹದ ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯರ ಮೂರ್ತಿಯನ್ನು ಕಳಸ – ಕನ್ನಡಿ ಮತ್ತು ಸಕಲ ಮಂಗಲವಾದ್ಯಗಳೊಂದಿಗೆ ಸಣಾಪುರ ರಸ್ತೆಯ ಶ್ರೀ ಶಾರದಾ ಶಾಲೆಯ ಆವರಣದಿಂದ ಮೆರವಣಿಗೆ ಪ್ರಾರಂಭವಾಗಿ ಹಳೆಬಸ್ ನಿಲ್ದಾಣದಿಂದ ಡಾ|| ರಾಜಕುಮಾರ್ ಮುಖ್ಯ ರಸ್ತೆಯ ಮೂಲಕ ಸಂಗತ್ರಾಯ ಸಂಸ್ಕೃತ ಪಾಠ ಶಾಲೆಯಲ್ಲಿ ಮುಕ್ತಾಯ ಗೊಂಡಿತು. ಈ ಮೆರವಣಿಗೆಯಲ್ಲಿ
ವೀರಶೈವ ಸಮಾಜದ ಎಲ್ಲಾ ಸದ್ಭಕ್ತರು ಪಾಲ್ಗೊಂಡು ಜಗದ್ಗುರುಗಳ ಕೃಪಾಶೀರ್ವಾದಕ್ಕೆ ಪಾತ್ರರಾದರು.
ವರದಿ : ಜಿಲಾನ್ ಸಾಬ್ ಬಡಿಗೇರ.
