ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ತಾಳಿಕೋಟೆ ಪಟ್ಟಣ ಶಿಕ್ಷಣ ಕಾಶಿ: ಸಾಹಿತಿ ಹಂಚಲಿ

ವಿಜಯಪುರ / ತಾಳಿಕೋಟೆ: ಹುಟ್ಟುವ ಪ್ರತಿಯೊಂದು ಮಗುವಿನಲ್ಲೂ ಪ್ರಕೃತಿದತ್ತವಾಗಿ ಒಂದಲ್ಲ ಒಂದು ಪ್ರತಿಭೆ ಇರುತ್ತದೆ ಅದನ್ನು ಗುರುತಿಸಿ ಬೆಳೆಸುವಲ್ಲಿ ತಾಯಂದಿರ ಪಾತ್ರ ಪ್ರಮುಖವಾಗಿದೆ, ಪ್ರತಿಯೊಬ್ಬ ಸಾಧಕನ ಸಾಧನೆಯ ಹಿಂದೆ ಅವಳ ತಾಯಿಯ ಪಾತ್ರ ಇದೆ ಎಂದು‌ ಖ್ಯಾತ ವಾಗ್ಮಿ, ಸಾಹಿತಿ ಅಶೋಕ ಹಂಚಲಿ ಹೇಳಿದರು. ಭಾನುವಾರ ಪಟ್ಟಣದ ಮಿಣಜಗಿ ಕ್ರಾಸ್ ನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕೌಟಿಲ್ಯ ಅಕಾಡೆಮಿ ಕಟ್ಟಡ ಉದ್ಘಾಟನೆ ಹಾಗೂ ಜೀನಿಯಸ್ ಸ್ಟೂಡೆಂಟ್ ಅವಾರ್ಡ್ ಪರೀಕ್ಷೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ವಿಶೇಷ ಉಪಾನ್ಯಾಸಕರಾಗಿ ಆಗಮಿಸಿ ಮಾತನಾಡಿ ತಾಳಿಕೋಟೆ ಪಟ್ಟಣ ಇವತ್ತು ಶಿಕ್ಷಣ ಕಾಶಿ ಎಂದಿನಿಸಿಕೊಳ್ಳುತ್ತಿದೆ, ಇಲ್ಲಿಯ ಶಿಕ್ಷಣ ಪ್ರೇಮಿಗಳು ಸಾಕಷ್ಟು ಸಂಸ್ಥೆಗಳನ್ನು ಕಟ್ಟಿ ಅತ್ಯುತ್ತಮವಾಗಿ ನಡೆಸುತ್ತಿದ್ದಾರೆ. ಇದೀಗ ನಮ್ಮ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸೂಕ್ತ ತರಬೇತಿ ಕೇಂದ್ರದ ಅಗತ್ಯವಿತ್ತು ಅದನ್ನು ಸಹ ನಮ್ಮ ಸಜ್ಜನ ಬಳಗದ ಮಿತ್ರರು ಮಾಡಿರುವುದು ಶ್ಲಾಘನೀಯವಾದ ಕಾರ್ಯ ಇದಕ್ಕೆ ನಿಮ್ಮೆಲ್ಲರ ಸಹಕಾರ ಇರಲಿ ಎಂದರು. ಮುಸ್ಲಿಮ್ ಧಾರ್ಮಿಕ ಮುಖಂಡ ಸೈಯದ್ ಶಕೀಲ ಅಹ್ಮದ್ ಖಾಜಿ, ಪುರಾಣಿಕ ಮಹಾದೇವಯ್ಯ ಶಾಸ್ತ್ರಿ ಹಾಗೂ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕಾಶಿನಾಥ್ ಸಜ್ಜನ ಮಾತನಾಡಿ ಶಿಕ್ಷಣ ಸಂಸ್ಥೆಗಳು ವ್ಯಾಪಾರಿ ಕೇಂದ್ರಗಳಾಗದೆ ಜ್ಞಾನ ದಾಸೋಹದ ಕೇಂದ್ರಗಳಾಗಲಿ ಈ ನೂತನ ಸಂಸ್ಥೆ ಉತ್ತರೋತ್ತರವಾಗಿ ಬೆಳೆಯಲಿ ಎಂದರು. ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಪೂಜ್ಯ ಶ್ರೀ ಶಿವಯೋಗಿ ಶಿವಾಚಾರ್ಯರು ನಮ್ಮ ಬದುಕು ಸಾಧನೆ ಬದುಕಾಗಬೇಕು, ಭೂಮಿಯ ಮೇಲೆ ಬಹಳಷ್ಟು ಜನ ಬಂದು ಹೋಗುತ್ತಾರೆ ಆದರೆ ಸಾಧನೆ ಕೆಲವರು ಮಾತ್ರ ಮಾಡುತ್ತಾರೆ ಅಂಥವರ ಸಾಲಿನಲ್ಲಿ ನಾವು ನಿಲ್ಲುವಂತವರಾಗಬೇಕು. ಸಜ್ಜನ ಬಂಧುಗಳ ಕಾರ್ಯ ಶ್ಲಾಘನೀಯವಾಗಿದೆ ಇದಕ್ಕೆ ನಿಮ್ಮೆಲ್ಲರ ಸಹಕಾರ ಇರಲಿ ಎಂದರು. ಕಾರ್ಯಕ್ರಮಕ್ಕೂ ಮುನ್ನ ನಾಲ್ಕನೇ ಹಾಗೂ ಐದನೇ ತರಗತಿ ವಿದ್ಯಾರ್ಥಿಗಳಿಗಾಗಿ ನಡೆಸಿದ ಜೀನಿಯಸ್ ಅವಾರ್ಡ್ ಪರೀಕ್ಷೆಯಲ್ಲಿ 300 ವಿದ್ಯಾರ್ಥಿಗಳು ಭಾಗವಹಿಸಿ ಇದರಲ್ಲಿ 28 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು, ಪ್ರಥಮ ಸ್ಥಾನದಿಂದ ೫ ನೇ ಸ್ಥಾನ ಪಡೆದುಕೊಂಡ ವಿದ್ಯಾರ್ಥಿಗಳಿಗೆ ರೂ.50 ಸಾವಿರ ಸ್ಕಾಲರ್ಶಿಪ್, 6 ರಿಂದ 10 ನೇ ಸ್ಥಾನ ಪಡೆದುಕೊಂಡ ವಿದ್ಯಾರ್ಥಿಗಳಿಗೆ ರೂ. 30 ಸಾವಿರ ಹಾಗೂ 11 ರಿಂದ 20 ನೇ ಸ್ಥಾನದವರೆಗೆ ರೂ.20 ಸಾವಿರ ಸ್ಕಾಲರ್ಶಿಪ್ ನೀಡಿ ಗೌರವಿಸಲಾಯಿತು. ಅಕಾಡೆಮಿ ಕಾರ್ಯದರ್ಶಿ ಮಹಾಂತೇಶ ಮುರಾಳ ನಿರೂಪಿಸಿದರು. ಕೌಟಿಲ್ಯ ಅಕಾಡೆಮಿ ನೂತನ ಕಟ್ಟಡವನ್ನು ಗುಂಡಕನಾಳ ಬ್ರಹನ್ಮಠದ ಪರಮ ಪೂಜ್ಯ ಶ್ರೀ ಗುರುಲಿಂಗ ಶಿವಾಚಾರ್ಯರು ಉದ್ಘಾಟಿಸಿದರು. ವೇದಿಕೆ ಸಮಾರಂಭವನ್ನು ಮಿಣಜಗಿ ಗ್ರಾ.ಪಂ ಅಧ್ಯಕ್ಷೆ ಭಾಗ್ಯಶ್ರೀ ಮಹಾಂತೇಶ ಬಿರಾದಾರ ಉದ್ಘಾಟಿಸಿದರು. ಕೌಟಿಲ್ಯ ಅಕಾಡೆಮಿ ಗೌರವ ಅಧ್ಯಕ್ಷ ರಾಮನಗೌಡ ಬಾಗೇವಾಡಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಧರ್ಮಣ್ಣ ಪ್ರಸ್ತಾವಿಕವಾಗಿ ಮಾತನಾಡಿದರು.ಈ ವೇಳೆ ಅಕಾಡೆಮಿ ಅಧ್ಯಕ್ಷ ರಾಜು ಸಜ್ಜನ, ಆಡಳಿತಾಧಿಕಾರಿ ನಾನಾಗೌಡ ಕುಳಗೇರಿ, ಸಂಯೋಜಕ ವೀರೇಶ ಬಳಿಗಾರ, ಪ್ರಭುಗೌಡ ಮದರಕಲ್ಲ, ದತ್ತು ಹೆಬಸೂರ, ಮುರಿಗೆಪ್ಪ ಸರಸಟ್ಟಿ, ಕಾಶಿನಾಥ ಮುರಾಳ, ಇಬ್ರಾಹಿಂ ಮನ್ಸೂರ, ಪ್ರಕಾಶ ಹಜೇರಿ, ಮುತ್ತಪ್ಪ ಚಮಲಾಪೂರ, ಮಲ್ಲಪ್ಪ ಕಟ್ಟಿಮನಿ, ಗುರುಲಿಂಗಪ್ಪ ಸಜ್ಜನ, ತಿಪ್ಪಣ್ಣ ಸಜ್ಜನ,ಆರ್.ಎಲ್. ಕೊಪ್ಪದ, ಪರಶುರಾಮ ತಂಗಡಗಿ, ಎಸ್.ಎಸ್. ಕಂತಲಗಾಂವಿ, ಆನಂದ ಮದರಕಲ್, ಘನಶ್ಯಾಮ ಚೌವಾಣ, ವೆಂಕನಗೌಡ ಅರಿಕೇರಿ, ಶಿವನಗೌಡ ಪಾಟೀಲ ಇದ್ದರು. ಶ್ರೀ ಖಾಸ್ಗತೇಶ್ವರ ಸಂಗೀತ ಶಾಲೆ ವಿದ್ಯಾರ್ಥಿಗಳು ಸಂಗೀತ ಸೇವೆ ಸಲ್ಲಿಸಿದರು.

ವರದಿಗಾರರು : ನಜೀರ್ ಅಹ್ಮದ್ ಚೋರಗಸ್ತಿ, ತಾಳಿಕೋಟೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ