ಬೆಳಗಾವಿ: ಬೈಲಹೊಂಗಲ ತಾಲೂಕ ಪಂಚಾಯತ ಸಭಾಂಗಣದಲ್ಲಿ ಇಂದು ಬೈಲಹೊಂಗಲ ಮತಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯತ ಅಧ್ಯಕ್ಷರು ಹಾಗೂ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಿಗೆ, ಸನ್ಮಾನ್ಯ ಶ್ರೀ ಮಹಾಂತೇಶ ಎಸ್ ಕೌಜಲಗಿ ಮಾನ್ಯ ಶಾಸಕರು ಬೈಲಹೊಂಗಲ ರವರ ಅಧ್ಯಕ್ಷತೆಯಲ್ಲಿ “ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮವಹಿಸುವ ಸಲುವಾಗಿ ಸಭೆಯನ್ನು” ಆಯೋಜಿಸಿದ್ದರು.
ಸದರಿ ಸಭೆಯನ್ನು ಉದ್ದೇಶಿಸಿ ಶಾಸಕರು ಮಾತನಾಡಿ ಬೈಲಹೊಂಗಲ ಮತಕ್ಷೇತ್ರ ವ್ಯಾಪ್ತಿಯ ಗ್ರಾಮ ಹಾಗೂ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಯಾವುದೇ ತರಹದ ಕುಡಿಯುವ ನೀರಿನ ಸಮಸ್ಯೆಗಳು ಆಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಬಾವಿ, ಬೋರ್ ವೆಲ್ ಗಳ ಸ್ಥಳ ಪರಿಶೀಲನೆ ಮಾಡಿ ವಸ್ತು ಸ್ಥಿತಿಯನ್ನು ತಿಳಿದುಕೊಂಡು ವರದಿ ಮಾಡುವುದು ಎಂದು ಕರೆ ನೀಡಿದರು.
ಗ್ರಾಮೀಣ ಭಾಗದಲ್ಲಿ ಜಾತ್ರೆಗಳು ಹಾಗೂ ಉತ್ಸವಗಳು ಜರುಗುತ್ತಿದ್ದು ಆದ್ದರಿಂದ ಎಲ್ಲಾ ಗ್ರಾಮಗಳ ಬೋರವೆಲ್ ಗಳನ್ನು ರಿಪೇರಿ ಮಾಡಿ ಮತ್ತು ಕುಡಿಯುವ ನೀರಿನ ಟ್ಯಾಂಕ್ ಹಾಗೂ ಟ್ಯಾಂಕರ್ ಗಳನ್ನು ಸ್ವಚ್ಛಗೊಳಿಸಿ ಕುಡಿಯುವ ನೀರನ್ನು ಪರೀಕ್ಷೆ ಮಾಡಿಸಿ ಕುಡಿಯಲು ಗುಣಮಟ್ಟವನ್ನು ತಪಾಸಣೆಗಳನ್ನು ಕಡ್ಡಾಯವಾಗಿ ಮಾಡಬೇಕು ಎಂದು ತಿಳಿಸಿದರು.
ಗ್ರಾಮಗಳಿಗೆ ತಾಲೂಕ ಮಟ್ಟದ ಅಧಿಕಾರಿಗಳು ಭೇಟಿ ನೀಡಿರುವ ಸಂದರ್ಭದಲ್ಲಿ ಅನಧಿಕೃತ ಕುಡಿಯುವ ನೀರಿನ ನಲ್ಲಿಗಳನ್ನು ತೆರವುಗೊಳಿಸುವಂತೆ ಕ್ರಮ ಕೈಗೊಳ್ಳುವುದು ಮತ್ತು ಗ್ರಾಮಗಳಲ್ಲಿ ನೀರು ಅತಿಯಾಗಿ ಪೋಲಾಗದಂತೆ ಕ್ರಮ ವಹಿಸುವುದು, ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಹಿಸುವುದು ಎಲ್ಲಾ ಅಧಿಕಾರಿಗಳು ಟೀಂ ವರ್ಕ್ ಮೂಲಕ ಕಾರ್ಯ ಮಾಡುವಂತೆ ಶಾಸಕ ಕೌಜಲಗಿ ನಿರ್ದೇಶನ ನೀಡಿದರು. ಇದೇ ಸಂದರ್ಭದಲ್ಲಿ ಕಿರಣ ಘೋರ್ಪಡೆ, ಕಾರ್ಯನಿರ್ವಾಹಕ ಅಧಿಕಾರಿಗಳು ತಾ.ಪಂ. ಬೈಲಹೊಂಗಲ ಆನಂದ ಬಡಕುಂದ್ರಿ ಕಾರ್ಯನಿರ್ವಾಹಕ ಅಧಿಕಾರಿಗಳು ತಾ.ಪಂ ಸವದತ್ತಿ, ಹಣಮಂತ ಶಿರಹಟ್ಟಿ ತಹಶಿಲ್ದಾರರು ಬೈಲಹೊಂಗಲ, ಮಲ್ಲಿಕಾರ್ಜುನ ಹೆಗ್ಗನ್ನವರ ತಹಶೀಲ್ದಾರರು ಸವದತ್ತಿ, ತಾಲೂಕ ಮಟ್ಟದ ಅಧಿಕಾರಿಗಳು ಮತ್ತು ತಾ.ಪಂ. ಅಧಿಕಾರಿಗಳು ಹಾಜರಿದ್ದು ತದನಂತರ ಬೈಲಹೊಂಗಲ ಮತಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತ ಅಧ್ಯಕ್ಷರು ಮತ್ತು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.
ಈ ಸಭೆಯನ್ನು ನಿರೂಪಣೆಯನ್ನು ಶ್ರೀ ಮಹಾಂತೇಶ ಭಜಂತ್ರಿ ನಡೆಸಿಕೊಟ್ಟರು.
ವರದಿ ಭೀಮಸೇನ ಕಮ್ಮಾರ
