ಚಾಮರಾಜನಗರ :ಗುಂಡ್ಲುಪೇಟೆ ತಾಲ್ಲೂಕಿನ ಬರಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ RBI ಮತ್ತು ಆರ್ಥಿಕ ಸಾಕ್ಷರತಾ ಕೇಂದ್ರ ಯಳಂದೂರು ಧಾನ್ ಫೌಂಡೇಶನ ವತಿಯಿಂದ ನ್ಯಾಷನಲ್ ಸೆಂಟರ್ ಫಾರ್ ಫೈನಾನ್ಸಿಯಲ್ ಎಜುಕೇಶನ್ (NCFE) ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಆರ್ಥಿಕ ಸಾಕ್ಷರತಾ ಜಿಲ್ಲಾ ಸಂಯೋಜಕರು ಗೋವಿಂದರಾಜು ಶಾಲೆಯ ವಿದ್ಯಾರ್ಥಿಗಳಿಗೆ ಆರ್ಥಿಕ ಶಿಕ್ಷಣದ ಮಹತ್ವ ಮತ್ತು ಆರ್ಥಿಕ ನಿರ್ವಹಣೆ, ಬ್ಯಾಂಕಿನ ಬಗ್ಗೆ ಪ್ರಾಯೋಗಿಕ ತಿಳುವಳಿಕೆ, ಬಾಲ್ಯದಿಂದಲೇ ಭವಿಷ್ಯಕ್ಕಾಗಿ ಉಳಿತಾಯ ಮನೋಭಾವನೆ ರೂಢಿಸಿಕೊಳ್ಳುವುದು, ತಂತ್ರಜ್ಞಾನದಾರಿತ ಬ್ಯಾಂಕಿಂಗ್ ವ್ಯವಸ್ಥೆ ಬಳಕೆ ಮತ್ತು ಸುರಕ್ಷತೆ, ಸೈಬರ್ ವಂಚನೆ ಪ್ರಕರಣಗಳು ಮತ್ತು ಪರಿಹಾರ, ಸಾಮಾಜಿಕ ಭದ್ರತಾ ಯೋಜನೆ ಬಗ್ಗೆ ತಿಳುವಳಿಕೆ, ಸಾರ್ವಜನಿಕ ಕುಂದುಕೊರತೆ ನಿವಾರಣಾ ಅಧಿಕಾರಿಗಳ ಸಹಾಯ ಮತ್ತು ಸದುಪಯೋಗ ಕುರಿತು ಮಾಹಿತಿ ನೀಡಿದರು.
ಕೆನರಾ ಬ್ಯಾಂಕ್ ನ ಮ್ಯಾನೇಜರ್ ರಾಹುಲ್ ರವರು ಮಾತನಾಡಿ ಬ್ಯಾಂಕಗಳು ಸಾರ್ವಜನಿಕರ ಹಿತಾಸಕ್ತಿ ದೃಷ್ಠಿಯಿಂದ ಕೆಲಸ ಮಾಡುತ್ತವೆ. ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ನಾವು ಸಹಾಯ ಮಾಡುತ್ತೇವೆ ಬ್ಯಾಂಕಿನ ಬಗ್ಗೆ ಹೆಚ್ಚಿನ ಜ್ಞಾನ ಪಡೆದು ವ್ಯವಹರಿಸುವುದು ಸೂಕ್ತ ಎಂದು ತಿಳಿಸಿದರು.
ಸಹ ಶಿಕ್ಷಕರಾದ ಮನುರವರು ಹಣಕಾಸು ಶಿಕ್ಷಣ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಕಾರ್ಯಕ್ರಮ, ಇದನ್ನು ಭವಿಷ್ಯಕ್ಕಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದ ಅತಿಥಿಗಳಾಗಿ
ರಾಹುಲ್ ಕೆನರಾ ಬ್ಯಾಂಕ್ ಮ್ಯಾನೇಜರ್ ಬರಗಿ,
ಮಹೇಶ್ ಎಸ್.ಡಿ.ಎಮ್.ಸಿ ಅಧ್ಯಕ್ಷರು,ಪ್ರಭಾರಿ ಮುಖ್ಯ ಶಿಕ್ಷಕರು ರವಿಕುಮಾರ್, ಸಹ ಶಿಕ್ಷಕರು ಮನು,
ಗೋವಿಂದರಾಜು ಆರ್ಥಿಕ ಸಂಯೋಜಕರು,
ವಸಂತ ಆರ್ಥಿಕ ಸಹಾಯಕರು ಧಾನ್ ಫೌಂಡೇಶನ್ ಭಾಗವಹಿಸಿದ್ದರು.
