ವಿಜಯಪುರ ಜಿಲ್ಲೆ ತಾಳಿಕೋಟೆ ತಾಲ್ಲೂಕಿನ ತುರಕನಗೇರಿ ಗ್ರಾಮದಲ್ಲಿ ಶ್ರೀ ಸಿದ್ದಗಂಗಾ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ. ಶ್ರೀ ಶ್ರೀ ಶಿವಕುಮಾರ್ ಸ್ವಾಮೀಜಿಯವರ 118ನೇ ಜಯಂತ್ಯೋತ್ಸವ ಹಾಗೂ 7ನೇ ವಾರ್ಷಿಕೋತ್ಸವ ಸಮಾರಂಭ ಜರುಗಿತು.
ಈ ಸಂಸ್ಥೆಯ ಅಧ್ಯಕ್ಷರು ಶಂಶುದ್ದೀನ್ ಇನಾಮ್ ದಾರ್ ಇವರು ಅನಾಥ ಹಾಗೂ ನಿರ್ಗತಿಕ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಊಟ ನೀಡಿ ನೂರಾರು ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದರು. ದಿವ್ಯ ಸಾನಿಧ್ಯ ಅಲ್ಲಾಜ್ ಸೖಯ್ಯದಶಾ ಮುಸ್ತಫಾ ಖಾದ್ರಿ ಮಳ್ಕೇಡ್. ಷ. ಬ್ರ. ಶ್ರೀ ಸಿದ್ದರಾಮ ಶಿವಾಚಾರ್ಯರು ಹಿರೇಮಠ ಕಲಕೇರಿ, ಜನಾಬ ಸೈಯ್ಯದ ಶಕೀಲ್ ಅಹ್ಮದ ಖಾಜಿ ಇಸ್ಲಾಂ ಧರ್ಮದ ಗುರುಗಳು ತಾಳಿಕೋಟಿ, ಷ. ಬ್ರ. ಶ್ರೀ ಗುರುಲಿಂಗ ಶಿವಾಚಾರ್ಯರು ಹಿರೇಮಠ ಗುಂಡುಕನಾಳ ಆಶೀರ್ವಚನ ನೀಡಿದರು. ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕರಾದ ರಾಜು ಗೌಡ ಪಾಟೀಲ್ ಇವರು ಶ್ರೀ ಸಿದ್ದಗಂಗಾ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಂಶುದ್ದೀನ್ ಇನಾಮ್ದಾರ್ ಇವರು ಅನಾಥ ಮಕ್ಕಳಿಗೆ ನಿರ್ಗತಿ ಮಕ್ಕಳಿಗೆ ಶಿಕ್ಷಣವನ್ನು ನೀಡಿ ಅವರಿಗೆ ವಸತಿ ಊಟದ ವ್ಯವಸ್ಥೆ ಮಕ್ಕಳಿಗೆ ನೀಡಿ ಮತ್ತು ಅವರ ತಾಯಿ ತಂದೆಯ ಆಶೀರ್ವಾದದಿಂದ ನಿರ್ಗತೆ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿರುವ ಅವರಿಗೆ ಆ ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದ ಸದಾ ಅವರ ಮೇಲೆ ಇರಲಿ ಎಂದು ಹಾರೈಸಿದರು. ಡಾ. ಪ್ರಭುಗೌಡ ಲಿಂಗದಳ್ಳಿ ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ ಇವರು ಈ ಸಂದರ್ಭದಲ್ಲಿ ಈಗಿನ ಕಾಲದಲ್ಲಿ ಒಂದು ಸಂಸ್ಥೆ ಗಳಿಸಬೇಕಪ್ಪ ಅಂದರೆ ಸಾಕಷ್ಟು ದುಡ್ಡು ಬೇಕು ಆದರೆ ಇಲ್ಲಿ ಏನಾಗಿದೆ ಅಂದರೆ ಸ್ವಾಮೀಜಿಯವರ ಅವರ ಆಶೀರ್ವಾದದಲ್ಲಿ ಶಂಶುದ್ದೀನ್ ಇನಾಮ್ದಾರ್ ಅನಾಥ ಹಾಗೂ ನಿರ್ಗತೆ ಮಕ್ಕಳಿಗೆ ಉಚಿತ ಶಿಕ್ಷಣ ಉಚಿತ ವಸತಿ, ಉಚಿತ ಊಟ ನೀಡಿ ಆ ಮಕ್ಕಳಿಗೆ ಒಳ್ಳೆಯ ಭವಿಷ್ಯ ನೀಡಿದ ಇವರಿಗೆ ಆ ಸಿದ್ದಗಂಗಾ ಸ್ವಾಮೀಜಿಯವರ ಆಶೀರ್ವಾದ ಹಾಗೂ ಎಲ್ಲಾ ಪರಮಪೂಜ್ಯರ ಆಶೀರ್ವಾದ ಸದಾ ಅವನ ಮೇಲೆ ಇರಲಿ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಪ್ರಭು ಬೈರಿ, ಶ್ರೀನಾಥ್ ಪೂಜಾರಿ ರಾಜ್ಯ ಉಪಾಧ್ಯಕ್ಷರು ಕಾಂಗ್ರೆಸ್ ಪ್ರಚಾರ ಸಮಿತಿ ಬೆಂಗಳೂರು, ಸಿದ್ದು ಬುಳ್ಳಾ ಬಿಜೆಪಿ ಮುಖಂಡರು, ಪುಟ್ಟ ಬಾಲಕಿ ವಿದ್ಯಾರ್ಥಿ 5,000 ವಚನಗಳನ್ನು ಹೇಳುವಂತವಳು ಆ ಬಾಲಕಿಗೆ ಎಲ್ಲಾ ಪೂಜ್ಯರಿಂದ ಆಶೀರ್ವಾದ ನಡೆಯಿತು. ಈ ಕಾರ್ಯಕ್ರಮದಲ್ಲಿ ಅನೇಕ ಪರಮಪೂಜ್ಯರು ಹಾಗೂ ರಾಜಕಾರಣಿಗಳು ಹಾಗೂ ಎಲ್ಲಾ ಶಿಕ್ಷಕ ವರ್ಗದವರು ಹಾಗೂ ಪೋಲಿಸ್ ವರ್ಗದವರು ಹಾಗೂ ಎಲ್ಲಾ ಗ್ರಾಮಸ್ಥರು ಹಾಗೂ ಪಾಲಕರು ವಿದ್ಯಾರ್ಥಿಗಳು ಶಿಕ್ಷಕರು ಗುರುಮಾತೆ ಹಾಗೂ ಈ ಸಂಸ್ಥೆಯ ಅಧ್ಯಕ್ಷರಾದಂತ ಪೀರ್ ಮಹ್ಮದ ಇನಾಮ್ದಾರ್, ಎಲ್ಲಾ ಸಂಸ್ಥೆಯ ಕಾರ್ಯಕ್ರಮಗಳು ಹೆಚ್ಚಿನ ರೀತಿಯಲ್ಲಿ ಅದ್ದೂರಿಯಿಂದ ನಿರ್ಗತಿಕ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಿದ ಕಾರ್ಯದರ್ಶಿಗಳಾದಂತ ಶಂಸುದ್ದೀನ್ ಇನಾಮ್ದಾರ್ ಮಕ್ಕಳ ಮೇಲೆ ಬಹಳ ಪ್ರೀತಿ ಅನಾಥ ಹಾಗೂ ನಿರ್ಗತ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದೇ ನನ್ನ ಕರ್ತವ್ಯ ಮಕ್ಕಳನ್ನು ಒಂದು ಉನ್ನತ ಮಟ್ಟಕ್ಕೆ ಬೆಳೆಸುವುದೇ ನನ್ನ ಸೇವೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಎಲ್ಲಾ ಗ್ರಾಮಸ್ಥರು ಸೇರಿದಂತೆ ಈ ಕಾರ್ಯಕ್ರಮ ಅದ್ದೂರಿಯಿಂದ ನಡೆಯಿತು.
ವರದಿಗಾರರು : ನಜೀರ್ ಅಹ್ಮದ್ ಚೋರಗಸ್ತಿ, ತಾಳಿಕೋಟೆ
