ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಎ.ಪಿ.ಎಂ.ಸಿ ಆವರಣದಲ್ಲಿ ತುಮಕೂರು ಹಾಲು ಒಕ್ಕೂಟದ ವತಿಯಿಂದ ಕ್ಷೀರ ಭವನ ಕಟ್ಟಡ ನಿರ್ಮಾಣ ಮಾಡಿದ್ದು ಇದರ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದ ಸಹಕಾರ ಸಚಿವರಾದ ಸಹಕಾರ ರತ್ನ ಶ್ರೀಯುತ ಕೆ ಎನ್ ರಾಜಣ್ಣನವರಿಗೆ, ನಬಾರ್ಡ್ ನಿಂದ ಕರ್ನಾಟಕಕ್ಕೆ ಶೇಕಡ 50 ರಷ್ಟು ಕಡಿಮೆ ಸಾಲ ಮಂಜೂರು ಮಾಡಿದ್ದು ರೈತರಿಗೆ ಬಡ್ಡಿ ರಹಿತ ಸಾಲ ನೀಡಲು ತೊಂದರೆಯಾಗುತ್ತಿರುವುದನ್ನು ಸಹಕಾರ ಸಚಿವರು ಈಗಾಗಲೇ ತಿಳಿಯಪಡಿಸಿದ್ದು ಆದರೂ ತಿಪಟೂರು ತಾಲೂಕಿಗೆ ವಿಶೇಷ ಪ್ರಕರಣವಾಗಿ ಪರಿಗಣಿಸಿ ಹಣಕಾಸಿನ ಹೊಂದಾಣಿಕೆಯೊಂದಿಗೆ ಮುಂದಿನ ದಿನಗಳಲ್ಲಿ ತಿಪಟೂರು ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಹೊಸ ಸದಸ್ಯ ರೈತರಿಗೆ ಕೆಸಿಸಿ ಸಾಲ ಬಿಡುಗಡೆ ಮಾಡಿಕೊಡಬೇಕೆಂದು ಕರಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಕೆ. ಆರ್. ದೇವರಾಜು ರವರು ತಾಲೂಕಿನ ಕೃಷಿ ಸಹಕಾರ ಸಂಘಗಳ ಪರವಾಗಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಮುಂದಿನ ದಿನಗಳಲ್ಲಿ ಅನುಕೂಲ ಮಾಡಿಕೊಡುವ ಬಗ್ಗೆ ಭರವಸೆ ನೀಡಿದರು.
ಸಮಾರಂಭದಲ್ಲಿ ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾಕ್ಟರ್ ಜಿ ಪರಮೇಶ್ವರ್, ತಿಪಟೂರು ಶಾಸಕರಾದ ಕೆ. ಷಡಕ್ಷರಿ, ತುಮಲ್ ಅಧ್ಯಕ್ಷರಾದ ವೆಂಕಟೇಶ್ ತಿಪಟೂರು ತಾಲೂಕಿನಿಂದ ತುಮಕೂರು ಹಾಲು ಒಕ್ಕೂಟಕ್ಕೆ ಸತತವಾಗಿ ನಾಲ್ಕು ಬಾರಿ ಆಯ್ಕೆಯಾದ ಮಾದಿಹಳ್ಳಿ ಪ್ರಕಾಶ್ ಸೇರಿದಂತೆ ಗಣ್ಯರು ಹಾಜರಿದ್ದರು.
ವರದಿ – ಸಿಡ್ಲೆಹಳ್ಳಿ ಮನು
